7th Pay Commission : ಫಿಟ್‌ಮೆಂಟ್ ಫ್ಯಾಕ್ಟರ್ ಬದಲಾವಣೆಗಾಗಿ ಬಹಳ ದಿನಗಳಿಂದ ಕಾಯುತ್ತಿರುವ ಸರ್ಕಾರಿ ನೌಕರರಿಗೆ ಇಲ್ಲಿದೆ ಸಂತಸದ ಸುದ್ದಿ. ಫಿಟ್‌ಮೆಂಟ್ ಫ್ಯಾಕ್ಟರ್ ಬದಲಾವಣೆಯಾದ ತಕ್ಷಣ  ಸ್ಯಾಲರಿ ಸ್ಟ್ರಕ್ಚರ್ ನಲ್ಲಿ ಕೂಡಾ ದೊಡ್ಡ ಮಠದ ಬದಲಾವಣೆಯಾಗಲಿದೆ. ಮೂಲಗಳ ಪ್ರಕಾರ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಏಳನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವು ಹೆಚ್ಚಾಗಲಿದೆ. 


COMMERCIAL BREAK
SCROLL TO CONTINUE READING

ನೆರವೇರುವುದು ಬಹು ದಿನದ ಬೇಡಿಕೆ : 
ಇದಲ್ಲದೆ, ಫಿಟ್‌ಮೆಂಟ್ ಅಂಶದ ಬಗ್ಗೆ ಸರ್ಕಾರವು ಸೆಪ್ಟೆಂಬರ್‌ನಲ್ಲಿಯೇ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ. ಇದರಲ್ಲಿ ಬದಲಾವಣೆಯಾದ ತಕ್ಷಣ ನೌಕರರ ಕನಿಷ್ಠ ಮೂಲ ವೇತನ ಹೆಚ್ಚಳವಾಗಲಿದೆ. ಫಿಟ್ಮೆಂಟ್ ಅಂಶದಲ್ಲಿ ಬದಲಾವಣೆಯಾದ ತಕ್ಷಣ, ಅದರ ಪರಿಣಾಮವು ಸಂಪೂರ್ಣ ಸಂಬಳದ ಮೇಲೆ ಕಾಣಿಸುತ್ತದೆ. ಫಿಟ್‌ಮೆಂಟ್ ಅಂಶಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ ಅಂತ್ಯದೊಳಗೆ ಸಭೆ ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ. 


ಇದನ್ನೂ ಓದಿ : Vegetable Price: ಗ್ರಾಹಕರಿಗೆ ಶಾಕ್: ಟೊಮ್ಯಾಟೋ ಬೆಲೆ ಗಗನಮುಖಿ: ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ


ವೇತನದಲ್ಲಿ ಫಿಟ್‌ಮೆಂಟ್ ಅಂಶದ ಪ್ರಮುಖ ಪಾತ್ರ  :
ಕೇಂದ್ರ ನೌಕರರಿಗೆ ಶೇಕಡಾ 2.57 ರಷ್ಟು ಫಿಟ್‌ಮೆಂಟ್ ಅಂಶವನ್ನು ನೀಡಲಾಗುತ್ತಿದೆ. ಇದನ್ನು ಸೆಪ್ಟೆಂಬರ್‌ನಲ್ಲಿ 3.68 ಪಟ್ಟು ಹೆಚ್ಚಿಸಬಹುದು ಎನ್ನಲಾಗಿದೆ. ಕೇಂದ್ರ ನೌಕರರ ವೇತನವನ್ನು ನಿರ್ಧರಿಸುವಲ್ಲಿ ಫಿಟ್‌ಮೆಂಟ್ ಅಂಶವು ಪ್ರಮುಖ ಪಾತ್ರ ವಹಿಸುತ್ತದೆ. ಫಿಟ್‌ಮೆಂಟ್ ಅಂಶದಲ್ಲಿ ಬದಲಾವಣೆಯಾದರೆ ವೇತನದ ಮೇಲೇ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಇದರ ಆಧಾರದ ಮೇಲೆ ನೌಕರರ ಮೂಲ ವೇತನ ಕಿದಾ ಹೆಚ್ಚಾಗಲಿದೆ.


ಫಿಟ್‌ಮೆಂಟ್ ಅಂಶವನ್ನು 2.57 ರಿಂದ 3.68 ಕ್ಕೆ ಹೆಚ್ಚಿಸಿದರೆ  ನೌಕರರ ಕನಿಷ್ಠ ಮೂಲ ವೇತನ 18 ಸಾವಿರದಿಂದ 26 ಸಾವಿರ ರೂ.ಗೆ ಏರಿಕೆಯಾಗಲಿದೆ. ಈ ಹಿಂದೆ 2017ರಲ್ಲಿ ಸರ್ಕಾರ ಮೂಲ ವೇತನ ಹೆಚ್ಚಿಸಲಾಗಿತ್ತು.  ಇದಾದ ನಂತರ ಅದರಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿರಲಿಲ್ಲ. ಪ್ರಸ್ತುತ ಕೇಂದ್ರ ನೌಕರರು ಕನಿಷ್ಠ ವೇತನ 18 ಸಾವಿರ ರೂ. ಗರಿಷ್ಠ ವೇತನ 66,900 ರೂ. ವೇತನ ಪಡೆಯುತ್ತಿದ್ದಾರೆ. 


ಇದನ್ನೂ ಓದಿ : Gold Price Today : ಮತ್ತೆ ಏರಿಕೆ ಕಂಡ ಬಂಗಾರದ ಬೆಲೆ , ಬೆಳ್ಳಿ ಕೂಡಾ ದುಬಾರಿ


 



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.