ಬೆಂಗಳೂರು: ಹೋಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ ತನ್ನ ಲೈನಪ್ ಅನ್ನು ನವೀಕರಿಸುತ್ತಿದೆ. ಇವುಗಳಲ್ಲಿ ಹೋಂಡಾ ಎಸ್ಪಿ 125 ನ ಹೇವಿ ಇಂಜಿನ್ ಆವೃತ್ತಿಯಾಗಿರುವ ಹೋಂಡಾ ಎಸ್ಪಿ 160 ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಲಾಗಿದೆ  (Business News In Kannada). ಇದಾದ ಬಳಿಕ ಇದೀಗ ಕಂಪನಿ ತನ್ನ ಅಗ್ಗದ ಬೈಕ್ ಆಗಿರುವ ಸಿಡಿ ಡ್ರೀಮ್ ಡೀಲಕ್ಸ್ ನ ನವೀಕೃತ ಆವೃತ್ತಿ Honda CD110 Dream Deluxe ಅನ್ನು ಇದೀಗ ಬಿಡುಗಡೆ ಮಾಡಿದೆ. ಕಂಪನಿ ಈ ಬೈಕ್ ನಲ್ಲಿ ಕೆಲ ಹೊಸ ವೈಶಿಷ್ಟ್ಯಗಳ ಜೊತೆಗೆ ಹೊಸ ಬಣ್ಣದ ಆಯ್ಕೆಗಳನ್ನು ಕೂಡ ನೀಡಿದೆ. ಹಾಗಾದರೆ ತಡಮಾಡದೆ ಬನ್ನಿ ಈ ಬೈಕ್ ನ ನವೀಕೃತ ಪ್ರವೇಶ ಮಟ್ಟದ ಬೆಳೆಯಿಂದ ಹಿಡಿದು ವೈಶಿಷ್ಟ್ಯಗಳವರೆಗಿನ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ, 


COMMERCIAL BREAK
SCROLL TO CONTINUE READING

ಬೆಲೆ ಎಷ್ಟು?
ಹೋಂಡಾ ಈ ನವೀಕೃತ ಸಿಡಿ110 ಡ್ರೀಮ್ ಡೀಲಕ್ಸ್ ಅನ್ನು ಕೇವಲ ಒಂದೇ ಒಂದು ವೇರಿಯಂಟ್ ನಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಆರಂಭಿಕ ಬೆಳೆಯನ್ನು 73,400 ರೂ.ಗಳಿಗೆ (ದೆಹಲಿ ಎಕ್ಸ್ ಶೋ ರೂಂ ಬೆಲೆ) ಇರಿಸಲಾಗಿದೆ. 

ಇಂಜಿನ್ ವೈಶಿಷ್ಟ್ಯಗಳೇನು?
2023 ಹೋಂಡಾ ಸಿಡಿ 110 ಡ್ರೀಮ್ ಡೀಲಕ್ಸ್ ನಲ್ಲಿ ಕಂಪನಿ 109.51 ಸಿಸಿ PGM-Fi ಇಂಜಿನ್ ನೀಡಿದೆ ಮತ್ತು ಅದು OBD2 ಗೆ ಅನುಗುಣವಾಗಿದೆ. ಈ ಇಂಜಿನ್ 8.68 ಹೆಚ್ಪಿ ಪವರ್ ಹಾಗೂ 9.30 ಎನ್ಎಂಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಇಂಜಿನ್ ಅನ್ನು ನವೀಕರಿಸಿರುವ ಹೋಂಡಾ, ಇಂಹ್ಯಾಂಡ್ಸ ಸ್ಮಾರ್ಟ್ ಪಾವರ್ ತಂತ್ರಜ್ಞಾನವನ್ನು ನೀಡಿದ್ದು. ಅದು ಸೈಲೆಂಟ್ ಸ್ಟಾರ್ಟ್ ಅನ್ನು ಸ್ಟಾರ್ಟರ್ ಮೋಟಾರ್ ಹಾಗೂ ಪ್ರೋಗ್ರಾಮ್ ಫ್ಯೂಲ್ ಇಜೆಕ್ಷನ್ ಜೊತೆಗೆ ಕೇಂದ್ರೀಕೃತಗೊಂಡಿದೆ. 


ಇದನ್ನೂ ಓದಿ-ಈ ಕೆಲಸಗಳನ್ನು ಮನೆಯಿಂದಲೇ ಮಾಡಿ ಹಣ ಸಂಪಾದಿಸಲು ಕೇಂದ್ರ ಸರ್ಕಾರ ಸಹಾಯ ಮಾಡುತ್ತೆ ಗೊತ್ತಾ?

ವಿನ್ಯಾಸ ಮತ್ತು ಬಣ್ಣಗಳ ಆಯ್ಕೆ
ಈ ಬೈಕ್ ನ ಸೈಡ್ ಕವರ್ ಹಾಗೂ ಫ್ಯೂಯೆಲ್ ಟ್ಯಾಂಕ್ ಮೇಲೆ ಕಂಪನಿ ಸ್ಟೈಲಿಶ್ ಡಿಕಲ್ಸ್, ಮಫ್ಲರ್ ಮೇಲೆ ಕ್ರೋಮ್ ಶೀಲ್ಡ್ ಹಾಗೂ ಫೈವ್ ಸ್ಪೋಕ್ ಸಿಲ್ವರ್ ಆಲಾಯ್ ವ್ಹೀಲ್ ಗಳಂತಹ ಹೈಲೈಟ್ ಜೊತೆಗೆ ಸಂಪೂರ್ಣ ವಿನ್ಯಾಸ ಒಂದೇ ತೆರನಾಗಿದೆ. ಹೋಂಡಾ, ನವೀಕೃತ ಸಿಡಿ 110 ಬೈಕ್ ಅನ್ನು ಒಟ್ಟು ನಾಲ್ಕು ಷೆಡ್ ಗಳಲ್ಲಿ ಪರಿಚಯಿಸಿದೆ. ಇವುಗಳಲ್ಲಿ ಕಪ್ಪು ಬಣ್ಣದ ಜೊತೆಗೆ ಕೆಂಪು, ಕಪ್ಪು ಬಣ್ಣಗಳ ಜೊತೆಗೆ ನೀಲಿ, ಕಪ್ಪು-ಹಸಿರು ಮಾತು ಬ್ಲಾಕ್-ಗ್ರೇ ಶಾಮೀಲಾಗಿವೆ.


ಇದನ್ನೂ ಓದಿ-SBI ಗ್ರಾಹಕರಿಗೊಂದು ಭಾರಿ ಸಂತಸದ ಸುದ್ದಿ!

ಫೀಚರ್ ಗಳು ಇಂತಿವೆ
2023 ಹೋಂಡಾ ಸಿಡಿ ಡ್ರೀಮ್ ಡೀಲಕ್ಸ್ ನಲ್ಲಿ ಸಿಗುವ ವೈಶಿಷ್ಟ್ಯಗಳಲ್ಲಿ ಲೈನಿಂಗ್, ಇಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ಸೈಡ್ ಸ್ಟಾಂಡ್ ಇಂಜಿನ್ ಕಿಲ್ಲ್, ಇಕ್ವಲೈಸರ್, ಕಾಂಬಿ ಬ್ರೇಕ್ ಸಿಸ್ಟಂ, ಆಲಾಯ್ ವೀಲ್, ಟ್ಯೂಬ್ ಲೆಸ್ ಟೈರ್ ಗಳಂತಹ ವೈಶಿಷ್ಟ್ಯಗಳು ಶಾಮೀಲಾಗಿವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.