Union Budget 2025: ಫೆಬ್ರವರಿ 1ನೇ ತಾರೀಖು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಮಂಡಿಸಲಿರುವ ಬಜೆಟ್ ಬಗ್ಗೆ ಅಪಾರವಾದ ನಿರೀಕ್ಷೆಗಳಿವೆ. ಈಗಾಗಲೇ ಬಜೆಟ್ ರೂಪಿಸುವ ತಯಾರಿ ಕೆಲಸ ಶುರುವಾಗಿದ್ದು ಸದ್ಯದ ಮಾಹಿತಿಗಳ ಪ್ರಕಾರ ಕೇಂದ್ರ ಬಜೆಟ್ ನಲ್ಲಿ ನಾರಿಯರಿಗೆ ಸಿಹಿ ಸುದ್ದಿ ಸಿಗಲಿದೆ ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಮಹಿಳಾ ಸಮ್ಮಾನ್ ಪ್ರಮಾಣಪತ್ರ ಯೋಜನೆಯನ್ನು ಜಾರಿಗೆ ತಂದಿದೆ. ಮಹಿಳಾ ಸಮ್ಮಾನ್ ಪ್ರಮಾಣಪತ್ರದ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಬಹುದು ಹಾಗು ಅವರಿಗಾಗಿ ಎಂದು ಹಣ ಉಳಿಸಿಕೊಳ್ಳಬಹುದಾಗಿದೆ. ಆದರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದಲ್ಲಿ 2025ರವರೆಗೆ ಮಾತ್ರ ಹೂಡಿಕೆ ಮಾಡಬಹುದಾಗಿದೆ. ಹೂಡಿಕೆ ಸಮಯವನ್ನು ವಿಸ್ತರಿಸಿಲ್ಲ. 


ಇದನ್ನೂ ಓದಿ- 8th Pay Commission: ಮುಂದಿನ ಬಜೆಟ್‌ನಲ್ಲಿ 8ನೇ ವೇತನ ಆಯೋಗ ಘೋಷಣೆ..! ಮೂಲ ವೇತನದಲ್ಲಿ ಭಾರೀ ಹೆಚ್ಚಳ ಸಾಧ್ಯತೆ!


ಹೂಡಿಕೆ ಸಮಯ ವಿಸ್ತರಣೆಯಾಗಲಿದೆಯೇ?
ಮುಂಬರುವ ಬಜೆಟ್‌ನಲ್ಲಿ ಮಹಿಳಾ ಸಮ್ಮಾನ್ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡುವ ಸಮಯವನ್ನು ವಿಸ್ತರಣೆ ಮಾಡಬಹುದು ಎನ್ನುವ ನಿರೀಕ್ಷೆ ಇದೆ. ಜೊತೆಗೆ ಸದ್ಯದ ಮಾಹಿತಿಗಳ ಪ್ರಕಾರ ಹೂಡಿಕೆ ಸಮಯವನ್ನು ವಿಸ್ತರಣೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಹಾಗಾದರೆ ಮಹಿಳೆಯರಿಗೆ ಉತ್ತಮ ಹೂಡಿಕೆಯ ಆಯ್ಕೆಯೊಂದು ತೆರೆದುಕೊಂಡಂತಾಗುತ್ತದೆ.


ಏನಿದು ಮಹಿಳಾ ಸಮ್ಮಾನ್ ಯೋಜನೆ?
ಯಾವುದೇ ವಯಸ್ಸಿನ ಮಹಿಳೆಯರು ಈ ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ಖಾತೆ ತೆರೆದು ಹೂಡಿಕೆ ಮಾಡಬಹುದು. ಈ ಯೋಜನೆಯಡಿ ಅಪ್ರಾಪ್ತ ಬಾಲಕಿಯರ ಹೆಸರಿನಲ್ಲಿ ಅವರ ಪೋಷಕರೂ ಖಾತೆ ತೆರೆದು ಹೂಡಿಕೆ ಮಾಡಬಹುದು. ಹೂಡಿಕೆಗೆ ವಾರ್ಷಿಕ ಶೇಖಡಾ  7.5ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಈ ಬಡ್ಡಿಯು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮೂರು ತಿಂಗಳಿಗೊಮ್ಮೆ ಬರುತ್ತದೆ. 2 ವರ್ಷಗಳ ನಂತರ ಮೆಚ್ಯುರಿಟಿಯಲ್ಲಿ ಅಸಲಿನ ಜೊತೆಗೆ ಬಡ್ಡಿಯೂ ದೊರೆಯುತ್ತದೆ. ಅಲ್ಲದೆ ಆದಾಯ ತೆರಿಗೆ ಕಾಯಿದೆ 80C ಅಡಿಯಲ್ಲಿ ಬಡ್ಡಿಗೆ ವಿನಾಯಿತಿ ಸಿಗಲಿದೆ.


ಇದನ್ನೂ ಓದಿ- ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; 56% DA ಹೆಚ್ಚಳ..! 


ಬೇಗ ದುಡ್ಡು ಬೆಳೆಯುವ ಯೋಜನೆ: 
ಮಹಿಳಾ ಸಮ್ಮಾನ್ ಪ್ರಮಾಣಪತ್ರ ಯೋಜನೆ ಬಲುಬೇಗ ದುಡ್ಡು ಬೆಳಸುವ ಯೋಜನೆಯಾಗಿದೆ. 2 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 2 ವರ್ಷಗಳ ನಂತರ 2.32 ಲಕ್ಷ ರೂಪಾಯಿ ಸಿಗುತ್ತದೆ. ಮಹಿಳೆಯರು ಕನಿಷ್ಠ 1,000 ರೂಪಾಯಿಗಳಿಂದ ತಮ್ಮ ಹೂಡಿಕೆ ಆರಂಭಿಸಬಹುದು.  


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.