ಜುಲೈ ಅಂತ್ಯಕ್ಕೂ ಮುನ್ನವೇ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಈ ದಿನ ಹೆಚ್ಚಾಗಲಿದೆ ವೇತನ!
7th Pay Commission: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಜುಲೈ ತಿಂಗಳು ತುಂಬಾ ಮಹತ್ವದಾಗಿದೆ. ಈ ತಿಂಗಳು ಸರ್ಕಾರ ನೌಕರರ ವೇತನವನ್ನು ಹೆಚ್ಚಿಸಲಿದೆ. ನೀವು ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನವನ್ನು ಪಡೆಯುತ್ತಿದ್ದರೆ, ನಿಮ್ಮ ವೇತನ ಯಾವಾಗ ಹೆಚ್ಚಾಗಲಿದೆ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ,
Dearness Allowance: ಕೇಂದ್ರ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ. ನೀವು ಸಹ ಡಿಎ ಹೆಚ್ಚಳಕ್ಕಾಗಿ ಕಾಯುತ್ತಿದ್ದರೆ, ಇದೀಗ ನಿಮ್ಮ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. 10 ದಿನಗಳ ಬಳಿಕ ಕೇಂದ್ರ ನೌಕರರ ಖಾತೆಗೆ ವೇತನವನ್ನು ವರ್ಗಾಯಿಸಲಾಗುತ್ತಿದೆ. ಈ ಬಾರಿ ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಲು ಹೊರಟಿದ್ದು, ಜುಲೈ 31 ರಂದು ಅದರ ಡೇಟಾ ಕೂಡ ಪ್ರಕಟಗೊಳ್ಳಲಿದೆ, ನಂತರ ಈ ಬಾರಿ ನೌಕರರ ವೇತನದಲ್ಲಿ (Business News In Kannada) ಹೆಚ್ಚಳವಾಗುವುದು ಬಹುತೇಕ ಸ್ಪಷ್ಟವಾಗಿದೆ.
AICPI ಸೂಚ್ಯಂಕ ಡೇಟಾವನ್ನು ಬಿಡುಗಡೆ ಮಾಡುತ್ತದೆ
ಎಐಸಿಪಿಐ ಸೂಚ್ಯಂಕದ ಪ್ರಕಾರ, ಡಿಎಯಲ್ಲಿ ಶೇಕಡಾ 4 ರಷ್ಟು ಏರಿಕೆಯಾಗಲಿದೆ ಎಂದು ಇದುವರೆಗೆ ಬಿಡುಗಡೆಯಾದ ಸಂಖ್ಯೆಗಳಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸದ್ಯ ನೌಕರರ ವೇತನ ತಿಂಗಳಿಗೆ ಎಷ್ಟು ಹೆಚ್ಚಳವಾಗಲಿದೆ ಎಂಬುದು ಸರ್ಕಾರದ ಅಧಿಕೃತ ಘೋಷಣೆಯ ನಂತರವಷ್ಟೇ ಸ್ಪಷ್ಟವಾಗಲಿದೆ.
ಏರಿಕೆ ಘೋಷಣೆ ಯಾವಾಗ?
ಪ್ರಸ್ತುತ, ನೌಕರರು ತುಟ್ಟಿಭತ್ಯೆಯನ್ನು ಶೇಕಡಾ 42 ರ ದರದಲ್ಲಿ ಪಡೆಯುತ್ತಿದ್ದಾರೆ. ಅದರ ಪರಿಷ್ಕರಣೆ 1 ಜುಲೈ 2023 ರಿಂದ ಜಾರಿಗೆ ಬರಲಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಬಾರಿ ಸರ್ಕಾರವು ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಬಹುದು ಎನ್ನಲಾಗಿದೆ.
ಈ ಬಾರಿ ತುಟ್ಟಿಭತ್ಯೆ ಶೇ 4ರಷ್ಟು ಹೆಚ್ಚಳವಾಗಲಿದೆ
ಇದುವರೆಗೆ ಪ್ರಕಟಗೊಂಡಿರುವ ಎಐಸಿಪಿಐ ಅಂಕಿಅಂಶಗಳ ಪ್ರಕಾರ, ಈ ಬಾರಿಯೂ ಮೋದಿ ಸರ್ಕಾರವು ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸುವ ನಿರೀಕ್ಷೆ ಬಹುತೇಕ ಸ್ಪಷ್ಟವಾಗಿದೆ. ಇದುವರೆಗೆ ಜನವರಿಯಿಂದ ಜೂನ್ ವರೆಗಿನ ಅರ್ಧ ವರ್ಷದ ಎಐಸಿಪಿಐ ಅಂಕಿಅಂಶಗಳು ಪ್ರಕಟಗೊಂಡಿವೆ ಮತ್ತು ಶೀಘ್ರದಲ್ಲೇ ಸರ್ಕಾರವು ಡಿಎ ಹೆಚ್ಚಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಯಾವ ಆಧಾರದ ಮೇಲೆ ತುಟ್ಟಿಭತ್ಯೆ ಹೆಚ್ಚಾಗಲಿದೆ?
ಹಣದುಬ್ಬರದ ದರವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಹೆಚ್ಚಿಸುತ್ತದೆ. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರಗಳೂ ಕೂಡ ತುಟ್ಟಿಭತ್ಯೆ ಹೆಚ್ಚಿಸುತ್ತವೆ. ಹಣದುಬ್ಬರ ಹೆಚ್ಚಾದಷ್ಟೂ ಡಿಎ ಕೂಡ ಹೆಚ್ಚಾಗುತ್ತದೆ. ಕಾರ್ಮಿಕ ಬ್ಯೂರೋ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಲೆಕ್ಕಾಚಾರ ಮಾಡುತ್ತದೆ. ಇದನ್ನು ಗ್ರಾಹಕ ಬೆಲೆ ಸೂಚ್ಯಂಕ (CPI-IW) ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
ಇದನ್ನೂ ಓದಿ-ಜುಲೈ 20ಕ್ಕೆ ಹೊರಬೀಳಲಿದೆಯಾ ಈ ನಿರ್ಧಾರ? ಲಕ್ಷಾಂತರ ಜನರಿಗೆ ಸಿಗಲಿದೆ ಅದರ ಲಾಭ!
ಎಷ್ಟು ಹಣ ಹೆಚ್ಚಾಗುತ್ತದೆ
ಪ್ರಸ್ತುತ ಸರ್ಕಾರಿ ನೌಕರನ ಮೂಲ ವೇತನ 18000 ಆಗಿದ್ದರೆ, ಇದರ ಮೇಲೆ 42 ಪ್ರತಿಶತ ತುಟ್ಟಿಭತ್ಯೆ ಅಂದರೆ 7560 ರೂ. ತುಟ್ಟಿಭತ್ಯೆ ಸಿಗುತ್ತದೆ. ಆದರೆ ತುಟ್ಟಿಭತ್ಯೆ ಶೇ.46ಕ್ಕೆ ಹೆಚ್ಚಾದರೆ, ತುಟ್ಟಿಭತ್ಯೆ ತಿಂಗಳಿಗೆ ರೂ.8280ಕ್ಕೆ ಏರಿಕೆಯಾಗಲಿದೆ. ಅಂದರೆ ಪ್ರತಿ ತಿಂಗಳು 720 ರೂ.ನಂತೆ ವೇತನ ಹೆಚ್ಚಾಗಲಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.