Budget 2021 : ಹಿರಿಯ ನಾಗರಿಕರಿಗೆ ನಿರ್ಮಲಾ ಸೀತಾರಾಮನ್ ಕೊಡುಗೆ : 75 ವರ್ಷ ಮೇಲ್ಪಟ್ಟವರು ಐಟಿ ರಿಟರ್ನ್ ಸಲ್ಲಿಸಬೇಕಿಲ್ಲ
ಹಿರಿಯ ನಾಗರಿಕರಿಗೆ ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಕೊಡುಗೆ ನೀಡಿದ್ದಾರೆ. ಇನ್ನು ,ಮುಂದೆ 75 ವರ್ಷ ಮೇಲ್ಪಟ್ಟವರು ಐಟಿ ರಿಟರ್ನ್ ಸಲ್ಲಿಸಬೇಕಾಗಿಲ್ಲ.
ನವದೆಹಲಿ : Budget 2021: ಈ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಇದು ಈ ದಶಕದ ಮೊದಲ ಬಜೆಟ್. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 9ನೇ ಬಜೆಟ್. ಈ ಬಾರಿ ಪ್ರತಿ ಸ್ತರದ ಜನತೆಯೂ ಬಜೆಟ್ ಮೇಲೆ ಬಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇದೀಗ 75 ವರ್ಷ ಮತ್ತು 75 ವರ್ಷ ಮೇಲ್ಪಟ್ಟವರಿಗೆ ವಿತ್ತ ಸಚಿವೆ ನಿರ್ಮಲಕಾ ಸೀತಾರಾಮನ್ ಸಿಹಿ ಸುದ್ದಿ ನೀಡಿದ್ದಾರೆ. ತೆರಿಗೆ ಪಾವತಿಯಿಂದ ಅವರಿಗೆ ವಿನಾಯಿತಿ ನೀಡಲಾಗಿದೆ.
ಹಿರಿಯ ನಾಗರಿಕರಿಗೆ ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ (Nirmala Seetharaman)ಕೊಡುಗೆ ನೀಡಿದ್ದಾರೆ. ಇನ್ನು ,ಮುಂದೆ 75 ವರ್ಷ ಮೇಲ್ಪಟ್ಟವರು ಐಟಿ ರಿಟರ್ನ್ ಸಲ್ಲಿಸಬೇಕಾಗಿಲ್ಲ. ಐಟಿ ರಿಟರ್ನ್ ಸಲ್ಲಿಸುವುದರಿಂದ ಅವರಿಗೆ ವಿನಾಯಿತಿ ನೀಡಲಾಗಿದೆ. 75 ವರ್ಷ ಮೇಲ್ಪಟ್ಟವರು ಪಿಂಚಣಿ ಅಥವಾ ಬಡ್ಡಿಯ ಹಣದಲ್ಲಿ ಜೀವನ ಸಾಗಿಸುತ್ತಿದ್ದರೆ ಅಂಥವರು ಐಟಿ ರಿಟರ್ನ್(IT return) ಸಲ್ಲಿಸಬೇಕಾಗಿಲ್ಲ. ಇದು ಹಿರಿಯ ನಾಗರೀಕರು ನಿರಾಳ ಪಡುವಂತ ವಿಚಾರವಾಗಿದೆ.
ಇದನ್ನೂ ಓದಿ : Budget 2021 : ಕೋವಿಡ್ ಎಫೆಕ್ಟ್ ಆರೋಗ್ಯ ಕ್ಷೇತ್ರಕ್ಕೆ 2 ಲಕ್ಷ 23 ಸಾವಿರ ಕೋಟಿ ನಿಧಿ ಮೀಸಲು
ಡಿವಿಡೆಂಟ್ ಪೇಮೆಂಟ್ ಗೆ ಇನ್ನು ಟಿಡಿಎಸ್ (TDS)ಪಾವತಿಸಬೇಕಿಲ್ಲ .ಮನೆ ಎಂಬುವುದು ಎಲ್ಲರ ಮೂಲಭೂತ ಅಗತ್ಯ. ಗೃಹ ಸಾಲದ ಬಡ್ಡಿದರದಲ್ಲಿ 1.5 ಲಕ್ಷ ರೂ ಕಡಿತ ಮಾಡಲಾಗಿದೆ. 2021 ಮಾರ್ಚ್ 31ರ ತನಕ ಅವಕಾಶ ಸಿಗಲಿದೆ.
ಇದೇ ವೇಳೆ, ಇಲ್ಲಯವರೆಗೆ ತೀವ್ರತರವಾದ ಪ್ರಕರಣಗಳಲ್ಲಿ, ತೆರಿಗೆ ಮರುಮೌಲ್ಯ ಮಾಪನದ ಪ್ರಕರಣಗಳನ್ನು 10 ವರ್ಷಗಳ ನಂತರ ತೆರೆಯಬಹುದಾಗಿತ್ತು. ಈಗ ಅದನ್ನು 3 ವರ್ಷಕ್ಕೆ ಇಳಿಸಲಾಗುತ್ತಿದೆ. ಒಂದು ವೇಳೆ, ಒಂದು ವರ್ಷದಲ್ಲಿ 50 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಮರೆಮಾಚುವ ಪ್ರಕರಣ ಬೆಳಕಿಗೆ ಬಂದಾಗ 10 ವರ್ಷಗಳವರೆಗೆ ಪ್ರಕರಣಗಳನ್ನು ತೆರೆಯಬಹುದಾಗಿದೆ. ಆದರೆ ಈ ಬಗ್ಗೆ ಆದಾಯ ಲಾಖೆಯ ಆಯುಕ್ತರು ನಿರ್ಧಾರ ಕೈಗೊಳ್ಳುತ್ತಾರೆ.
ಇದನ್ನೂ ಓದಿ : Union Budget 2021: 'ಪಡಿತರ ಚೀಟಿದಾರ'ರಿಗೆ 'ಗುಡ್ ನ್ಯೂಸ್'..!
1 ಕೋಟಿ ಟರ್ನ್ಓವರ್ ಮೀರಿದರೆ, ತೆರಿಗೆ ಲೆಕ್ಕಪರಿಶೋಧನೆ ಮಾಡಬೇಕಾಗಿದೆ. 95% ಡಿಜಿಟಲ್ ವಹಿವಾಟು ನಡೆಸುವವರಿಗೆ ಈ ಮಿತಿಯನ್ನು 10 ಕೋಟಿವರೆಗೆ ಹೆಚ್ಚಿಸಲಾಗಿದೆ. ಇಲ್ಲಿಯವರೆಗೆ 5 ಕೋಟಿ ಟರ್ನ್ಓವರ್ ಮಿತಿಯನ್ನು ನಿಗದಿ ಮಾಡಲಾಗಿತ್ತು.
ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದಾಯ ತೆರಿಗೆಗೆ ಸಂಬಂಧಿಸಿದಂತೆ ಯಾವುದೇ ಘೋಷಣೆ ಮಾಡಿಲ್ಲ. ಇದರೊಂದಿಗೆ ಆದಾಯ ತೆರಿಗೆಯಲ್ಲಿ ಭಾರೀ ಘೋಷಣೆ ನಿರೀಕ್ಷಿಸಿದ್ದವರಿಗೆ ನಿರಾಸೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.