Basil Farming: ಒಂದು ವೇಳೆ ನೀವೂ ಕೂಡ ಸಣ್ಣ ಪ್ರಮಾಣದ ಹೂಡಿಕೆಯ ಮೂಲಕ ವ್ಯಾಪಾರ ಆರಂಭಿಸಿ ಕೈತುಂಬಾ ಸಂಪಾದನೆ ಮಾಡಲು ಯೋಜಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ಈ  ವ್ಯವಹಾರದಲ್ಲಿ, ನೀವು ಕಡಿಮೆ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ ಮತ್ತು ಲಾಭವೂ ಉತ್ತಮವಾಗಿರುತ್ತದೆ. ಇಂದು ನಾವು ನಿಮಗೆ ಹೇಳಲು ಹೊರಟಿರುವ ವ್ಯಾಪಾರದ ಕಲ್ಪನೆಯಲ್ಲಿ (Business Idea) ನೀವು ಅದನ್ನು ನಿಮ್ಮ ಜಾಬ್ ಜೊತೆಗೆ ಅಥವಾ ಮನೆಯಲ್ಲಿ ಕುಳಿತು ಸಹ ಮಾಡಬಹುದು. ತುಳಸಿ ಬೇಸಾಯ ಒಂದು ಉದ್ಯಮವಾಗಿದ್ದು, ಇದರಿಂದ ನೀವು ಅತಿ ಕಡಿಮೆ ಸಮಯದಲ್ಲಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಬಹುದು.

COMMERCIAL BREAK
SCROLL TO CONTINUE READING

1. ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿದೆ ತುಳಸಿ ಬೇಡಿಕೆ (BASIL FARMING BENEFIT ) - ತುಳಸಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದೆ, ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದ ಮತ್ತು ನೈಸರ್ಗಿಕ ಔಷಧಗಳನ್ನು ಸಹ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. ಇದರಲ್ಲಿ ತುಳಸಿಯನ್ನು ಸಹ ಹೆಚ್ಚು ಬಳಸಲಾಗುತ್ತದೆ. ಹಾಗಾಗಿ ತುಳಸಿಗೆ ಬೇಡಿಕೆ ಹೆಚ್ಚಿದೆ. ಅಷ್ಟೇ ಅಲ್ಲ ಇತೀಚಿನ ದಿನಗಳಲ್ಲಿ ಮನೆಯಲ್ಲೂ ಸಹ ತುಳಸಿಯನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ.

2. ತುಳಸಿ ಕೃಷಿ ಹೇಗೆ ಮಾಡಬೇಕು? (BASIL FARMING PROFIT) - ತುಳಸಿ ಬೇಸಾಯ ಮಾಡಲು ಜುಲೈ ತಿಂಗಳಲ್ಲಿ ಉತ್ತಮವಾಗಿದೆ. ಸಾಮಾನ್ಯವಾಗಿ ಈ ಸಸ್ಯಗಳನ್ನು 45 x 45 ಸೆಂ.ಮೀ ಅಂತರದಲ್ಲಿ ನೆಡಬೇಕು, ಆದರೆ RRLOC 12 ಮತ್ತು RRLOC 14 ಜಾತಿಗಳಿಗೆ 50 x 50 ಸೆಂ.ಮೀ ಅಂತರವನ್ನು ಇಡಬೇಕು. ಈ ಸಸ್ಯಗಳನ್ನು ನೆಟ್ಟ ತಕ್ಷಣ ಸ್ವಲ್ಪ ನೀರಿನ ಅವಶ್ಯಕತೆ ಬೀಳುತ್ತದೆ. ತುಳಸಿ ಬೇಸಾಯದ ತಜ್ಞರು ಬೆಳೆ ಕಟಾವು ಮಾಡುವ 10 ದಿನಗಳ ಮೊದಲು ಗಿಡಗಳಿಗೆ ನೀರು ಹಾಯಿಸುವುದನ್ನು ಬಿಡಬೇಕು ಎಂದು ಸಲಹೆ ನೀಡುತ್ತಾರೆ.

3. ಸರಿಯಾದ ಸಮಯಕ್ಕೆ ಕಟಾವು ಪ್ರಕ್ರಿಯೆ ನಡೆಸಿ (BASIL FARMING PROCESS) - ತುಳಸಿ ಗಿಡಗಳ ಎಲೆಗಳು ದೊಡ್ಡದಾಗಿದ್ದಾಗ ಈ ಗಿಡವನ್ನು ಕೊಯ್ಲು ಮಾಡಲಾಗುತ್ತದೆ. ಈ ಸಸ್ಯಗಳು ಹೂಬಿಟ್ಟಾಗ, ಅವುಗಳಲ್ಲಿ ಎಣ್ಣೆಯ ಪ್ರಮಾಣವು ಕಡಿಮೆಯಾಗುತ್ತದೆ, ಆದ್ದರಿಂದ ಈ ಸಸ್ಯಗಳು ಹೂಬಿಡಲು ಪ್ರಾರಂಭಿಸಿದಾಗ, ಅವುಗಳ ಕೊಯ್ಲು ಪ್ರಕ್ರಿಯೆ ನಡೆಸಬೇಕು.

4. ಎಲ್ಲಿ ಮತ್ತು ಹೇಗೆ ತುಳಸಿಯನ್ನು ಮಾರಾಟ ಮಾಡಬೇಕು? (BASIL FARMING DETAIL IN KANNADA) - ಈ ಬೆಳೆಯನ್ನು ಎಲ್ಲಿ ಮಾರಾಟ ಮಾಡುವುದು? ಮತ್ತು ಹೇಗೆ ಮಾರಾಟ ಮಾಡಬೇಕು ಎಂಬ ಪ್ರಶ್ನೆ ಇದೀಗ ನಿಮ್ಮ ಮನಸ್ಸಿನಲ್ಲಿಯೂ ಕೂಡ ಬಂದಿರಬಹುದು. ಈ ಸಸ್ಯಗಳನ್ನು ಮಾರಾಟ ಮಾಡಲು, ನೀವು ಮಾರುಕಟ್ಟೆಯ ಏಜೆಂಟ್ ಅನ್ನು ಸಂಪರ್ಕಿಸುವ ಮೂಲಕ ಅಥವಾ ನೇರವಾಗಿ ಮಾರುಕಟ್ಟೆಗೆ ಹೋಗಿ ಗ್ರಾಹಕರನ್ನು ಸಂಪರ್ಕಿಸುವ ಮೂಲಕ ಈ ಸಸ್ಯಗಳನ್ನು ಮಾರಾಟ ಮಾಡಬಹುದು. ಇದರ ಹೊರತಾಗಿ, ನೀವು ಔಷಧೀಯ ಕಂಪನಿ ಅಥವಾ ಔಷಧಿ ಏಜೆನ್ಸಿಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಕೂಡ ನಿಮ್ಮ ಸಸ್ಯಗಳನ್ನು ಮಾರಾಟ ಮಾಡಬಹುದು. ಈ ಕಂಪನಿಗಳು ತುಳಸಿಗೆ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ, ಆದ್ದರಿಂದ ಅವುಗಳ ಮಾರಾಟಕ್ಕೆ ನಿಮಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.


ಇದನ್ನೂ ಓದಿ-ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತ, ಈ ಸಮಯದಲ್ಲಿ ಬಂಗಾರ ಖರೀದಿ ಮಾಡುವುದು ಸರಿಯೇ ?

5. ಕೇವಲ ಮೂರು ತಿಂಗಳುಗಳಲ್ಲಿ ಮೂರು ಲಕ್ಷ ಆದಾಯ - ಈ ವ್ಯವಹಾರದಲ್ಲಿ ನೀವು ಬಿತ್ತನೆಯ ನಂತರ ಕೊಯ್ಲು ಮಾಡಲು ಹೆಚ್ಚು ಕಾಯಬೇಕಾಗಿಲ್ಲ. ಬಿತ್ತನೆ ಪ್ರಕ್ರಿಯೆಯಾ 3 ತಿಂಗಳ ನಂತರವೇ ಈ ಗಿಡ ತಯಾರಾಗುತ್ತಿದ್ದು, ತುಳಸಿ ಬೆಳೆ ಸುಮಾರು 3 ಲಕ್ಷ ರೂಪಾಯಿಗೆ ಮಾರಾಟವಾಗಲಿದೆ. ಆಯುರ್ವೇದ ಉತ್ಪನ್ನಗಳನ್ನು ತಯಾರಿಸುವ ಅನೇಕ ಕಂಪನಿಗಳಿಗೆ ತುಳಸಿ ಸಸ್ಯಗಳ ಅಗತ್ಯವಿರುತ್ತದೆ, ಆದ್ದರಿಂದ ಅವರು ಅದನ್ನು ಒಪ್ಪಂದದ ಮೇಲೆ ಬೆಳೆಸುತ್ತಾರೆ. ಡಾಬರ್, ವೈದ್ಯನಾಥ್, ಪತಂಜಲಿಯಂತಹ ಅನೇಕ ಕಂಪನಿಗಳು ತುಳಸಿಯ ಗುತ್ತಿಗೆ ಕೃಷಿ ಮಾಡುತ್ತಿವೆ. ಅಂದರೆ ಕೇವಲ 3 ತಿಂಗಳಲ್ಲಿ ನಿಮಗೆ 3 ಲಕ್ಷ ಬಂಪರ್ ಲಾಭ ಸಿಗಲಿದೆ.


ಇದನ್ನೂ ಓದಿ-Best Investment Plan : ₹1000 ಹೂಡಿಕೆ ಮಾಡಿ, 2 ಕೋಟಿ ಲಾಭ ಪಡೆಯಿರಿ! ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ

6. ಕೇವಲ 15 ಸಾವಿರ ಹೂಡಿಕೆಯ ಮೇಲೆ 3 ಲಕ್ಷ ರೂ. ಆದಾಯ - ಈ ವ್ಯವಹಾರದ ದೊಡ್ಡ ವೈಶಿಷ್ಟ್ಯವೆಂದರೆ ತುಳಸಿಯನ್ನು ಬೆಳೆಸಲು, ನಿಮಗೆ ಹೆಚ್ಚಿನ ಹೂಡಿಕೆಯ ಅಗತ್ಯವಿರುವುದಿಲ್ಲ ಮತ್ತು ಅದನ್ನು ಬಹಳ ವಿಶಾಲವಾದ ಭೂಮಿಯಲ್ಲಿ ಬೆಳೆಸುವ ಅಗತ್ಯವಿಲ್ಲ. ನೀವು ಕೇವಲ ₹ 15000 ಹೂಡಿಕೆ ಮಾಡುವ ಮೂಲಕ ಈ ವ್ಯವಹಾರವನ್ನು ಪ್ರಾರಂಭಿಸಬಹುದು ಮತ್ತು ನೀವು ಬಯಸಿದರೆ, ಒಪ್ಪಂದದ ಕೃಷಿಯ ಮೂಲಕವೂ ನಿಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು.


ಇದನ್ನೂ ಓದಿ-EPFO : ಮರೆತು ಕೂಡ ಮಾಡಬೇಡಿ ಈ ತಪ್ಪನ್ನು, ಇಲ್ಲದಿದ್ದರೆ ಸಿಕ್ಕಿಬೀಳುತ್ತೆ PF ಹಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ