Budget 2025 : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26 ರ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ಮೇಲೆ ಜನ ಸಾಮಾನ್ಯರು ನಾನಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ವಿವಿಧ ಇಲಾಖೆಗಳ ಜನರು ತಮ್ಮ ಶಿಫಾರಸುಗಳನ್ನು ಹಣಕಾಸು ಸಚಿವರು ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. 


COMMERCIAL BREAK
SCROLL TO CONTINUE READING

ಬಜೆಟ್ 2025 ನಿರೀಕ್ಷೆಗಳು: 
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿದರು. ಇಪಿಎಫ್‌ಒ ಅಡಿಯಲ್ಲಿ ಕನಿಷ್ಠ ಪಿಂಚಣಿಯನ್ನು ಐದು ಪಟ್ಟು ಹೆಚ್ಚಿಸಬೇಕೆಂದು ಕಾರ್ಮಿಕ ಸಂಘಟನೆಗಳು  ಒತ್ತಾಯಿಸಿವೆ. 8ನೇ ವೇತನ ಆಯೋಗವನ್ನು ತಕ್ಷಣವೇ ರಚಿಸಬೇಕು ಮತ್ತು 2025-26ರ ಬಜೆಟ್‌ನಲ್ಲಿ ಅತಿ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ಇದನ್ನೂ ಓದಿ : Arecanut today price: ರಾಜ್ಯದ ಯಾವ್ಯಾವ ಮಾರುಕಟ್ಟೆಯಲ್ಲಿ ಇಂದು ಅಡಿಕೆ ರೇಟ್‌ ಎಷ್ಟಿದೆ..?


ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಡೆಸಿದ ಬಜೆಟ್ ಪೂರ್ವ ಸಭೆಯಲ್ಲಿ, ಟ್ರೇಡ್ ಯೂನಿಯನ್ ಮುಖಂಡರು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ವಾರ್ಷಿಕ 10 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.  ಹಂಗಾಮಿ ನೌಕರರಿಗೆ ಸಾಮಾಜಿಕ ಭದ್ರತಾ ಯೋಜನೆಯನ್ನು ಪರಿಚಯಿಸಬೇಕು ಮತ್ತು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು. 


EPFO ಪಿಂಚಣಿ :
ಇಪಿಎಫ್ ಸದಸ್ಯರು: ಇಪಿಎಫ್ ಸದಸ್ಯರಿಗೆ ಪ್ರಸ್ತುತ ಕನಿಷ್ಠ ಇಪಿಎಸ್ ಪಿಂಚಣಿ ಎಷ್ಟು?


- ಪ್ರಸ್ತುತ, EPFO ​​ಅಡಿಯಲ್ಲಿ EPF ಸದಸ್ಯರಿಗೆ ನೌಕರರ ಪಿಂಚಣಿ ಯೋಜನೆ, 1995 ರ ಅಡಿಯಲ್ಲಿ ಕನಿಷ್ಠ ಮಾಸಿಕ 1,000 ಪಿಂಚಣಿ ನೀಡಲಾಗುತ್ತದೆ. 
- ಈ ಮೊತ್ತವನ್ನು 2014 ರಲ್ಲಿ ನಿಗದಿಪಡಿಸಲಾಗಿದೆ. 
- ಅಂದಿನಿಂದ ಈ ಮೊತ್ತದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 
- ದಿನದಿಂದ ದಿನಕ್ಕೆ ಏರುತ್ತಿರುವ ಹಣದುಬ್ಬರ ಮತ್ತು ಜೀವನ ವೆಚ್ಚದ ದೃಷ್ಟಿಯಿಂದ, ಕನಿಷ್ಠ ಪಿಂಚಣಿಯನ್ನು ಹೆಚ್ಚಿಸಲು ಖಾಸಗಿ ವಲಯದ ಉದ್ಯೋಗಿಗಳಿಂದ ನಿರಂತರ ಬೇಡಿಕೆಗಳು ಸಲ್ಲಿಕೆಯಾಗುತ್ತಲೇ ಇದೆ.


ಇದನ್ನೂ ಓದಿ : ವೃದ್ದಾಪ್ಯ ಪಿಂಚಣಿಯನ್ನು 3,500 ರೂ.ಗೆ ಏರಿಸಿ ಸರ್ಕಾರ ಆದೇಶ ! ಅಂಗವೈಕಲ್ಯ ಹೊಂದಿರುವವರ ಸಾಮಾಜಿಕ ಭದ್ರತಾ ಪಿಂಚಣಿಯಲ್ಲಿಯೂ ಹೆಚ್ಚಳ


ಇಪಿಎಸ್ ಚಂದಾದಾರರು: ಇಪಿಎಸ್ ಚಂದಾದಾರರಿಗೆ ಪಿಂಚಣಿ ಹೆಚ್ಚಿಸಲು ಮನವಿ :
ಬಜೆಟ್ ವೇಳೆಯಲ್ಲಿ ಮತ್ತೆ ಕನಿಷ್ಠ ಪಿಂಚಣಿ ಹೆಚ್ಚಳದ ಬೇಡಿಕೆಯನ್ನು ಎತ್ತಲಾಗಿದೆ. ಪಿಂಚಣಿಯನ್ನು 1,000 ರೂ.ನಿಂದ 5,000 ರೂ.ಗೆ ಅಂದರೆ 5 ಪಟ್ಟು ಹೆಚ್ಚಿಸುವಂತೆ ಮನವಿ ಮಾಡಲಾಗಿದೆ. 


ಇದಲ್ಲದೆ, ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಒದಗಿಸಲು ನೌಕರರ ಭವಿಷ್ಯ ನಿಧಿ (ಇಪಿಎಫ್) ಮತ್ತು ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ಗಾಗಿ ಪ್ರತ್ಯೇಕ ಬಜೆಟ್ ಹಂಚಿಕೆಗೆ ಹಣಕಾಸು ಸಚಿವಾಲಯವನ್ನು ಒಕ್ಕೂಟಗಳು ಒತ್ತಾಯಿಸಿವೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.