ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕಾಫಿ ಕುಡಿಯುವ ಟ್ರೆಂಡ್ ಹೆಚ್ಚಾಗಿದೆ. ನೀವು ಸಹ ಕಡಿಮೆ ಬಜೆಟ್‍ನಲ್ಲಿ ಉತ್ತಮ ಬ್ಯುಸಿನೆಸ್ ಮಾಡ್ಬೇಕು ಅಂತಾ ಯೋಚಿಸುತ್ತಿದ್ದರೆ ಇದುವೇ ಉತ್ತಮ ಆಯ್ಕೆ. ಕಾಫಿ ಶಾಪ್ ವ್ಯಾಪಾರ ನಿಮಗೆ  ಉತ್ತಮ ಆದಾಯ ನೀಡುತ್ತದೆ. ಮಾರುಕಟ್ಟೆಯಲ್ಲಿನ ಅಗಾಧ ಬೇಡಿಕೆಯಿಂದ ಕಾಫಿ ಅಂಗಡಿಯು ಉತ್ತಮ ಆದಾಯದ ಮೂಲವಾಗಿದೆ. ಕಡಿಮೆ ವೆಚ್ಚದಲ್ಲಿ ನೀವು ಉತ್ತಮ ಲಾಭ ಪಡೆಯಬಹುದು. ಈ ವ್ಯವಹಾರದಲ್ಲಿ ನೀವು ನಷ್ಟ ಅನುಭವಿಸುವ ಮಾತೇ ಇಲ್ಲ. ಸರಿಯಾದ ಯೋಜನೆ ರೂಪಿಸಿ ಈ ವ್ಯವಹಾರ ಶುರು ಮಾಡಿದ್ರೆ ಕಡಿಮೆ ಹೂಡಿಕೆ ಮಾಡಿ ಲಕ್ಷಗಟ್ಟಲೇ ಆದಾಯ ಗಳಿಸಬಹುದು. ಈಗಾಗಲೇ ಅನೇಕರು ಕಾಫಿ ಶಾಪ್ ವ್ಯಾಪಾರದಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಕಾಫಿ ಶಾಪ್ ತೆರೆಯುವುದು ಹೇಗೆ?


ಈ ವ್ಯಾಪಾರದಿಂದ ಅನೇಕರು ಕೈತುಂಬಾ ಸಂಪಾದಿಸುತ್ತಿದ್ದಾರೆ. ನೀವು ಚಿಕ್ಕ ಸ್ಥಳದಲ್ಲಿಯೇ ಈ ಬ್ಯುಸಿನೆಸ್ ಪ್ರಾರಂಭಿಸಬಹುದು. ನಗರ ಅಥವಾ ಹಳ್ಳಿ ಎಲ್ಲಿ ಬೇಕಾದರೂ ನೀವು ಕಾಫಿ ಶಾಪ್ ತೆರೆಯಬಹುದು. ಈ ವ್ಯಾಪಾರ ಮಾಡಲು ಉತ್ತಮ ಸ್ಥಳದ ಜೊತೆಗೆ ಸರಕುಗಳು, ಮಾರ್ಕೆಟಿಂಗ್ ಇತ್ಯಾದಿ  ಬೇಕಾಗುತ್ತವೆ. ಸರಿಯಾದ ಮಾರ್ಕೆಟಿಂಗ್ ಮೂಲಕ ನಿಮ್ಮ ವ್ಯಾಪಾರವನ್ನು ಉತ್ತಮ ರೀತಿಯಲ್ಲಿ ಬೆಳೆಸಬಹುದು.


ಇದನ್ನೂ ಓದಿ: LPG ಸಿಲಿಂಡರ್‌ ಬಳಕೆದಾರರಿಗೆ ಬಿಗ್ ಶಾಕ್ : ಮೆಟ್ರೋ ನಗರಗಳಲ್ಲಿ ₹1000 ಗಡಿ ದಾಟಿದ ಗ್ಯಾಸ್ ಬೆಲೆ!


ಕಾಫಿ ಶಾಪ್‌ಗಾಗಿ ಉತ್ತಮ ಸ್ಥಳ ಮುಖ್ಯ


ಕಾಫಿ ಶಾಪ್ ಬ್ಯುಸಿನೆಸ್ ಆರಂಭಿಸಲು ನಿಮಗೆ ಉತ್ತಮ ಸ್ಥಳ ಬೇಕಾಗುತ್ತದೆ. ಸಂಚಾರದಟ್ಟನೆ ಇರುವ ಸ್ಥಳದಲ್ಲಿ ವ್ಯವಹಾರ ಪ್ರಾರಂಭಿಸಿದ್ರೆ ಉತ್ತಮ ಲಾಭ ಗಳಿಸಬಹುದು. ಇದರೊಂದಿಗೆ ಸುತ್ತಲಿನ ಪರಿಸರವೂ ಉತ್ತಮವಾಗಿರಬೇಕು ಹಾಗೂ ಸ್ವಚ್ಛತೆಯತ್ತ ಗಮನ ಹರಿಸಬೇಕು. ನಿಮ್ಮ ಮನೆಯ ಸಮೀಪವೂ ನೀವು ಈ ವ್ಯವಹಾರ ಪ್ರಾರಂಭಿಸಬಹುದು.


ಪದಾರ್ಥಗಳು ಮತ್ತು ಖರ್ಚು-ವೆಚ್ಚ


ಕಾಫಿ ಮಾಡಲು ಬೇಕಾದ ಅಗತ್ಯ ಪದಾರ್ಥಗಳು ಬೇಕಾಗುತ್ತವೆ. ಕಾಫಿ ಪೌಡರ್, ಸಕ್ಕರೆ, ಚಾಕೊಲೇಟ್ ಪೌಡರ್, ನೀರು, ಡ್ರಿಪ್ ಕಾಫಿ ಮೇಕರ್ ಯಂತ್ರ ಇತ್ಯಾದಿಗಳನ್ನು ನೀವು ಖರೀದಿಸಬೇಕು. ಕಾಫಿ ವ್ಯಾಪಾರಕ್ಕಾಗಿ ಸಾಮಾನ್ಯ ಸ್ಥಳಾವಕಾಶವಿರುವ ಯಂತ್ರದಲ್ಲಿ ನೀವು 5 ಲಕ್ಷ ರೂ. ವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಇಲ್ಲಿ ನೀವು ವಿವಿಧ ರುಚಿಯ ಕಾಫಿಯನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 50 ಸಾವಿರ ರೂ.ಗಳವರೆಗೆ ಗಳಿಸಬಹುದು.


ಇದನ್ನೂ ಓದಿ: HDFC ಖಾತೆದಾರರಿಗೆ ಎಚ್ಚರ! ಈ ಸಂದೇಶ ಬಂದರೆ ತಕ್ಷಣವೇ ಡಿಲೀಟ್ ಮಾಡಿ !ಇಲ್ಲವಾದರೆ ಖಾಲಿಯಾಗುವುದು ಖಾತೆ


(ಗಮನಿಸಿರಿ: ಇಲ್ಲಿ ಬ್ಯುಸಿನೆಸ್ ಪ್ರಾರಂಭಿಸುವ ಯೋಜನೆಯ ಬಗ್ಗೆ ಮಾತ್ರ ಮಾಹಿತಿ ನೀಡಲಾಗಿದೆ. ವ್ಯಾಪಾರ ಪ್ರಾರಂಭಿಸುವುದು ನಿಮ್ಮ ರಿಸ್ಕ್ ಮೇಲೆ ಅವಲಂಬಿತವಾಗಿರುತ್ತದೆ. Zee Kannada News ಇದಕ್ಕೆ ಯಾವುದೇ ರೀತಿ ಹೊಣೆಯಾಗಿರುವುದಿಲ್ಲ)    


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.