Debit Card: ನೀವು ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ ನಿಮಗಾಗಿ ಇಲ್ಲಿಗೆ ಮಹತ್ವದ ಮಾಹಿತಿ. 2023ರ ಅಕ್ಟೋಬರ್ 31ರ ನಂತರ ಬಿ‌ಓ‌ಐ ಬ್ಯಾಂಕ್ ಡೆಬಿಟ್ ಕಾರ್ಡ್ ನಿಷ್ಪ್ರಯೋಜಕವಾಗಲಿದೆ. ಹಾಗಾಗಿ, ನೀವು ನವೆಂಬರ್ 1, 2023ರ ಮೊದಲು ಈ ಕೆಲಸ ಪೂರ್ಣಗೊಳಿಸಲು ವಿಫಲರಾದರೆ ನಿಮ್ಮ ಕಾರ್ಡ್‌ನಿಂದ ಯಾವುದೇ ವಹಿವಾಟು ಮಾಡಲು ಅಥವಾ ಎಟಿಎಂನಿಂದ ಹಣವನ್ನು ಹಿಂಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. 


COMMERCIAL BREAK
SCROLL TO CONTINUE READING

ನೀವು ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ, 2023ರ ನವೆಂಬರ್ 1ರ ಮೊದ್ಲು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ, ನಿಗದಿತ ದಿನಾಂಕದ ಬಳಿಕ ನಿಮ್ಮ ಡೆಬಿಟ್ ಕಾರ್ಡ್ ಅನ್ನು ಬಳಸಲು ನಿಮಗೆ ಸಾಧ್ಯವಾಗದೇ ಇರಬಹುದು. 


ಇದನ್ನೂ ಓದಿ- ಇನ್ನು ಏರಿಕೆಯಾಗುವುದಿಲ್ಲ ಪೆಟ್ರೋಲ್, ಡೀಸೆಲ್ ಬೆಲೆ ! ಇದಕ್ಕೆ ಕಾರಣವೂ ಇದೆ


ಈ ಕುರಿತಂತೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿರುವ ಬ್ಯಾಂಕ್ ಆಫ್ ಇಂಡಿಯಾ (BOI), "ಆತ್ಮೀಯ ಗ್ರಾಹಕರೇ, ನಿಯಂತ್ರಕ ಮಾರ್ಗಸೂಚಿಗಳ ಪ್ರಕಾರ, ಡೆಬಿಟ್ ಕಾರ್ಡ್ ಸೇವೆಗಳನ್ನು ಪಡೆಯಲು ಮಾನ್ಯವಾದ ಮೊಬೈಲ್ ಸಂಖ್ಯೆಯು ಕಡ್ಡಾಯವಾಗಿದೆ. ನೀವು ನಿಮ್ಮ ಡೆಬಿಟ್ ಕಾರ್ಡ್ ಸೇವೆಗಳನ್ನು ಬಂದ್ ಮಾಡುವುದನ್ನು ತಪ್ಪಿಸಲು ದಯವಿಟ್ಟು 31.10.2023 ರ ಮೊದಲು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು/ನೋಂದಣಿ ಮಾಡಲು ನಿಮ್ಮನ್ನು ವಿನಂತಿಸಲಾಗಿದೆ" ಎಂದು ತಿಳಿಸಿದೆ. 


ಇದನ್ನೂ ಓದಿ- ಪಿಎಂ ಕಿಸಾನ್ 15ನೇ ಕಂತಿನ ಹಣ ಖಾತೆಗೆ ವರ್ಗಾಯಿಸಲು ಫಿಕ್ಸ್ ಆಯ್ತು ಮುಹೂರ್ತ, ಈ ದಿನ ಬರಲಿದೆ ಹಣ!


ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಈ ರೀತಿ ಮಾಡಿ: 
ಆನ್‌ಲೈನ್‌ನಲ್ಲಿ ಅಥವಾ ಎಟಿಎಂ ಮೂಲಕ ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ನೇರವಾಗಿ ಶಾಖೆಗೆ ಹೋಗಿ ಈ ಕೆಲಸವನ್ನು ಮಾಡಬಹುದು. ಇದಕ್ಕಾಗಿ, ನೀವು ಬ್ಯಾಂಕ್ ಶಾಖೆಗೆ ಹೋಗಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಬದಲಾವಣೆಯ ಫಾರ್ಮ್ ಅನ್ನು ಭರ್ತಿ ಮಾಡಿ,  ಅಲ್ಲಿ ಕೇಳಿರುವ ಮಾಹಿತಿಗಳನ್ನು ನೀಡಿ. ಇದರೊಂದಿಗೆ ಪಾಸ್‌ಬುಕ್ ಮತ್ತು ಆಧಾರ್ ಕಾರ್ಡ್‌ನ ಫೋಟೋ ಪ್ರತಿಯನ್ನು ಸಹ ಸಲ್ಲಿಸಬೇಕಾಡುತ್ತದೆ. ನಿಗದಿತ ಸಮಯದಲ್ಲಿ ಈ ಕೆಲಸವನ್ನು ಪೂರ್ಣಗೊಳಿಸುವುದರಿಂದ ನೀವು ಯಾವುದೇ ಅಡೆತಡೆಗಳಿಲ್ಲದೇ  ನಿಮ್ಮ ಡೆಬಿಟ್ ಕಾರ್ಡ್ ಅನ್ನು ಬಳಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.