ಅತ್ಯಲ್ಪ ಹೂಡಿಕೆ ಮಾಡಿ ಈ ಸೂಪರ್ ಹಿಟ್ ವ್ಯವಸಾಯ ಆರಂಭಿಸಿ, ತಿಂಗಳಿಗೆ 8 ಲಕ್ಷ ಆದಾಯ ಕೊಡುತ್ತೇ!
Business Concept: ನೌಕರಿಯಲ್ಲಿನ ಒತ್ತಡಕ್ಕೆ ಒಂದು ವೇಳೆ ನೀವೂ ಕೂಡ ಬೇಸತ್ತಿದ್ದರೆ, ಈ ವಿಶೇಷ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ಉತ್ತಮವಾದ ವ್ಯವಸಾಯದ ಕಲ್ಪನೆಯೊಂದರ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ, ಈ ವ್ಯವಸಾಯವನ್ನು ಮಾಡುವುದರ ಮೂಲಕ ನೀವು ಕೈತುಂಬಾ ಲಾಭವನ್ನು ಗಳಿಸಬಹುದು. ಈ ವ್ಯವಸಾಯದ ವಿಶೇಷತೆ ಎಂದರೆ ನೀವು ಕಡಿಮೆ ವೆಚ್ಚದಲ್ಲಿ ಈ ಇದನ್ನು ಆರಂಭಿಸಬಹುದು.
ಬೆಂಗಳೂರು: ನೌಕರಿಯಲ್ಲಿನ ಒತ್ತಡಕ್ಕೆ ಒಂದು ವೇಳೆ ನೀವೂ ಕೂಡ ಬೇಸತ್ತಿದ್ದರೆ, ಈ ವಿಶೇಷ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ಉತ್ತಮವಾದ ವ್ಯವಸಾಯದ ಕಲ್ಪನೆಯೊಂದರ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ, ಈ ವ್ಯವಸಾಯವನ್ನು ಮಾಡುವುದರ ಮೂಲಕ ನೀವು ಕೈತುಂಬಾ ಲಾಭವನ್ನು ಗಳಿಸಬಹುದು. ಈ ವ್ಯವಸಾಯದ ವಿಶೇಷತೆ ಎಂದರೆ ನೀವು ಕಡಿಮೆ ವೆಚ್ಚದಲ್ಲಿ ಈ ಇದನ್ನು ಆರಂಭಿಸಬಹುದು. ಈ ವ್ಯವಹಾರದಲ್ಲಿ ಬಂಪರ್ ಲಾಭ ಕೂಡ ಇದೆ. ಹೌದು, ನಾವು ಮಾತನಾಡುತ್ತಿರುವುದು ಸೌತೆಕಾಯಿ ಕೃಷಿಯ ಬಗ್ಗೆ. ನೀವು ಯಾವಾಗ, ಎಲ್ಲಿ ಮತ್ತು ಹೇಗೆ ಈ ವ್ಯವಸಾಯವನ್ನು ಪ್ರಾರಂಭಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
1. ಸೌತೆಕಾಯಿ ಕೃಷಿ ಒಂದು ಲಾಭದಾಯಕ ವ್ಯವಸಾಯ
ನೀವೂ ಕೂಡ ವ್ಯವಸಾಯದ ಮೂಲಕ ಬಂಪರ್ ಲಾಭವನ್ನು ಗಳಿಸಲು ಬಯಸುತಿದ್ದರೆ, ಸೌತೆಕಾಯಿ ಕೃಷಿ ಮತ್ತು ವ್ಯಾಪಾರ ಒಂದು ಉತ್ತಮ ಆಯ್ಕೆಯಾಗಿದೆ.ಇದರಲ್ಲಿ ನಿಮಗೆ ಸರಕಾರದಿಂದ ಸಹಾಯ ಧನವೂ ಅಥವಾ ಸಬ್ಸಿಡಿ ಕೂಡ ದೊರೆಯುತ್ತದೆ. ಈ ವ್ಯವಹಾರದಲ್ಲಿ, ನೀವು ಸುಮಾರು ಒಂದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ತಿಂಗಳಿಗೆ 8 ಲಕ್ಷ ರೂ. ಹಣ ಗಳಿಕೆ ಮಾಡಬಹುದು.
2. ಸರ್ಕಾರ ಸಬ್ಸಿಡಿ ನೀಡುತ್ತದೆ
ಸೌತೆಕಾಯಿ ಕೃಷಿ ಮೂಲಕ ಲಾಭ ಗಳಿಸಲು ನೀವು ಹೆಚ್ಚು ಸಮಯ ಬೇಕಾಗುವುದಿಲ್ಲ. ಸೌತೆಕಾಯಿ ಬೀಜಗಳನ್ನು ಬಿತ್ತಿದ ಕೇವಲ 4 ತಿಂಗಳ ನಂತರ ನೀವು ರೂ.8 ಲಕ್ಷದವರೆಗೆ ಆದಾಯ ಗಳಿಕೆ ಮಾಡಬಹುದು. ಇದಕ್ಕಾಗಿ ನೀವು ವಿಶಿಷ್ಟ ಪದ್ಧತಿಯ ಕೃಷಿಯನ್ನು ಅನುಸರಿಸಬೇಕಾಗುತ್ತದೆ. ನಿರ್ದಿಷ್ಟ ಜಾತಿಯ ನೆದರ್‌ಲ್ಯಾಂಡ್‌ನ ಸೌತೆಕಾಯಿಯ ಬೀಜಗಳನ್ನು ಬಿತ್ತಿದ ಮೊದಲ ರೈತ ಯುಪಿಯ ರೈತ. ಈ ಸೌತೆಕಾಯಿ ವ್ಯಾಪಾರದಲ್ಲಿ ಸಾಕಷ್ಟು ಲಾಭವಿದೆ. ಮೊದಲಬಾರಿಗೆ ಈ ವ್ಯವಸಾಯಕ್ಕೆ ಸರ್ಕಾರದಿಂದ ಸಹಾಯ ಮತ್ತು ಸಬ್ಸಿಡಿಯನ್ನು ಪಡೆದುಕೊಳ್ಳಬಹುದು.
3. ಎಷ್ಟು ದಿನಗಳಲ್ಲಿ ಲಾಭ ಪಡೆಯಬಹುದು?
ಈ ಸೌತೆಕಾಯಿ ಸಿದ್ಧವಾಗಲು 60 ರಿಂದ 80 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ ಎಂಬುದು ಇಲ್ಲಿ ಗಮನಾರ್ಹ. ಮಳೆಗಾಲದಲ್ಲಿ ಈ ಸೌತೆಕಾಯಿ ಕೃಷಿ ಹೆಚ್ಚು ಲಾಭದಾಯಕ. ಈ ಸೌತೆಕಾಯಿಯನ್ನು ಬೆಳೆಯಲು ಭೂಮಿಯ ಪಿ.ಹೆಚ್. 5.5 ರಿಂದ 6.8 ರವರೆಗೆ ಉತ್ತಮವೆಂದು ಪರಿಗಣಿಸಲಾಗಿದೆ. ಈ ಸೌತೆಕಾಯಿಯನ್ನು ನದಿಗಳು ಮತ್ತು ಕೊಳಗಳ ದಡದಲ್ಲಿಯೂ ಕೂಡ ಬೆಳೆಸಬಹುದು.
ಇದನ್ನೂ ಓದಿ-ನೌಕರಿಯಿಂದ ಬೇಸತ್ತು ಹೋಗಿದ್ದೀರಾ? ಇಂದೇ ಕಪ್ಪು ಅರಿಶಿನದ ಬಿಸ್ನೆಸ್ ಆರಂಭಿಸಿ ಕೈತುಂಬಾ ಸಂಪಾದಿಸಿ!
4. ಎಷ್ಟು ಬಂಡವಾಳದ ಅವಶ್ಯಕತೆ ಇರುತ್ತದೆ
ಇದಕ್ಕಾಗಿ, ಮೊದಲನೆಯದಾಗಿ ನೀವು ಹಸಿರು ಮನೆಯನ್ನು ತಯಾರಿಸಬೇಕು. ಯುಪಿ ರೈತ ದುರ್ಗಾ ಪ್ರಸಾದ್ ಅವರು ತಮ್ಮ ಸ್ವಂತ ಹೊಲದಲ್ಲಿ ಈ ಕೃಷಿಗಾಗಿ ಹಸಿರು ಮನೆಯನ್ನು ನಿರ್ಮಿಸಿದ್ದಾರೆ. ಆ ಬಳಿಕ ನೆದರ್‌ಲ್ಯಾಂಡ್‌ನಿಂದ 72 ಸಾವಿರ ರೂಪಾಯಿ ಮೌಲ್ಯದ ಬೀಜಗಳನ್ನು ತಂದು ಬಿತ್ತನೆ ಮಾಡಿ, 4 ತಿಂಗಳ ಬಳಿಕ 8 ಲಕ್ಷ ಮೌಲ್ಯದ ಸೌತೆಕಾಯಿ ಮಾರಾಟ ಮಾಡಿದ್ದಾರೆ. ಇದಕ್ಕಾಗಿ ದುರ್ಗಾ ಪ್ರಸಾದ್ ಅವರು ಸರ್ಕಾರದಿಂದ 18 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-ಸರ್ಕಾರಿ ನೌಕರರಿಗೆ ಹೊಡೆಯಲಿದೆ ಲಾಟರಿ, ಶೀಘ್ರದಲ್ಲೇ ಮೋದಿ ಸರ್ಕಾರ ಕೈಗೊಳ್ಳಲಿದೆ ಈ ನಿರ್ಧಾರ!
5. ಈ ವ್ಯವಸಾಯಕ್ಕೆ ಭಾರಿ ಬೇಡಿಕೆ ಇದೆ
ಈ ಸೌತೆಕಾಯಿಯ ವಿಶೇಷತೆಯೆಂದರೆ, ಈ ಸೌತೆಕಾಯಿಗಳಲ್ಲಿ ಕಡಿಮೆ ಬೀಜಗಲಿರುತ್ತವೆ ಮತ್ತು ಆದ್ದರಿಂದ ಇವುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ದೇಶಿ ಸೌತೆಕಾಯಿಗಿಂತ ಇದರ ಬೆಲೆಯೂ ಹೆಚ್ಚಿರುವುದಕ್ಕೆ ಇದೇ ಕಾರಣ. ನೆದರ್‌ಲ್ಯಾಂಡ್‌ನ ಬೀಜಗಳನ್ನು ಹೊಂದಿರುವ ಈ ಸೌತೆಕಾಯಿಯನ್ನು ಕೆಜಿಗೆ 40 ರಿಂದ 45 ರೂ.ಗೆ ಮಾರಾಟ ಮಾಡಲಾಗುತ್ತದೆ. ಈ ಸೌತೆಕಾಯಿಗೆ ವರ್ಷವಿಡೀ ಬೇಡಿಕೆ ಇರುತ್ತದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ