No pension No gratuity : ಈ ಬಾರಿ  ಕೋಟ್ಯಂತರ ನೌಕರರು ಮತ್ತು ಪಿಂಚಣಿದಾರರು ಸರ್ಕಾರದ ಪ್ರಕಟಣೆಗಾಗಿ ಕಾಯಬೇಕಾಗಿದೆ. ಈ ಹಿಂದೆಯೂ ಕೇಂದ್ರ ನೌಕರರಿಗೆ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಸರ್ಕಾರ ನೀಡಿರುವ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದರೆ, ನೌಕರರ ಪಾಲಿಗೆ ಅದು ದುಬಾರಿಯಾಗಿ ಪರಿಣಮಿಸಬಹುದು. ಅಷ್ಟೇ ಅಲ್ಲ ನಿವೃತ್ತಿಯ ನಂತರ ಪಿಂಚಣಿ ಮತ್ತು ಗ್ರಾಚ್ಯುಟಿಯಿಂದ  ವಂಚಿತರಾಗಬೇಕಾಗಬಹುದು.


COMMERCIAL BREAK
SCROLL TO CONTINUE READING

ಸರ್ಕಾರದ ಆದೇಶ ಕೇಂದ್ರ ನೌಕರರಿಗೆ ಅನ್ವಯ : 
ಉದ್ಯೋಗಿಯು ಕೆಲಸದ ಸಮಯದಲ್ಲಿ ತಮ್ಮ ಕೆಲಸದ ಪ್ರತಿ ನಿರ್ಲಕ್ಷ್ಯ ವಹಿಸಿದರೆ, ನಿವೃತ್ತಿಯ ನಂತರ, ಆ ನೌಕರನಿಗೆ ಸಿಗಬೇಕಾದ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ನಿಲ್ಲಿಸಲು ಸೂಚನೆಗಳನ್ನು ನೀಡಲಾಗಿದೆ. ಈ ಆದೇಶವು ಕೇಂದ್ರ ನೌಕರರಿಗೆ ಅನ್ವಯಿಸುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ವಿವಿಧ ರಾಜ್ಯ ಸರ್ಕಾರಗಳು ಕೂಡಾ ಜಾರಿಗೆ ತರುವ ನಿರೀಕ್ಷೆಯಿದೆ.


ಇದನ್ನೂ ಓದಿ : Edible Oil Price: ಮತ್ತೆ ಇಳಿಕೆಯಾಗಲಿದೆ ಖಾದ್ಯ ತೈಲ ಬೆಲೆ!


ಹೊರ ಬಿದ್ದಿದೆ ಸರ್ಕಾರದ ಆದೇಶ : 
ಕೇಂದ್ರ ನಾಗರಿಕ ಸೇವೆಗಳ ನಿಯಮ 2021ರ ಅಡಿಯಲ್ಲಿ ಸರ್ಕಾರವು ಈ ಹಿಂದೆ ಅಧಿಸೂಚನೆಯನ್ನು ಹೊರಡಿಸಿದೆ. CCS ನಿಯಮ 2021ರ ನಿಯಮ 8 ಅನ್ನು ಸರ್ಕಾರ ಬದಲಾಯಿಸಿದೆ. ಅದಕ್ಕೆ ಹೊಸ ನಿಬಂಧನೆಗಳನ್ನು ಸೇರಿಸಿದೆ. ಕೇಂದ್ರ ನೌಕರರು ತಮ್ಮ ಕೆಲಸದ ಅವಧಿಯಲ್ಲಿ ಯಾವುದೇ ಗಂಭೀರ ಅಪರಾಧ ಅಥವಾ ನಿರ್ಲಕ್ಷ್ಯ ತೋರಿದರೆ, ನಿವೃತ್ತಿಯ ನಂತರ ಅವರ ಗ್ರಾಚ್ಯುಟಿ ಮತ್ತು ಪಿಂಚಣಿಯನ್ನು ನಿಲ್ಲಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಕ್ರಮ ಕೈಗೊಂಡಿರುವ ಸರ್ಕಾರ, ಬದಲಾದ ನಿಯಮದ ಮಾಹಿತಿಯನ್ನು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಕಳುಹಿಸಿದೆ.ಅಷ್ಟೇ ಅಲ್ಲ, ತಪ್ಪಿತಸ್ಥ ನೌಕರರ ಮಾಹಿತಿ ಪಡೆದು ಅವರ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಈ ನಿಯಮದ ಬಗ್ಗೆ ಸರ್ಕಾರ ತುಂಬಾ ಕಟ್ಟುನಿಟ್ಟಾಗಿದೆ. 


ಇದನ್ನೂ ಓದಿ :  Inflation: ಕಳೆದ ಮೂರು ವರ್ಷಗಳಲ್ಲಿಯೇ ಅತಿ ಕನಿಷ್ಠ ಮಟ್ಟಕ್ಕೆ ಜಾರಿಗೆ ಹಣದುಬ್ಬರ


ಕ್ರಮ ಕೈಗೊಳ್ಳುವವರು ಯಾರು ? : 
- ನಿವೃತ್ತ ಉದ್ಯೋಗಿಗಳ ನೇಮಕಾತಿ ಪ್ರಾಧಿಕಾರದಲ್ಲಿರುವ ಅಧ್ಯಕ್ಷರು ಗ್ರಾಚ್ಯುಟಿ ಅಥವಾ ಪಿಂಚಣಿಯನ್ನು ತಡೆಹಿಡಿಯುವ ಹಕ್ಕನ್ನು ಹೊಂದಿರುತ್ತಾರೆ.
- ನಿವೃತ್ತಿಯಾಗುವ ಉದ್ಯೋಗಿ ನೇಮಕಗೊಂಡಿರುವ ಸಂಬಂಧಿತ ಸಚಿವಾಲಯ ಅಥವಾ ಇಲಾಖೆಯೊಂದಿಗೆ ಸಂಬಂಧ ಹೊಂದಿರುವ  ಕಾರ್ಯದರ್ಶಿಗಳು, ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ತಡೆಹಿಡಿಯುವ ಹಕ್ಕನ್ನು ಹೊಂದಿರುತ್ತಾರೆ.
–ಒಬ್ಬ ಉದ್ಯೋಗಿ ಆಡಿಟ್ ಮತ್ತು ಅಕೌಂಟ್ಸ್ ಇಲಾಖೆಯಿಂದ ನಿವೃತ್ತರಾಗಿದ್ದರೆ, ತಪ್ಪಿತಸ್ಥ ಉದ್ಯೋಗಿಗಳ ನಿವೃತ್ತಿಯ ನಂತರ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ತಡೆಹಿಡಿಯುವ ಹಕ್ಕನ್ನು ಸಿಎಜಿ ಹೊಂದಿದೆ.


ಹೇಗೆ ಕ್ರಮ ಕೈಗೊಳ್ಳಲಾಗುವುದು ? :
- ನಿಯಮದ ಪ್ರಕಾರ, ಕೆಲಸದ ಸಮಯದಲ್ಲಿ ನೌಕರರ ವಿರುದ್ಧ ಯಾವುದೇ ಇಲಾಖಾ ಅಥವಾ ನ್ಯಾಯಾಂಗ ಕ್ರಮವನ್ನು ತೆಗೆದುಕೊಂಡರೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಚಾರವನ್ನು ತಿಳಿಸುವುದು ಅಗತ್ಯವಾಗಿರುತ್ತದೆ.
- ನಿವೃತ್ತಿಯ ನಂತರ ನೌಕರನು ಒಪ್ಪಂದದ ಮೇಲೆ ಪುನಃ ನೇಮಕಗೊಂಡರೆ, ಅದೇ ನಿಯಮಗಳು ಅವನಿಗೂ ಅನ್ವಯಿಸುತ್ತವೆ.
-ನೌಕರನು ನಿವೃತ್ತಿಯ ನಂತರ ಪಿಂಚಣಿ ಅಥವಾ ಗ್ರಾಚ್ಯುಟಿಯನ್ನು ಪಡೆದಿದ್ದು, ನಂತರ ಆತ ತಪ್ಪಿತಸ್ಥ ಎನ್ನುವುದು ಸಾಬೀತಾದರೆ ಆತ ಪಡೆದಿದ್ದ  ಪಿಂಚಣಿ ಅಥವಾ ಗ್ರಾಚ್ಯುಟಿಯ ಪೂರ್ಣ ಅಥವಾ ಭಾಗಶಃ ಪ್ರಮಾಣವನ್ನು ಮರುಪಡೆಯುವ ಅವಕಾಶ ಸರ್ಕಾರಕ್ಕೆ ಇರುತ್ತದೆ. 


ಇದನ್ನೂ ಓದಿ : ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ನೀಡುವ ಬ್ಯಾಂಕ್ ಗಳು ಇವು !


ನಿಯಮಗಳ ಪ್ರಕಾರ, ಆದೇಶವನ್ನು ನೀಡುವ ಮೊದಲು ಯಾವುದೇ ಪ್ರಾಧಿಕಾರವು ಕೇಂದ್ರ ಲೋಕಸೇವಾ ಆಯೋಗದಿಂದ ಸಲಹೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ತಿಂಗಳಿಗೆ 9000 ರೂಪಾಯಿಗಿಂತ ಕಡಿಮೆ ಪಿಂಚಣಿ ಪಡೆಯುವ ನೌಕರರಿಂದ ಈ ಸೌಲಭ್ಯವನ್ನು ವಾಪಾಸ್ ಪಡೆಯುವಂತಿಲ್ಲ ಎನ್ನಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.