ಚಿನ್ನದ ದರ ಏರಿಕೆಯ ಚಿಂತೆ ಬೇಡ : ದೀಪಾವಳಿ ವೇಳೆಯಲ್ಲಿ ಅಗ್ಗದ ಬೆಲೆಯಲ್ಲಿ ಚಿನ್ನವನ್ನು ಹೀಗೆ ಖರೀದಿಸಿ !
Gold at cheapest Rate : ದೀಪಾವಳಿ ಹಬ್ಬಕ್ಕೆ ಚಿನ್ನ ಖರೀದಿಸುವುದು ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದುಬಾರಿಯಾಗಿದೆ. ಆದರೆ, ಹಬ್ಬದ ವೇಳೆ ಅಗ್ಗದ ದರಕ್ಕೆ ಚಿನ್ನ ಖರೀದಿಸುವ ಅವಕಾಶವಿದೆ.
Gold at cheapest Rate : ದೇಶದಲ್ಲಿ ಹಬ್ಬದ ಸೀಸನ್ ನಡೆಯುತ್ತಿದೆ. ಹಿಂದೂಗಳ ಬಹು ದೊಡ್ಡ ಹಬ್ಬ ದೀಪಾವಳಿ. ಈ ಹಬ್ಬಕ್ಕೆ ಚಿನ್ನ ಖರೀದಿಸುವುದು ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದುಬಾರಿಯಾಗಿದೆ. ಆದರೆ, ಹಬ್ಬದ ವೇಳೆ ಅಗ್ಗದ ದರಕ್ಕೆ ಚಿನ್ನ ಖರೀದಿಸುವ ಅವಕಾಶವಿದೆ. Fintech ಪ್ರಮುಖ್ PhonePe ಧನತ್ರಯೋದಶಿ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ 24 ಕ್ಯಾರೆಟ್ ಚಿನ್ನದ ಮೇಲೆ ಕ್ಯಾಶ್ಬ್ಯಾಕ್ ಕೊಡುಗೆಯನ್ನು ಘೋಷಿಸಿದೆ. PhonePe ನಿಂದ ಕನಿಷ್ಠ 1000 ರೂಪಾಯಿಯ ಡಿಜಿಟಲ್ ಚಿನ್ನವನ್ನು ಖರೀದಿಸುವ ಗ್ರಾಹಕರು 3000 ರೂಪಾಯಿಗಳವರೆಗೆ ಖಾತರಿಯ ಕ್ಯಾಶ್‌ಬ್ಯಾಕ್ ಪಡೆಯಬಹುದು.
ನವೆಂಬರ್ 9 ರಿಂದ 12, 2023 ರವರೆಗೆ ಕನಿಷ್ಠ 1,000 ರೂಪಾಯಿಗಳ ಡಿಜಿಟಲ್ ಚಿನ್ನ ಖರೀದಿ ಮೇಲೆ ಈ ಆಫರ್ ನೀಡಲಾಗಿದೆ. ಚಿನ್ನ ಖರೀದಿಸುವಾಗ PhonePe ಮೂಲಕ ಮಾಡುವ ವಹಿವಾಟಿನ ಮೇಲೆ ಈ ಆಫರ್ ನೀಡಲಾಗುವುದು. ಒಬ್ಬ ಗ್ರಾಹಕ ಒಂದು ಬಾರಿ ಆ ಆಫರ್ ನ ಲಾಭ ಪಡೆದುಕೊಳ್ಳಬಹುದು ಎಂದು PhonePe ಹೇಳಿದೆ. ಅಲ್ಲದೆ, ಬ್ಯಾಂಕ್ ದರ್ಜೆಯ ಚಿನ್ನದ ಲಾಕರ್‌ಗಳು 5 ವರ್ಷಗಳವರೆಗೆ ಉಚಿತವಾಗಿ ಸಿಗಲಿದೆ.
ಇದನ್ನೂ ಓದಿ : ದೇಶಾದ್ಯಂತ 12ನೇ ತರಗತಿವರೆಗಿನ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಗೆ ಮುಂದಾದ ಕೇಂದ್ರ ಸರ್ಕಾರ!
PhonePe ನಲ್ಲಿ ಅಗ್ಗದ ಚಿನ್ನವನ್ನು ಹೇಗೆ ಖರೀದಿಸುವುದು?
-PhonePe ಆ್ಯಪ್ ಮುಖಪುಟದ ಕೆಳಭಾಗದಲ್ಲಿರುವ 'Wealth' ಅನ್ನು ಟ್ಯಾಪ್ ಮಾಡಿ.
-ವೆಲ್ತ್ ಸ್ಕ್ರೀನ್ ಮೇಲೆ 'ಗೋಲ್ಡ್' ಆಯ್ಕೆಮಾಡಿ.
-'Buy One Time' ಆಯ್ಕೆಮಾಡಿ.
- 'Buy in rupees'ಆಯ್ಕೆಮಾಡಿ ಮತ್ತು ನೀವು ಖರೀದಿಸಲು ಬಯಸುವ 24 ಕ್ಯಾರೆಟ್ ಚಿನ್ನದ ಮೊತ್ತವನ್ನು ಸೂಚಿಸಿ. ಕನಿಷ್ಠ 1000 ರೂ.ಗಳಿಂದ ಖರೀದಿ ಪ್ರಾರಂಭಿಸಿ.
-ಚಿನ್ನದ ಖರೀದಿಯ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ 'Proceed to Pay' ಕ್ಲಿಕ್ ಮಾಡಿ.
ಗ್ರಾಹಕರು ಶೂನ್ಯ ಮೇಕಿಂಗ್ ಶುಲ್ಕಗಳೊಂದಿಗೆ ಪ್ರಮಾಣೀಕೃತ 24K ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಖರೀದಿಸಬಹುದು. ಇದರ ಜೊತೆಗೆ ವಿಮೆ ಮಾಡಲಾದ ಬ್ಯಾಂಕ್ ದರ್ಜೆಯ ಚಿನ್ನದ ಲಾಕರ್‌ಗಳನ್ನು ಕೂಡಾ ಪಡೆಯಬಹುದು.
ಇದನ್ನೂ ಓದಿ : ನೈಕಾ ಶೇರ್ 5% ಹೆಚ್ಚಳ:ಮುಂದಿನ 12 ತಿಂಗಳುಗಳಲ್ಲಿ 40% ಸಂಭಾವ್ಯ ಏರಿಕೆ ಯೋಜನೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ