ನವದೆಹಲಿ : Budget 2021: ಈ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಇದು ಈ ದಶಕದ ಮೊದಲ ಬಜೆಟ್. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 9ನೇ ಬಜೆಟ್. ಕರೋನಾ ಕಾಲದ ಮಧ್ಯೆ ಇಂದಿನ ಬಜೆಟ್ ಮಂಡನೆಯಾಗಿದೆ. ಕರೋನಾ ಕಾರಣದಿಂದ ಹಳಿ ತಪ್ಪಿದ ಭಾರತದ ಅರ್ಥವ್ಯವಸ್ಥೆಯನ್ನು ಸುಧಾರಿಸಲು ಬೇಕಾಗುವ ಕ್ರಮಗಳತ್ತ ಕೇಂದ್ರ ಗಮನ ಹರಿಸಿದೆ. ಮೊದಲ ಬಾರಿಗೆ ಕಾಗದ ರಹಿತನ  ಬಜೆಟ್ ಮಂಡನೆಯಾಗಿದೆ. ಜನರ ಅನುಕೂಲಕ್ಕಾಗಿಯೂ ಈ ಬಾರಿ ಆಪ್ ವೊಂದನ್ನು ಬಿಡುಗಡೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

 ಕರೋನಾ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು :
ಕರೋನಾ (Coronavirus) ಹಿನ್ನೆಲೆಯಲ್ಲಿ ಇಂದಿನ ಮುಂಗಡದಲ್ಲಿ ಆರೋಗ್ಯಕ್ಕೆ (Health) ಹೆಚ್ಚಿನ ಆದ್ಯತೆ ನೀಡಲಾಗಿದೆ . ಆರೋಗ್ಯ ಕ್ಷೇತ್ರಕ್ಕೆ 2 ಲಕ್ಷ 23 ಸಾವಿರ ಕೋಟಿ ನಿಧಿ ಮೀಸಲಿಡಲಾಗಿದೆ. ಕರೋನಾ ಲಸಿಕೆಗಾಗಿ (Corona Vaccine) 35 ಸಾವಿರ ಕೋಟಿಯನ್ನು ಮೀಸಲಿಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಶೇ 137ರಷ್ಟು ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ. 


ಇದನ್ನೂ ಓದಿ : Budget 2021-22 Updates: ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ, ನಿರೀಕ್ಷೆಗಳೇನು?


ಪಿಎಂ ಆತ್ಮ ನಿರ್ಭರ್ ಸ್ವಾಸ್ಥ್ಯ ಭಾರತ್ ಯೋಜನೆ :
ಆತ್ಮ ನಿರ್ಭರ ಯೋಜನೆಗೂ ಮಹತ್ವ ಕೊಡಲಾಗಿದೆ. ಹೆಲ್ತ್ ಕೇರ್ (Health Care) ವಲಯದ ಬಗ್ಗೆ ಆದ್ಯತೆ ನೀಡಿರುವ ನಿರ್ಮಲಾ ಸೀತಾರಾಮನ್ (Nirmala Seetharaman), ಪಿಎಂ ಆತ್ಮ ನಿರ್ಭರ್ ಸ್ವಾಸ್ಥ ಭಾರತ್ ಯೋಜನೆ ಪ್ರಕಟಿಸಿದ್ದಾರೆ. ಈ ಯೋಜನೆಗೆ 64 ಸಾವಿ ರ ಕೋಟಿ ನಿಗದಿ ಮಾಡಲಾಗಿದೆ. 


ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಜೆಟ್ ನಲ್ಲಿ ಘೋಷಣೆಯಾದ ಯೋಜನೆಗಳು :


-15 ಹೆಲ್ತ್ ಅಮೆರ್ಜೆನ್ಸಿ ಆಪರೇಷನ್ ಸೆಂಟರ್ ಸ್ಥಾಪನೆ
-9 ಬಯೋ ಸೇಫ್ಟಿ ಲ್ಯಾಬ್ ಸ್ಥಾಪನೆ.
-- 602 ಜಿಲ್ಲೆಗಳಲ್ಲಿ ಕ್ರಿಟಿಕಲ್ ಕೇರ್ ಆಸ್ಪತ್ರೆ
- ಇಂಟರ್ಗ್ರೇಟೆಡ್ ಹೆಲ್ತ್ ಇನ್ಫಾರ್ಮೇಷನ್ ಪೋರ್ಟಲ್
-ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ
--ಜಲ ಜೀವನ್ ಯೋಜನೆ ಅರ್ಬನ್ ಯೋಜನೆ ಜಾರಿ
-112 ಜಿಲ್ಲೆಗಳಲ್ಲಿ ಪೌಷ್ಠಿಕತೆ ವೃದ್ದಿಗೆ ಆದ್ಯತೆ. 
-WHOದ ಪ್ರಾದೆಶಿಕ ಆರೋಗ್ಯ ಸಂಸ್ಥೆ ಸ್ಥಾಪನೆಗೆ ಚಿಂತನೆ
-ಸ್ವಚ್ಛ ಭಾರತ್ ಯೋಜನೆಯಡಿ ಪ್ಲಾಸ್ಟಿಕ್ ಬಳಕೆ ತಡೆಗೆ ನಿರ್ಧಾರ
-17 ಸಾವಿರ ಗ್ರಾಮೀಣ ವೆಲ್ ನೆಸ್ ಸೆಂಟರ್ ಸ್ಥಾಪನೆ
-ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಕೇಂದ್ರ ಸ್ಥಾಪನೆ
-ಹೆಲ್ತ ಮಿಷನ್ ಗೆ ಹೆಚ್ಚುವರಿ 65,180 ಕೋಟಿ
-ಮೂಲ ಸೌಕರ್ಯಕ್ಕೆ 5 ಲಕ್ಷ ಕೋಟಿ ರೂಪಾಯಿ.
-ದೇಶಾದ್ಯಂತ 75 ಸಾವಿರ ಹೆಲ್ತ್ ಸೆಂಟರ್ ಗಳ ಆರಂಭ.



ಇದನ್ನೂ ಓದಿ : Union Budget ಇತಿಹಾಸ - ಬಜೆಟ್‌ಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.