PM Kisan Nidhi 15th Instalment : ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಕೋಟ್ಯಂತರ ಫಲಾನುಭವಿಗಳು 15ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ನೀವು ಸಹ ಈ ಕಂತಿಗಾಗಿ ಕಾಯುತ್ತಿದ್ದರೆ, ಮೊದಲು ಸ್ಕೀಮ್‌ನಲ್ಲಿನ ದೊಡ್ಡ ಅಪ್ಡೇಟ್ ಅನ್ನು ತಿಳಿದುಕೊಳ್ಳಿ. ಹೌದು, ಸರ್ಕಾರವು ಉದ್ಯೋಗಿಗಳು ಮತ್ತು ಆದಾಯ ತೆರಿಗೆ ಪಾವತಿಸುವ ರೈತರಿಂದ ಹಣವನ್ನು ವಾಪಸ್ ತೆಗೆದುಕೊಳ್ಳುವ ಅಭಿಯಾನವನ್ನು ಪ್ರಾರಂಭಿಸಿದೆ. ಅಂತಹ ರೈತರು ನಿಗದಿತ ಕಾಲಮಿತಿಯೊಳಗೆ ಹಣವನ್ನು ಹಿಂದಿರುಗಿಸದಿದ್ದರೆ ಅಂತಹ ರೈತರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಈ ಯೋಜನೆಯಡಿ, ಒಬ್ಬ ರೈತನಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ 6000 ರೂ.ಯನ್ನು ನೀಡಲಾಗುವುದು. 


COMMERCIAL BREAK
SCROLL TO CONTINUE READING

31 ಮಾರ್ಚ್ 2023 ರಿಂದ  ವಸೂಲಿ ಅಭಿಯಾನ : 
ವಾಸ್ತವವಾಗಿ, ಇತ್ತೀಚೆಗೆ ಸರ್ಕಾರ ಆಡಿಟ್ ನಡೆಸಿತ್ತು. ದೇಶಾದ್ಯಂತ ಪಿಎಂ ಕಿಸಾನ್‌ನ ಕೋಟ್ಯಂತರ ಫಲಾನುಭವಿಗಳು ಯೋಜನೆಯ ಲಾಭವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಇದರಲ್ಲಿ ಬಹಿರಂಗವಾಗಿದೆ.  ಪಿಎಂ ಕಿಸಾನ್ ಲಾಭವನ್ನು ಪಡೆಯುವ ಅನೇಕ ರೈತರು ಸರ್ಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವರು ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಮಾರ್ಚ್ 31, 2023 ರಿಂದ ಸರ್ಕಾರಿ ಉದ್ಯೋಗ ಹೊಂದಿರುವ ರೈತರಿಂದ ಹಣವನ್ನು ವಾಪಸ್ ಪಡೆಯುವ ಅಭಿಯಾನ ನಡೆಯುತ್ತಿದೆ. ಇದಲ್ಲದೆ, ಹೆಚ್ಚು ಹೆಚ್ಚು ಫಲಾನುಭವಿಗಳನ್ನು ಯೋಜನೆಯೊಂದಿಗೆ ಸಂಪರ್ಕಿಸಲು ಪಂಚಾಯತ್ ಮಟ್ಟದಲ್ಲಿ ಇ-ಕೆವೈಸಿ ಮಾಡಲಾಗುತ್ತಿದೆ.


ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ಸಾಲ ಹೊರೆಯಾಗಿದೆಯೇ? ಇದನ್ನು ತಪ್ಪಿಸಲು ಇಲ್ಲಿದೆ ಸುಲಭ ಮಾರ್ಗ


ಇ-ಕೆವೈಸಿ ಹೊಂದಿರುವುದು ಅಗತ್ಯ : 
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ನಿಧಿ ಅಡಿಯಲ್ಲಿ ರೈತರಿಗೆ ವಾರ್ಷಿಕವಾಗಿ 8000 ರೂಪಾಯಿಗಳನ್ನು ನೀಡಲು ಮುಂದಾಗಿದೆ ಎನ್ನುವ ವರದಿ ಆನೆಕ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಪಿಎಂ ಕಿಸಾನ್ ನಿಧಿ ಅಡಿಯಲ್ಲಿ, ಜುಲೈ 27 ರಂದು ಖಾತೆದಾರರಿಗೆ 14 ನೇ ಕಂತನ್ನು ಪಾವತಿಸಲಾಗಿದೆ. 15 ನೇ ಕಂತು ಪಡೆಯಲು, ಕೆಲವು ಪ್ರಮುಖ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಇದಕ್ಕಾಗಿ ನಿಮ್ಮ ಇ-ಕೆವೈಸಿ ಹೊಂದಿರುವುದು ಅವಶ್ಯಕ.


15 ನೇ ಕಂತಿನ ನೋಂದಣಿ ಹೇಗೆ? : 
1. ಮೊದಲನೆಯದಾಗಿ ನೀವು PM ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.
2. ಇದರ ನಂತರ ನೀವು 'New Farmer Registration'  ಮೇಲೆ ಕ್ಲಿಕ್ ಮಾಡಬೇಕು.
3. ಇಲ್ಲಿ ನೀವು ನಿಮ್ಮ ಭಾಷೆಯನ್ನು ಆಯ್ಕೆ ಮಾಡಬಹುದು.
4. ಇದರ ನಂತರ Rular ಮತ್ತು  Urban Farmer Registration ನೋಂದಣಿಯಲ್ಲಿ ಸರಿಯಾದ ಆಯ್ಕೆಯನ್ನು ಆರಿಸಿ.
5. ಈಗ ಆಧಾರ್ ಕಾರ್ಡ್ ಸಂಖ್ಯೆಯನ್ನು ಬರೆಯಿರಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇಲ್ಲಿ ನೀವು ನಿಮ್ಮ ರಾಜ್ಯವನ್ನು ಆಯ್ಕೆ ಮಾಡಬೇಕು.
7. ನಿಮ್ಮ ಮೊಬೈಲ್‌ನಲ್ಲಿ OTP ಬರುತ್ತದೆ, ಅದನ್ನು ಫಾರ್ಮ್‌ನಲ್ಲಿ ಭರ್ತಿ ಮಾಡಬೇಕು. OTP ಬಂದಿಲ್ಲ ಎಂದಾದರೆ  resend otp ಅನ್ನು  ಕ್ಲಿಕ್ ಮಾಡಿ. 
8. ಇದರ ನಂತರ, ಕ್ಯಾಪ್ಚಾ ಕೋಡ್ ಅನ್ನು ಬರೆಡು, ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.


ಇದನ್ನೂ ಓದಿ : ಸರ್ಕಾರಿ ನೌಕರರ ವೇತನದಲ್ಲಿ 9000 ರೂ.ಗಳಷ್ಟು ಹೆಚ್ಚಳ ! ವೇತನ ಪಾವತಿಯಲ್ಲಿನ ಹೊಸ ಟ್ವಿಸ್ಟ್ ಇಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.