Amazon Great Indian Festival Sale: ಅಮೆಜಾನ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಯುತ್ತಿದೆ. ಮುಂದಿನ ಕೆಲವು ದಿನಗಳವರೆಗೆ ಮಾತ್ರ ಇದರ ಪ್ರಯೋಜನವು ಲಭ್ಯವಿರುತ್ತದೆ. ಈ ಸಮಯದಲ್ಲಿ ಮೊಬೈಲ್‌, ಟಿವಿ, ಎಲೆಕ್ಟ್ರಾನಿಕ್‌ ವಸ್ತುಗಳು ಸೇರಿದಂತೆ ಅನೇಕ ಸಾಧನಗಳ ಮೇಲೆ ಭರ್ಜರಿ ರಿಯಾಯಿತಿ ಲಭ್ಯವಿರುತ್ತವೆ. ನೀವು Xiaomiಯ ದೊಡ್ಡ ಪರದೆಯ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಬೆಲೆಗಿಂತಲೂ ಅಗ್ಗದ ಬೆಲೆಯಲ್ಲಿ ಖರೀದಿಸಿ ಮನೆಗೆ ಕೊಂಡೊಯ್ಯಬಹುದು.


COMMERCIAL BREAK
SCROLL TO CONTINUE READING

ಗ್ರಾಹಕರಿಗೆ ಕೇವಲ 20 ಸಾವಿರ ರೂ. ಬೆಲೆಯಲ್ಲಿ 43 ಇಂಚಿನ ಪರದೆಯ ಟಿವಿ ಖರೀದಿಸಲು ಉತ್ತಮ ಅವಕಾಶ ಸಿಗುತ್ತಿದೆ. ಫ್ಲಾಟ್ ರಿಯಾಯಿತಿಗಳ ಜೊತೆಗೆ ವಿಶೇಷ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿದೆ. Xiaomi ಸ್ಮಾರ್ಟ್ ಟಿವಿ ಶ್ರೇಣಿಯು ವಿಶೇಷ ವೈಶಿಷ್ಟ್ಯಗಳು ಮತ್ತು ಪ್ರೀಮಿಯಂ ವಿನ್ಯಾಸದೊಂದಿಗೆ ಬರುತ್ತದೆ. 43-ಇಂಚಿನ ಪರದೆಯ ಗಾತ್ರದ Xiaomi A Pro ಸರಣಿಯ ಟಿವಿಗಳ ಮೇಲೆ ಗ್ರಾಹಕರಿಗೆ ಭಾರೀ ರಿಯಾಯಿತಿ ದೊರೆಯುತ್ತಿದೆ. ಇದು 4K ರೆಸಲ್ಯೂಶನ್ ಹೊಂದಿರುವ ಟಿವಿ. ಇದು ಡಾಲ್ಬಿ ವಿಷನ್ ಮತ್ತು ಡಾಲ್ಬಿ ಆಡಿಯೋಗೆ ಬೆಂಬಲವನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿಯು ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಂ ಹೊಂದಿದ್ದು, ಶಕ್ತಿಯುತ ಆಡಿಯೋಗಾಗಿ ಇದು 30W ಸಾಮರ್ಥ್ಯದ ಸ್ಪೀಕರ್‌ಗಳನ್ನು ಹೊಂದಿದೆ.


ಇದನ್ನೂ ಓದಿ: ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ ಕೇವಲ 8 ಸಾವಿರಕ್ಕೆ ಮಾರಾಟವಾಗುತ್ತಿರುವ ಫೋನ್‌ಗಳು!


Xiaomi ಸ್ಮಾರ್ಟ್ ಟಿವಿ ಆಫರ್!


43-ಇಂಚಿನ ಸ್ಕ್ರೀನ್‌ನ Xiaomiಯ ಈ ಸ್ಮಾರ್ಟ್‌ಟಿವಿಯು ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ ಮಾರಾಟದ ಸಮಯದಲ್ಲಿ 22,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದು ಅದರ ಬಿಡುಗಡೆ ಬೆಲೆಗಿಂತಲೂ ಕಡಿಮೆ. ಇದಲ್ಲದೆ ಗ್ರಾಹಕರು SBI ಬ್ಯಾಂಕ್ ಕಾರ್ಡ್‌ನಿಂದ ಪಾವತಿಸಿದರೆ ಗರಿಷ್ಠ 4,000 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಹೀಗಾಗಿ ನೀವು ಈ ಟಿವಿಯನ್ನು ಸುಮಾರು 20 ಸಾವಿರ ರೂ.ಗೆ ಖರೀದಿಸಬಹುದು.


Xiaomi ಸ್ಮಾರ್ಟ್ ಟಿವಿಯ ವೈಶಿಷ್ಟ್ಯಗಳು


Xiaomi ಸ್ಮಾರ್ಟ್ ಟಿವಿಯು 60Hz ರಿಫ್ರೆಶ್ ರೇಟ್‌ನೊಂದಿಗೆ 43-ಇಂಚಿನ 4K ಅಲ್ಟ್ರಾ HD (3840×2160) ರೆಸಲ್ಯೂಶನ್ ಡಿಸ್ಪ್ಲೇಯನ್ನು ಹೊಂದಿದೆ. ಡ್ಯುಯಲ್ ಬ್ಯಾಂಡ್ ವೈಫೈ ಹೊರತುಪಡಿಸಿ, ಈ ಟಿವಿ ಸಂಪರ್ಕಕ್ಕಾಗಿ ಮೂರು HDMI ಪೋರ್ಟ್ಗಳನ್ನು ಹೊಂದಿದೆ. ಇದು ಎರಡು USB ಪೋರ್ಟ್ಗಳನ್ನು ಹೊಂದಿದ್ದು, ಅನೇಕ ಸಂಪರ್ಕ ಆಯ್ಕೆಗಳು ಸಹ ಲಭ್ಯವಿದೆ. Dolby Audio ಬೆಂಬಲದೊಂದಿಗೆ ಟಿವಿ 30W ಸ್ಪೀಕರ್‌ಗಳನ್ನು ಹೊಂದಿದೆ. ಇದಲ್ಲದೆ ಹಲವಾರ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಗೂಗಲ್ ಟಿವಿ ಸಾಫ್ಟ್‌ವೇರ್‌ ಹೊರತುಪಡಿಸಿ ಈ ಟಿವಿ ಸ್ಕ್ರೀನ್ ಮಿರರಿಂಗ್ ಆಯ್ಕೆಯನ್ನು ಹೊಂದಿದ್ದು, ಗೂಗಲ್ ಅಸಿಸ್ಟೆಂಟ್ ಬೆಂಬಲವನ್ನು ಸಹ ನೀಡುತ್ತದೆ.


ಇದನ್ನೂ ಓದಿ: ಒಂದೇ ಒಂದು ಲೀಟರ್ ಕತ್ತೆ ಹಾಲಿನ ಬೆಲೆ ಕೇಳಿದ್ರೆ ನಿಮ್ಮ ಮೈಂಡ್‌ ಬ್ಲ್ಯಾಂಕ್‌ ಆಗುತ್ತೆ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.