ನವದೆಹಲಿ: ವಿಮಾನದಲ್ಲಿ ಆಹಾರ ದುಬಾರಿ ಎಂಬುದು ಗೊತ್ತಿರುವ ವಿಚಾರ. ಆದರೆ, ರೈಲು ಪ್ರಯಾಣದ ವೇಳೆ ಪ್ರಯಾಣಿಕರ ಆಹಾರಕ್ಕೆ ಸಬ್ಸಿಡಿ ನೀಡುವ ಚಿಂತನೆ ಇದೆ. ನೀವು ಇದೇ ನಂಬಿಕೆಯನ್ನು ಹೊಂದಿದ್ದರೆ ಆಘಾತಕ್ಕೆ ಒಳಗಾಗುತ್ತೀರಿ. ಯಾಕಂದ್ರೆ ಕೇವಲ ಒಂದೇ ಒಂದು ಕಪ್ ಚಹಾಕ್ಕೆ ಪ್ರಯಾಣಿಕರಿಗೆ 70 ರೂ. ವಸೂಲಿ ಮಾಡಲಾಗಿದೆ. ಈ ಬಗ್ಗೆ ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ರಶೀದಿ ಹಂಚಿಕೊಂಡಿದ್ದು, ಬಿಲ್‍ನಲ್ಲಿ 20 ರೂ. ಚಹಾಗೆ 50 ರೂ. ಸೇವಾ ಶುಲ್ಕ ವಿಧಿಸಲಾಗಿದೆ.


COMMERCIAL BREAK
SCROLL TO CONTINUE READING

ಜೂನ್ 28ರಂದು ದೆಹಲಿಯಿಂದ ಭೋಪಾಲ್‌ಗೆ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಟ್ಯಾಕ್ಸ್ ಇನ್‌ವಾಯ್ಸ್‌ಗಳ ಫೋಟೋಗಳು ಟ್ವಿಟರ್ ಸೇರಿದಂತೆ ಇತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರೈಲ್ವೆ ಇಲಾಖೆ ಪ್ರಕಾರ, ಪ್ರಯಾಣಿಕರು ತಮ್ಮ ಎಕ್ಸ್‌ಪ್ರೆಸ್ ರೈಲಿನ ಟಿಕೆಟ್ ಕಾಯ್ದಿರಿಸುವ ಮುಂಚಿತವಾಗಿ ಯಾವುದೇ ಆಹಾರ ಆರ್ಡರ್ ಮಾಡದಿದ್ದರೆ ಬಳಿಕ ಮಾಡುವ ಪ್ರತಿ ಆರ್ಡ್‍ಗೆ 50 ರೂ. ಸೇವಾಶುಲ್ಕವನ್ನು ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ: ಈ ನಂಬರ್‌ ಇರೋ ಹಳೆ ನೋಟು ನಿಮ್ಮಲ್ಲಿದ್ರೆ ಕುಳಿತಲ್ಲೇ ಲಕ್ಷ ಗಳಿಸೋದು ಪಕ್ಕಾ!


ಭಾರತೀಯ ರೈಲ್ವೆ 2018ರಲ್ಲಿಯೆ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ. ಇದರ ಪ್ರಕಾರ, ಟಿಕೆಟ್ ಬುಕ್ ಮಾಡುವ ವೇಳೆ ಅಡುಗೆ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳದ ಪ್ರಯಾಣಿಕರು ಮತ್ತು ಆನ್‌ಬೋರ್ಡ್‌ನಲ್ಲಿ ಊಟ ಖರೀದಿಸಲು ನಿರ್ಧರಿಸಿದರೆ ಅಧಿಸೂಚನೆಯ ಜೊತೆಗೆ ಪ್ರತಿ ಊಟಕ್ಕೆ 50 ರೂ. ಹೆಚ್ಚುವರಿ ಮೊತ್ತ ಮತ್ತು ಊಟಕ್ಕೆ ಅಡುಗೆ ಶುಲ್ಕವನ್ನು IRCTCಯ ಆನ್-ಬೋರ್ಡ್ ಮೇಲ್ವಿಚಾರಕರು ವಿಧಿಸುತ್ತಾರೆ.  


7th Pay Commission: ಸರ್ಕಾರಿ ನೌಕರರ ಡಿಎ ಯಲ್ಲಿ ಹೆಚ್ಚಳ.! ವೇತನದಲ್ಲೂ ಭರ್ಜರಿ ಏರಿಕೆ


ಮೊದಲು ಶತಾಬ್ದಿ ಮತ್ತು ರಾಜಧಾನಿಯಂತಹ ರೈಲುಗಳಲ್ಲಿ ಆಹಾರ Complimentaryಯಾಗಿ ಸಿಗುತ್ತಿತ್ತು. ಆದರೆ, ಈಗ ಪ್ರಯಾಣಿಕರಿಗೆ ಉಚಿತ ಊಟದ ಸೌಲಭ್ಯ ಇಲ್ಲದಂತಾಗಿದೆ. ಹೀಗಾಗಿ ಪ್ರಯಾಣಿಕರು ಹೆಚ್ಚಿನ ಹಣ ಪಾವತಿಸಿ ತಮ್ಮ ಊಟವನ್ನು ಆರ್ಡರ್ ಮಾಡಬಹುದು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ