ಹಿರಿಯ ನಾಗರಿಕರ ಪ್ರಯಾಣ ದರದಲ್ಲಿ ರಿಯಾಯಿತಿ : ಭಾರತೀಯ ರೈಲ್ವೇ ನೀಡಿದ ಮಾಹಿತಿ
ಮೂಲಗಳ ಪ್ರಕಾರ, ರೈಲು ಪ್ರಯಾಣ ದರದಲ್ಲಿ ಪ್ರಯಾಣಿಕರಿಗೆ ನೀಡಲಾದ ರಿಯಾಯಿತಿಯನ್ನು ಮತ್ತೆ ಆರಂಭಿಸುವುದಿಲ್ಲ ಎನ್ನಲಾಗಿದೆ.
ಬೆಂಗಳೂರು : ಹಿರಿಯ ನಾಗರಿಕರಿಗೆ ನೀಡಲಾಗಿದ್ದ ಪ್ರಯಾಣ ದರದ ರಿಯಾಯಿತಿಯನ್ನು ರೈಲ್ವೆ ಇಲಾಖೆ ಕರೋನಾ ಅವಧಿಯಲ್ಲಿ ನಿಲ್ಲಿಸಿತ್ತು. ಇದಾದ ನಂತರ ವಿವಿಧ ಸಂಘಟನೆಗಳು ಪ್ರಯಾಣ ದರದ ರಿಯಾಯಿತಿಯನ್ನು ಮತ್ತೆ ಆರಂಭಿಸುವಂತೆ ಒತ್ತಾಯಿಸಿದ್ದವು. ಅಷ್ಟೇ ಅಲ್ಲ, ರೈಲು ಪ್ರಯಾಣ ದರದಲ್ಲಿ ರಿಯಾಯಿತಿ ವಿಚಾರವನ್ನೂ ಸಂಸತ್ತಿನಲ್ಲಿ ವಿರೋಧ ಪಕ್ಷದ ಸಂಸದರು ಪ್ರಸ್ತಾಪಿಸಿದ್ದರು. ಆದರೆ, ಈಗ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಂಡಿದೆ. ಮೂಲಗಳ ಪ್ರಕಾರ, ರೈಲು ಪ್ರಯಾಣ ದರದಲ್ಲಿ ಪ್ರಯಾಣಿಕರಿಗೆ ನೀಡಲಾದ ರಿಯಾಯಿತಿಯನ್ನು ಮತ್ತೆ ಆರಂಭಿಸುವುದಿಲ್ಲ ಎನ್ನಲಾಗಿದೆ.
ಬೇಡಿಕೆಯನ್ನು ಆಲಿಸಿದ ನಂತರ ನಿರ್ಧಾರ :
ಹಲವು ಸಂಘಟನೆಗಳು ಮತ್ತು ಸಮಿತಿ ಸದಸ್ಯರು ಇಟ್ಟ ಬೇಡಿಕೆಗಳ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿವೆ ಎಂದು ತಿಳಿಸಲಾಗಿದೆ. ಕರೋನಾ ನಂತರ ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಪ್ರಯಾಣಿಕರಿಗೆ ರೈಲ್ವೆ ಪ್ರಯಾಣ ದರದಲ್ಲಿ ವಿನಾಯಿತಿ ನೀಡದಿರಲು ಎಂದು ರೈಲ್ವೆ ನಿರ್ಧರಿಸಿದೆ. ಪ್ರಯಾಣ ದರದ ಮೇಲೆ ಸಬ್ಸಿಡಿಯನ್ನು ಮೊದಲಿನಂತೆಯೇ ನೀಡಲಾಗುತ್ತದೆ ಆದರೆ ಇದರ ಹೊರತುಪಡಿಸಿ ಹೆಚ್ಚುವರಿ ರಿಯಾಯಿತಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ : 2024 ಆರಂಭದಲ್ಲಿಯೇ ಮತ್ತೆ ಸರ್ಕಾರಿ ನೌಕರರ ವೇತನ ಹೆಚ್ಚಳ : 50%-51% ಡಿಎ, ಸ್ಯಾಲರಿ ಏರಿಕೆ
55 ರೂ.ಗೆ 100 ರೂಪಾಯಿಯ ಟಿಕೆಟ್:
ಇತ್ತೀಚೆಗೆ ರೈಲ್ವೆ ಸಚಿವರು ಕಾರ್ಯಕ್ರಮವೊಂದರಲ್ಲಿ 100 ರೂ.ಗಳ ಟಿಕೆಟ್ ಅನ್ನು ಪ್ರಯಾಣಿಕರಿಗೆ 55 ರೂ.ಗೆ ನೀಡುತ್ತಿರುವುದಾಗಿ ಹೇಳಿದ್ದರು. ರೈಲ್ವೇ ಈಗಾಗಲೇ ಸಬ್ಸಿಡಿ ನೀಡುತ್ತಿದೆ ಎಂದು ಹೇಳಿದ್ದರು. ಇದರ ಹೊರತಾಗಿ ಹಿರಿಯ ನಾಗರಿಕರು ಸೇರಿದಂತೆ ಇತರ ವರ್ಗಗಳಿಗೆ 2020 ರ ಮೊದಲು ನೀಡಲಾದ ರಿಯಾಯಿತಿಗಳನ್ನು ಭವಿಷ್ಯದಲ್ಲಿ ಮತ್ತೆ ಆರಂಭಿಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಕರೋನಾ ಮೊದಲು, ಮಾರ್ಚ್ 2020 ರವರೆಗೆ, 58 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ ಪ್ರಯಾಣ ದರದಲ್ಲಿ ರಿಯಾಯಿತಿಯನ್ನು ನೀಡಲಾಯಿತು.
ಈ ರಿಯಾಯಿತಿಯನ್ನು ರೈಲ್ವೇ 2020 ರಿಂದಲೇ ನಿಲ್ಲಿಸಿದೆ. ಸಂಸದೀಯ ಸಮಿತಿಗಳು, ವಿವಿಧ ಸಂಘಟನೆಗಳು ಮತ್ತು ಸಂಸದರು ಈ ವಿನಾಯಿತಿಯನ್ನು ಮತ್ತೆ ಆರಂಭಿಸಲು ಶಿಫಾರಸು ಮಾಡಿತ್ತು. ಆದರೆ, ಕ್ಯಾನ್ಸರ್ ಮೊದಲಾದ ಕೆಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಪ್ರಯಾಣಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿಯನ್ನು ಮುಂದುವರಿಸಲು ರೈಲ್ವೆ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು ಎಂದು ರೈಲ್ವೆ ಹೇಳಿದೆ.
ಇದನ್ನೂ ಓದಿ : Adike Rate Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.