Budget 2021-Stock Market Updates: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡುತ್ತಲೇ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ ಮನೆಮಾಡಿದೆ. ಸತತ ಆರು ದಿನಗಳ ಕುಸಿತದ ಬಳಿಕ ಇಂದು ಮಾರುಕಟ್ಟೆಯಲ್ಲಿ ಉತ್ತಮ ಖರೀದಿ ಮುಂದುವರೆದಿದೆ. ಸೆನ್ಸೆಕ್ಸ್ ಸುಮಾರು 1650 ಅಂಕಗಳಷ್ಟು ಏರಿಕೆ ಕಂಡು 47950 ಅಂಕಗಳ ಗಡಿ ದಾಟಿಗೆ. ಇನ್ನೊಂದೆಡೆ ನಿಫ್ಟಿ ಕೂಡ 450 ಅಂಕಗಳಷ್ಟು ಏರಿಕೆ ಕಂಡು 14100 ಅಂಕಗಳ ಮೇಲೆ ತನ್ನದಿನದ ವಹಿವಾಟು ಮುಂದುವರೆಸಿದೆ.  ಮಾರುಕಟ್ಟೆಯ ಈ ವೇಗದ ನಡುವೆ ಹೂಡಿಕೆದಾರರು ಹೂಡಿಕೆ ಕೆಲವೇ ಗಂಟೆಗಳಲ್ಲಿ 4 ಲಕ್ಷ ಕೋಟಿಗೆ ಹೆಚ್ಚಳವಾಗಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Budget 2021 : ಹಿರಿಯ ನಾಗರಿಕರಿಗೆ ನಿರ್ಮಲಾ ಸೀತಾರಮ್ ಕೊಡುಗೆ : 75 ವರ್ಷ ಮೇಲ್ಪಟ್ಟವರು ಐಟಿ ರಿಟರ್ನ್ ಸಲ್ಲಿಸಬೇಕಿಲ್ಲ


 ಈ ಬಾರಿಯ ಬಜೆಟ್ ನಿಂದ ಮಾರುಕಟ್ಟೆಯ ತುಂಬಾ ನಿರೀಕ್ಷೆಗಳಿದ್ದವು. ಕೊರೊನಾ ಮಹಾಮಾರಿಯ ಕಾರಣ ದೇಶದ ಆರ್ಥಿಕತೆ ಕುಂಠಿತಗೊಂಡ ಹಿನ್ನೆಲೆ ಮಂಡನೆಯಾಗಿರುವ ಬಜೆಟ್ ಗೆ ಮಾರುಕಟ್ಟೆ ಸೈ ಎಂದಿದೆ. ದೇಶದ ಹಳಿ ತಪ್ಪಿದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು ಸರ್ಕಾರ ಬಜೆಟ್ ನಲ್ಲಿ ಹಲವು ಘೋಷಣೆಗಳನ್ನು ಮಾಡಿದೆ. ಮೂಲಭೂತ ಸೌಕರ್ಯಾಭಿವೃದ್ಧಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ನಲ್ಲಿ ಭಾರಿ ಒತ್ತು ನೀಡಲಾಗಿದೆ.


ಇದನ್ನು ಓದಿ- Budget 2021 : ಕೋವಿಡ್ ಎಫೆಕ್ಟ್ ಆರೋಗ್ಯ ಕ್ಷೇತ್ರಕ್ಕೆ 2 ಲಕ್ಷ 23 ಸಾವಿರ ಕೋಟಿ ನಿಧಿ ಮೀಸಲು


ಕೆಲವೇ ಗಂಟೆಗಳಲ್ಲಿ ಹೂಡಿಕೆದಾರರಿಂದ 4 ಲಕ್ಷ ಕೋಟಿ ಗಳಿಕೆ
ಇದಲ್ಲದೆ ಗ್ರಾಮೀಣಾಭಿವೃದ್ಧಿಗೂ ಈ ಬಾರಿಯ ಬಜೆಟ್ ನಲ್ಲಿ ಹೆಚ್ಚನ ಘೋಷಣೆಗಳನ್ನು ಮಾಡಲಾಗಿದೆ. ಬಜೆಟ್ (Budget 2021-22) ಘೋಷಣೆಯ ಬಳಿಕವೂ ಕೂಡ ಹೂಡಿಕೆದಾರರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ. ಇಂದಿನ ವಹಿವಾಟಿನಲ್ಲಿ BSE ಲಿಸ್ಟೆಡ್ ಕಂಪನಿಗಳ ಮಾರ್ಕೆಟ್ ಕ್ಯಾಪ್ ಹೆಚ್ಚಾಗಿ  1,90,35,335.89  ಕೋಟಿ ರೂ.ಗೆ ತಲುಪಿದೆ. ಶುಕ್ರವಾರ ದಿನದಾಂತ್ಯಕ್ಕೆ ಇದು 1,86,12,644.03 ಕೋಟಿ ರೂ.ಗಳಷ್ಟಿತ್ತು. ಅಂದರೆ ಕೆಲವೇ ಗಂಟೆಗಳಲ್ಲಿ ಹೂಡಿಕೆದಾರರ ಹೂಡಿಕೆ 4 ಲಕ್ಷ ಕೋಟಿ ರೂ.ಗೂ ಅಧಿಕ ಜಿಗಿತ ಕಂಡಿದೆ.


ಇದನ್ನು ಓದಿ- ರೈಲಿನಲ್ಲಿ ಬರಲಿದೆ smart window, ಪ್ರಯಾಣಿಕರ ಪ್ರೈವೆಸಿಗೆ ರೈಲ್ವೆ ಇಲಾಖೆ ಒತ್ತು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.