Free ಮನೆಗೆ ತನ್ನಿ ಈ ಎಲೆಕ್ಟ್ರಿಕ್ ಸ್ಕೂಟರ್! ಜೊತೆಗೆ 10000 ಡಿಸ್ಕೌಂಟ್ ಪಡೆಯಿರಿ.. ಏನಿದು ಸ್ಕ್ಕೀಮ್?
Ola Electric ತನ್ನ ಎರಡೂ ಎಲೆಕ್ಟ್ರಿಕ್ ಸ್ಕೂಟರ್ ಗಳಾಗಿರುವ ಎಸ್1 ಮತ್ತು ಎಸ್1 ಪ್ರೊ ಮೇಲೆ ಜಬರ್ದಸ್ತ್ ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆಯಲ್ಲಿ ಕ್ಯಾಶ್ ಡಿಸ್ಕೌಂಟ್ ಜೊತೆಗೆ ಝೀರೋ ಡೌನ್ ಪೇಮೆಂಟ್ ಕೂಡ ಶಾಮೀಲಾಗಿವೆ.
Ola Electric Scooter Offer: ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಸಹ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಚಿಸುತ್ತಿದ್ದರೆ, ಈ ಸುದ್ದಿ ವಿಶೇಷ ನಿಮಗಾಗಿ. ಏಕೆಂದರೆ ಓಲಾ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಅದ್ಭುತ ಕೊಡುಗೆಗಳನ್ನು ನೀಡುತ್ತಿದೆ. ಓಲಾ ಎಲೆಕ್ಟ್ರಿಕ್‌ನಿಂದ ಈ ವರ್ಷಾಂತ್ಯದ 'ಡಿಸೆಂಬರ್ ಟು ರಿಮೆಂಬರ್' ಕೊಡುಗೆಯ ಅಡಿಯಲ್ಲಿ, ನೀವು ಕಂಪನಿಯ ಸ್ಕೂಟರ್‌ಗಳಾದ S1 ಮತ್ತು S1 ಪ್ರೊ ಎರಡನ್ನೂ ಬಂಪರ್ ರಿಯಾಯಿತಿ ಮೇಲೆ ಖರೀದಿಸಬಹುದು, ಶೂನ್ಯ ಡೌನ್ ಪಾವತಿ ಮತ್ತು ಕಡಿಮೆ ಬಡ್ಡಿದರದ ಮೇಲೆ EMI ಗಳೊಂದಿಗೆ ಈ ಸ್ಕೂಟರ್ ಗಳನ್ನು ನೀವು ಮನೆಗೆ ತರಬಹುದು.
ಕಂಪನಿಯು ಝೀರೋ ಡೌನ್‌ಪೇಮೆಂಟ್ ಮಾತ್ರವಲ್ಲದೆ ತನ್ನ ಸ್ಕೂಟರ್‌ಗಳ ಮೇಲೆ ನಗದು ರಿಯಾಯಿತಿಯನ್ನೂ ಸಹ ನೀಡುತ್ತಿದೆ. ನೀವು ಈ ತಿಂಗಳು Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದರೆ, ನೀವು ಅದರ ಮೇಲೆ 10,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಈ ಸ್ಕೂಟರ್‌ನ ಬೆಲೆ 1.30 ಲಕ್ಷ (ಎಕ್ಸ್ ಶೋ ರೂಂ) ಆಗಿದ್ದು, ಇದರ ಮೇಲೆ ನೀವು 10,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯುವಿರಿ.
ಸ್ಕೂಟರ್‌ಗಳ ಖರೀದಿಯ ಮೇಲೆ ಇನ್ನೂ ಹಲವು ಕೊಡುಗೆಗಳಿವೆ
ಓಲಾ ಎಲೆಕ್ಟ್ರಿಕ್ ಸೆಪ್ಟೆಂಬರ್‌ನಲ್ಲಿ ಎಸ್ 1 ಪ್ರೊನಲ್ಲಿ 10,000 ರೂಪಾಯಿಗಳ ರಿಯಾಯಿತಿ ಕೊಡುಗೆಯನ್ನು ಪರಿಚಯಿಸಿದೆ, ಅದನ್ನು ಕಂಪನಿ ಇದೀಗ ಡಿಸೆಂಬರ್‌ವರೆಗೆ ವಿಸ್ತರಿಸಿದೆ. ಇದಲ್ಲದೇ, S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿಯ ಮೇಲೆ, ನೀವು ಒಂದು ವರ್ಷಕ್ಕೆ 3,999 ರೂ ಮೌಲ್ಯದ ಉಚಿತ ಸೇವೆಯನ್ನು ಪಡೆಯಬಹುದು ಮತ್ತು ಓಲಾ ಹೈಪರ್‌ಚಾರ್ಜರ್ ನೆಟ್‌ವರ್ಕ್‌ಗೆ ಉಚಿತ ಪ್ರವೇಶವನ್ನು ಪಡೆಯಬಹುದು.
ಇದನ್ನೂ ಓದಿ-Best Mileage Scooters: ಅತ್ಯುತ್ತಮ ಮೈಲೇಜ್ ನೀಡುವ ಸ್ಕೂಟರ್ ಯಾವುದು ಗೊತ್ತಾ... ವರದಿ ಓದಿ
ಇದರೊಂದಿಗೆ, ಕಂಪನಿಯು ಸಾಲದ ಮೇಲೆ ಶೂನ್ಯ ಸಂಸ್ಕರಣಾ ಶುಲ್ಕ ಯೋಜನೆಯನ್ನು ಸಹ ಘೋಷಿಸಿದೆ. ಅಂದರೆ ಗ್ರಾಹಕರು ಸಾಲವನ್ನು ಪಡೆಯಲು ಯಾವುದೇ ಪ್ರೊಸೆಸಿಂಗ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಸ್ಕೂಟರ್ ಖರೀದಿಯ ಮೇಲೆ, ಗ್ರಾಹಕರು ಕೇವಲ 2,499 ರೂಗಳ ಆರಂಭಿಕ EMI ಅನ್ನು ಪಾವತಿಸಬಹುದು ಮತ್ತು ಅದರ ಬಡ್ಡಿ ದರವು ಶೇ.8.99 ರಿಂದ ಪ್ರಾರಂಭವಾಗುತ್ತದೆ.
ಇದನ್ನೂ ಓದಿ-Nitin Gadkari: ದೇಶದ ನಾಗರಿಕರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ
ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಹೆಚ್ಚುವರಿ ಶೇ.5ರಷ್ಟು ರಿಯಾಯಿತಿ
ನೀವು Ola ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ EMI ನಲ್ಲಿ ಖರೀದಿಸಿದರೆ, ನೀವು ಶೇ.5 ರಷ್ಟು ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಈ ಕೊಡುಗೆಯು ಕೆಲವು ಆಯ್ದ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಗಳಿಗೆ ಮಾತ್ರ ಲಭ್ಯವಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.