Third AC Economy (3E) : ದೂರ ಪ್ರಯಾಣಕ್ಕೆ ಹೆಚ್ಚಿನವರು ನೆಚ್ಚಿಕೊಳ್ಳುವುದು ರೈಲು ಪ್ರಯಾಣವನ್ನು. ರೈಲಿನಲ್ಲಿ ಪ್ರಯಾಣ ಬೆಳೆಸಿದರೆ ಅಷ್ಟೊಂದು ಸುಸ್ತು ಅನ್ನಿಸುವುದಿಲ್ಲ.ಅದರಲ್ಲಿಯೂ ಹಿರಿಯರು, ಮಕ್ಕಳು ಜೊತೆಯಲ್ಲಿ ಇದ್ದರೆ ಅವರಿಗೆ ರೈಲಿನಲ್ಲಿ ಪ್ರಯಾಣ ಮಾಡುವುದೇ ಸುಖಕರ.ರೈಲು ಪ್ರಯಾಣ ಮಾಡುವಾಗ ಸಾಮಾನ್ಯವಾಗಿ ಸ್ಲೀಪರ್ ಕೋಚ್ ಗಳನ್ನೇ ಬುಕ್ ಮಾಡುತ್ತಾರೆ. ಆದರೆ ಎಲ್ಲಾ ಸಂದರ್ಭದಲ್ಲಿ ಸಾಮಾನ್ಯ ಸ್ಲೀಪರ್ ನಲ್ಲಿ ಪ್ರಯಾಣ ಸರಿ ಬರುವುದಿಲ್ಲ.ಆಗ AC ಟಿಕೆಟ್ ಬುಕ್ ಮಾಡುವ ಯೋಚನೆ ಬರುತ್ತದೆ.ಆದರೆ Ac ಅಂದ ತಕ್ಷಣ ಅದರ ಟಿಕೆಟ್ ದರ ಹೆಚ್ಚು.ಹಾಗಾಗಿ ಎಸಿ ಟಿಕೆಟ್ ಬುಕ್ ಮಾಡಲು ಹಿಂದೆ ಮುಂದೆ ಯೋಚಿಸುತ್ತೇವೆ.   


COMMERCIAL BREAK
SCROLL TO CONTINUE READING

ಆದರೆ ಈಗ ಕಡಿಮೆ ಬೆಲೆಯಲ್ಲಿ ಕೂಡಾ ಎಸಿ ಬೋಗಿಯಲ್ಲಿ ಹಾಯಾಗಿ ಮಲಗಿಕೊಂಡು ಪ್ರಯಾಣ ಬೆಳೆಸಬಹುದು.ಅದು ಕೂಡಾ ಥರ್ಡ್ ಎಸಿಗಿಂತ ಕಡಿಮೆ ದರದಲ್ಲಿ. ಅದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. 


ಇದನ್ನೂ ಓದಿ :  Arecanut Price in Karnataka: ಚಿತ್ರದುರ್ಗ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ


ರೈಲಿನಲ್ಲಿರುವ ಎಲ್ಲಾ ಕೋಚ್‌ಗಳು ಒಂದೇ ರೀತಿ ಇರುವುದಿಲ್ಲ.ಸಾಮಾನ್ಯವಾಗಿ ರೈಲು SL, 1A, 2A, 3A, 25 ಮತ್ತು CC ವರ್ಗದ ಕೋಚ್‌ಗಳನ್ನು ಹೊಂದಿರುತ್ತದೆ. ಆದರೆ ಕೆಲವು ರೈಲುಗಳಲ್ಲಿ Third AC Economy ಕ್ಲಾಸ್ ಬೋಗಿಗಳು ಕೂಡಾ ಇರುತ್ತವೆ.ಈ ಕೋಚ್ ಅನ್ನು ಎಂ ಕೋಡ್ ಎಂದು ಕರೆಯಲಾಗುತ್ತದೆ.ಈ ವರ್ಗದ ಟಿಕೆಟ್ ದರ ಥರ್ಡ್ ಎಸಿಗಿಂತ ಕಡಿಮೆಯಿದ್ದರೂ ಥರ್ಡ್ ಎಸಿಯಲ್ಲಿ ಸಿಗುವ ಎಲ್ಲಾ  ಸೌಲಭ್ಯಗಳು ಇಲ್ಲಿ ಸಿಗುತ್ತವೆ.ಥರ್ಡ್ ಎಸಿಯ ಎಕಾನಮಿ ಕ್ಲಾಸ್ ಅನ್ನು ರೈಲ್ವೇ 2021 ರಲ್ಲಿ ಪ್ರಾರಂಭಿಸಿತು.


3E ಬೆಲೆ ಎಷ್ಟು? :
ಈ ಕೋಚ್ ಅನ್ನು ಇನ್ನೂ ಎಲ್ಲಾ ರೈಲುಗಳಲ್ಲಿ ಅಳವಡಿಸಲಾಗಿಲ್ಲ.ಆದರೆ ನೀವು ರೈಲಿನ ಟಿಕೆಟ್ ಬುಕ್ ಮಾಡುವಾಗ ನೀವು ಪ್ರಯಾಣ ಬೆಳೆಸುವ ರೈಲಿನಲ್ಲಿ ಈ ಬೋಗಿ ಇದೆಯೇ ಎಂದು ಚೆಕ್ ಮಾಡಿ ಟಿಕೆಟ್ ಬುಕ್ ಮಾಡಿದರೆ ಕಡಿಮೆ ಬೆಲೆಯಲ್ಲಿ ಎಸಿಯಲ್ಲಿ ಪ್ರಯಾಣ ಬೆಳೆಸುವುದು ಸಾಧ್ಯವಾಗುತ್ತದೆ. 


ಇದನ್ನೂ ಓದಿ :  ಬೇಕರಿ - ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೇಟ್, ಗುಟ್ಕಾ ಮಾರಾಟ ಮಾಡಲು ಬಿಬಿಎಂಪಿ ಬ್ರೇಕ್


3E ಮತ್ತು 3AC ನಡುವಿನ ವ್ಯತ್ಯಾಸವೇನು? : 
ಥರ್ಡ್ ಎಸಿ ಎಕಾನಮಿ ಕೋಚ್‌ನ ಬರ್ತ್ ಅಗಲ ಸ್ವಲ್ಪ ಕಡಿಮೆಯಾಗಿದೆ.ಏಕೆಂದರೆ 3AC ಕೋಚ್‌ನಲ್ಲಿನ ಬರ್ತ್‌ಗಳ ಸಂಖ್ಯೆ 72 ಆದರೆ 3AC ಎಕಾನಮಿ ಬರ್ತ್‌ಗಳ ಸಂಖ್ಯೆ 80 ಕ್ಕಿಂತ ಹೆಚ್ಚು. ಥರ್ಡ್ ಎಸಿ ಎಕಾನಮಿ ಕೋಚ್‌ನಲ್ಲಿ,ಪ್ರಯಾಣಿಕರು ಥರ್ಡ್ ಎಸಿಯಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಾರೆ.ಬೆಡ್‌ಶೀಟ್ ಮತ್ತು ಹೊದಿಕೆಯ ಹೊರತಾಗಿ,ಇದು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.ಥರ್ಡ್  ಎಸಿ ಎಕಾನಮಿ ಕೋಚ್‌ನಲ್ಲಿ ಬಾಟಲ್ ಸ್ಟ್ಯಾಂಡ್, ರೀಡಿಂಗ್ ಲೈಟ್ ಮತ್ತು ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆಯೂ ಲಭ್ಯವಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.