PM Kisan Latest News : ಮೋದಿ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13 ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ರೈತರು ಗಮನಿಸಲೇಬೇಕಾದ ಸುದ್ದಿ ಇದಾಗಿದೆ. ಈ ಬಾರಿ ಅಂತಿಮ ಪಟ್ಟಿಯಿಂದ ಅನರ್ಹರ ರೈತರ ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಅದರಲ್ಲಿ ಅರ್ಹರನ್ನು ಮಾತ್ರ ಸೇರಿಸಬೇಕು ಎಂಬ ತೀರ್ಮಾನದಲ್ಲಿದೆ. ಪಿಎಂ ಕಿಸಾನ್‌ನ 12ನೇ ಕಂತನ್ನು ಅಕ್ಟೋಬರ್ 17 ರಂದು ದೇಶಾದ್ಯಂತ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಕಳೆದ ಬಾರಿ 8.42 ಕೋಟಿ ರೈತರು ಈ ಕಂತಿನ ಲಾಭ ಪಡೆದಿದ್ದರು. ಈ ಹಿಂದೆ 11 ಕೋಟಿಗೂ ಹೆಚ್ಚು ರೈತರು ಯೋಜನೆಯ ಲಾಭ ಪಡೆದಿದ್ದರು.


COMMERCIAL BREAK
SCROLL TO CONTINUE READING

ಫೆಬ್ರವರಿ 20 ರಂದು ಹಣ ಖಾತೆಗೆ!


ಈ ಬಾರಿ ಎಲ್ಲಾ ಅರ್ಹ ರೈತರಿಗೆ ಈ ಯೋಜನೆಯ ಲಾಭವನ್ನು ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ. 13ನೇ ಕಂತಿನ ಹಣವನ್ನು ಹೋಳಿ ಹಬ್ಬದ ಮೊದಲು ಅಂದರೆ ಮಾರ್ಚ್ 8 ರೊಳಗೆ ರೈತರ ಖಾತೆಗೆ ವರ್ಗಾಯಿಸಲು ಸರ್ಕಾರ ಈಗಾಗಲೇ ನಿರ್ಧರಿಸಿದೆ. ಹೀಗಿರುವಾಗ ಈ ಬಾರಿ 2023ರ ಫೆ.20ರಂದು ರೈತರ ಖಾತೆಗೆ ಹಣ ಬರಲಿದೆ ಎಂದು ಮಾಧ್ಯಮ ವರದಿಯಲ್ಲಿ ಹೇಳಿಕೊಳ್ಳಲಾಗುತ್ತಿದೆ. ಆದರೆ ಈ ಕಂತಿಗೆ ಇ-ಕೆವೈಸಿ ಪರಿಶೀಲನೆಯನ್ನು ಮಾಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ಯಾರಾದರೂ ಇ-ಕೆವೈಸಿ ಪರಿಶೀಲನೆಯನ್ನು ಮಾಡದಿದ್ದರೆ, ಅವರ ಖಾತೆಗೆ ಹಣ ಬರುವುದಿಲ್ಲ.


ಇದನ್ನೂ ಓದಿ : Today Gold Price : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ!


ಇ-ಕೆವೈಸಿ ಪರಿಶೀಲನೆಗೆ ಕೊನೆಯ ದಿನಾಂಕ


ಇದಕ್ಕೂ ಮುನ್ನ ದೊಡ್ಡ ಮಾಹಿತಿ ನೀಡಿದ ಸರಕಾರಿ ಅಧಿಕಾರಿಗಳು ಹೋಳಿ (2023)ಕ್ಕೂ ಮುನ್ನ ರೈತರ ಖಾತೆಗೆ 2000 ರೂ.ಗಳನ್ನು ಕಂತಿನ ರೂಪದಲ್ಲಿ ಕಳುಹಿಸಲಾಗುವುದು ಎಂದರು. ಇದಕ್ಕಾಗಿ, ಅರ್ಹ ಫಲಾನುಭವಿಗಳು ಫೆಬ್ರುವರಿ 10 ರೊಳಗೆ ಬ್ಯಾಂಕ್ ಖಾತೆಯ ಇ-ಕೆವೈಸಿ ಪರಿಶೀಲನೆಯನ್ನು ಪಡೆಯುವುದು ಅವಶ್ಯಕವಾಗಿದೆ, ಅದು ಇಂದು ಕೊನೆಯ ದಿನಾಂಕವಾಗಿದೆ. ಯೋಜನೆಯ ಅಡಿಯಲ್ಲಿ, ಜನವರಿ 2023 ರ ವೇಳೆಗೆ, 67 ಪ್ರತಿಶತ ಇ-ಕೆವೈಸಿ ಮತ್ತು 88 ಪ್ರತಿಶತ ಬ್ಯಾಂಕ್ ಖಾತೆಗಳನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆ ಎಂದು ತಿಳಿಸಲಾಗಿದೆ.


ಇದನ್ನೂ ಓದಿ : Interest Rate Hike : ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್! ಬಡ್ಡಿದರ ಹೆಚ್ಚಿಸಿದ ಬ್ಯಾಂಕ್‌ಗಳು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.