Bitcoin Price: 20,000 ಸಾವಿರ USDಗಿಂತ ಕೆಳಗೆ ಕುಸಿದ ಬಿಟ್‍ಕಾಯಿನ್!
ಕಳೆದ 5 ದಿನದಲ್ಲಿ ಬಿಟ್‍ಕಾಯಿನ್ ದರದಲ್ಲಿ ಶೇ.14.61 ರಷ್ಟು ಕುಸಿತ ಕಂಡಿದ್ದರೆ, ಕಳೆದ 1 ತಿಂಗಳಿನಲ್ಲಿ ಹೂಡಿಕೆದಾರರ ಅರ್ಧದಷ್ಟು ಸಂಪತ್ತು(ಶೇ.37.25ರಷ್ಟು ಕುಸಿತ) ಕರಗಿಹೋಗಿದೆ.
ಲಂಡನ್: 2020ರ ಡಿಸೆಂಬರ್ ನಂತರ ಮೊದಲ ಬಾರಿಗೆ ಬಿಟ್ ಕಾಯಿನ್ 20 ಸಾವಿರ ಅಮೆರಿಕನ್ ಡಾಲರ್‍ಗಿಂತಲೂ ಕಳಗೆ ಕುಸಿತ ಕಂಡಿದೆ. ಪರಿಣಾಮ ಲಕ್ಷಾಂತರ ಹೂಡಿಕೆದಾರರು ಕೈಸುಟ್ಟುಕೊಂಡಿದ್ದಾರೆ. ಕ್ರಿಪ್ಟೋಕರೆನ್ಸಿಗಳಲ್ಲಿನ ಮಾರಾಟವು ಹೆಚ್ಚಾಗುತ್ತಿರುವ ಹೊಸ ಸಂಕೇತವಾಗಿ ಬಿಟ್‍ಕಾಯಿನ್ ದರದಲ್ಲಿ ಭಾರೀ ಕುಸಿತ ಕಂಡುಬಂದಿದೆ.
ವರದಿಗಳ ಪ್ರಕಾರ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿರುವ ಬಿಟ್‍ಕಾಯಿನ್ ತನ್ನ ಪ್ರಮುಖ ಮಿತಿಗಿಂತ ಕಡಿಮೆಯಾಗಿದೆ. ಕಳೆದ 5 ದಿನದಲ್ಲಿ ಬಿಟ್‍ಕಾಯಿನ್ ದರದಲ್ಲಿ ಶೇ.14.61 ರಷ್ಟು ಕುಸಿತ ಕಂಡಿದ್ದರೆ, ಕಳೆದ 1 ತಿಂಗಳಿನಲ್ಲಿ ಹೂಡಿಕೆದಾರರ ಅರ್ಧದಷ್ಟು ಸಂಪತ್ತು(ಶೇ.37.25ರಷ್ಟು ಕುಸಿತ) ಕರಗಿಹೋಗಿದೆ.
ಇದನ್ನೂ ಓದಿ: Edible Oil Price : ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರೀ ಇಳಿಕೆ .. !
ಸದ್ಯದ ಮಾಹಿತಿ ಪ್ರಕಾರ ಬಿಟ್‍ಕಾಯಿನ್ 18,825.60 ಅಮೆರಿಕನ್ ಡಾಲರ್‍ನಂತೆ ವಹಿವಾಟು ನಡೆಸುತ್ತಿದೆ. ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ ಸದ್ಯ 1 ಬಿಟ್‍ಕಾಯಿನ್ ಬೆಲೆ 14,63,445.87 ರೂ. ಇದೆ. ಬಿಟ್‍ಕಾಯಿನ್ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿರುವುದರಿಂದ ಹೂಡಿಕೆದಾರರು ಪ್ರತಿದಿನವೂ ನಷ್ಟ ಅನುಭವಿಸುವಂತಾಗಿದೆ. ಕೊನೆಯ ಬಾರಿಗೆ ಬಿಟ್‍ಕಾಯಿನ್ 2020ರ ನವೆಂಬರ್‍ನಲ್ಲಿ ದೊಡ್ಡಮಟ್ಟದ ಕುಸಿತ ಕಂಡಿತ್ತು.
ಬಿಟ್‍ಕಾಯಿನ್ ತನ್ನ ಸಾರ್ವಕಾಲಿಕ ಗರಿಷ್ಟ ಮಟ್ಟ 69 ಸಾವಿರ ಅಮೆರಿಕನ್ ಡಾಲರ್‍ನಿಂದ ಶೇ.70ರಷ್ಟು ಕುಸಿತ ಕಂಡಿದೆ. ಮತ್ತೊಂದು ಪ್ರಮುಖ ಕ್ರಿಪ್ಟೋಕರೆನ್ಸಿಯಾಗಿರುವ Ethereum ಕೂಡ ಭಾರೀ ಕುಸಿತ ಕಂಡಿದೆ. ಹಣಕಾಸು ಮಾರುಕಟ್ಟೆಯಲ್ಲಿನ ವ್ಯಾಪಕ ಪ್ರಕ್ಷುಬ್ಧತೆಯು ಕ್ರಿಪ್ಟೋಕರೆನ್ಸಿ ಉದ್ಯಮದ ಮೇಲೆ ನೇರ ಪರಿಣಾಮ ಉಂಟಾಗುತ್ತದೆ.
ಇದನ್ನೂ ಓದಿ: Swiss Bank: ಸ್ವಿಸ್ ಬ್ಯಾಂಕಿನಲ್ಲಿದೆ ಭಾರತೀಯರ 30,600 ಕೋಟಿ ರೂ. ಹಣ
ಬಿಟ್‍ಕಾಯಿನ್ ಮಾರುಕಟ್ಟೆ ಮೌಲ್ಯ ಸತತವಾಗಿ ಕುಸಿತ ಕಾಣುತ್ತಿರುವುದರಿಂದ ಹೂಡಿಕೆದಾರರು ಅಪಾಯಕ್ಕೆ ಸಿಲುಕಿದ್ದಾರೆ. ಹೆಚ್ಚುತ್ತಿರುವ ಆರ್ಥಿಕ ಹಿಂಜರಿತದ ಭಯದಿಂದ ಕ್ರಿಪ್ಟೋ ಮಾರುಕಟ್ಟೆ ಮೌಲ್ಯದಲ್ಲಿ ಕುಸಿತ ಕಾಣುತ್ತಿದೆ. ಇದರಿಂದ ಲಕ್ಷಾಂತರ ಹೂಡಿಕೆದಾರರ ಸಂಪತ್ತು ಪ್ರತಿದಿನವೂ ಕರುಗುತ್ತಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.