Farmer Budget 2024 : ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ಕೆಲವು ಘೋಷಣೆಗಳನ್ನು ಮಾಡಿದೆ.  ಇದರ ಅಡಿಯಲ್ಲಿ, ಹೊಸ ರೀತಿಯ ಜನ್ ಸಮರ್ಥ್ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ವಿತರಿಸುವ ಬಗ್ಗೆ ಸರ್ಕಾರ ಘೋಷಿಸಿದೆ.ಈ ಯೋಜನೆಯು ಐದು ರಾಜ್ಯಗಳಲ್ಲಿ ಮೊದಲು ಬಿಡುಗಡೆಯಾಗಲಿದೆ. 


COMMERCIAL BREAK
SCROLL TO CONTINUE READING

ಇದರೊಂದಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ ಎನ್ನುವುದನ್ನು ಕೂಡಾ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈ ಯೋಜನೆಯ ವಿಸ್ತರಣೆಯಿಂದಾಗಿ 80 ಕೋಟಿ ಜನರಿಗೆ ಅನುಕೂಲವಾಗಲಿದೆ.


ಇದನ್ನೂ ಓದಿ : Education Budget 2024: ನಿರುದ್ಯೋಗಿಗಳಿಗಾಗಿ ಸರ್ಕಾರದ ಹೊಸ ಸ್ಕೀಮ್ ಘೋಷಣೆ ! ಮುಂದಿನ 5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಅವಕಾಶ


ರೈತರಿಗೆ ನೀಡಿದ್ದೆನು ? : 
 ೧.ಉತ್ಪಾದನೆಯನ್ನು ಹೆಚ್ಚಿಸಲು ತರಕಾರಿ ಉತ್ಪಾದನಾ ಕ್ಲಸ್ಟರ್‌ಗಳಿಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ .
೨. ರಾಜ್ಯಗಳ ಸಹಭಾಗಿತ್ವದಲ್ಲಿ ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಒತ್ತು . 
೩. ಹವಾಮಾನ ಸ್ನೇಹಿ ಬೀಜಗಳನ್ನು ಅಭಿವೃದ್ಧಿಪಡಿಸಲು ಸಂಶೋಧನೆಯ ಸಮಗ್ರ ಪರಿಶೀಲನೆ . 
೪. ಇನ್ನೆರಡು ವರ್ಷಗಳಲ್ಲಿ ದೇಶಾದ್ಯಂತ ಒಂದು ಕೋಟಿ ರೈತರಿಗೆ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಲು ಉತ್ತೇಜನ ನೀಡಲಾಗುವುದು. 
೫. ತರಕಾರಿ ಉತ್ಪಾದನೆ ಮತ್ತು ಪೂರೈಕೆ ಸರಪಳಿಗಾಗಿ ಹೆಚ್ಚಿನ ಎಫ್‌ಪಿಒಗಳನ್ನು ರಚಿಸಲಾಗುವುದು. 
೬. ಕೃಷಿ ಭೂಮಿ ಮತ್ತು ರೈತರ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಒತ್ತು ನೀಡಲಾಗುವುದು.
೭. ಸರಕಾರ ಸಿಗಡಿ ಸಾಕಾಣಿಕೆ ಮತ್ತು ಮಾರುಕಟ್ಟೆಗೆ ಹಣಕಾಸು ಒದಗಿಸುತ್ತದೆ.ಗ್ರಾಮೀಣಾಭಿವೃದ್ಧಿಯಾ ದೃಷ್ಟಿಯಿಂದ 2.66 ಲಕ್ಷ ಕೋಟಿ ರೂ. ವೆಚ್ಚದಲ್ಲಿ  100 NABL ಮಾನ್ಯತೆ ಪಡೆದ ಆಹಾರ ಪರೀಕ್ಷಾ ಪ್ರಯೋಗಾಲಯಗಳನ್ನು ದೇಶಾದ್ಯಂತ ಸ್ಥಾಪಿಸಲಾಗುವುದು. 


ಇದನ್ನೂ ಓದಿ :  ಸೇಲ್ಸ್ ಗರ್ಲ್ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆಯಾಗಿದ್ದು ಹೇಗೆ ? ಕಾಂಗ್ರೆಸ್ ಕಟ್ಟಾಳುಗಳಾದ ಪತಿ, ಅತ್ತೆ, ಮಾವನ ಮಧ್ಯೆ ಬರೆದಿದ್ದಾರೆ ಹಲವು ದಾಖಲೆ


ಆದಿವಾಸಿಗಳಿಗೆ ಸುಧಾರಿತ ಗ್ರಾಮ ಅಭಿಯಾನ  : 
ಬುಡಕಟ್ಟು ಸಮುದಾಯಗಳ ಆರ್ಥಿಕ-ಸಾಮಾಜಿಕ ಸ್ಥಿತಿಯನ್ನು ಸುಧಾರಿಸಲು  ಆದಿವಾಸಿಗಳಿಗೆ ಸುಧಾರಿತ ಗ್ರಾಮ ಅಭಿಯಾನವನ್ನು  ಬಜೆಟ್‌ನಲ್ಲಿ ಘೋಷಿಸಲಾಗಿದೆ. ಬುಡಕಟ್ಟು ಪ್ರಾಬಲ್ಯದ ಗ್ರಾಮಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿನ ಬುಡಕಟ್ಟು ಕುಟುಂಬಗಳನ್ನು ಸಂಪೂರ್ಣವಾಗಿ ತನ್ನ ವ್ಯಾಪ್ತಿಗೆ ತರುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಐದು ಕೋಟಿ ಬುಡಕಟ್ಟು ಜನರಿಗೆ ಅನುಕೂಲವಾಗಲಿರುವ ಈ ಕಾರ್ಯಕ್ರಮದ ವ್ಯಾಪ್ತಿಗೆ 63 ಸಾವಿರ ಬುಡಕಟ್ಟು ಪ್ರಾಬಲ್ಯದ ಗ್ರಾಮಗಳು ಬರಲಿವೆ ಎಂದರು.


https://bit.ly/3AClgDd


Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ