ಇನ್ನೂ ಬಂದಿಲ್ಲವೇ Income Tax Refund? ಹೀಗೆ ಮಾಡಿ ನೋಡಿ, ತಕ್ಷಣ ಖಾತೆಗೆ ಬೀಳುವುದು ರಿಫಂಡ್ ಮೊತ್ತ
ಐಟಿಆರ್ ಸಲ್ಲಿಸಿದ್ದರೂ ಇನ್ನೂ ಅನೇಕರಿಗೆ ರಿಫಂಡ್ ಆಗಿಲ್ಲ. ಒಂದು ವೇಳೆ ರಿಫಂಡ್ ಆಗದೇ ಹೋದಲ್ಲಿ ನೀವು ಮಾಡಬೇಕಾದ ಕೆಲಸ ಇದು .
Income Tax Refund: ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ನಂತರವೂ ಇನ್ನೂ ರಿಫಂಡ್ ಖಾತೆಗೆ ಬಂದಿಲ್ಲ ಎಂದು ಚಿಂತೆ ಮಾಡುತ್ತಿದ್ದೀರಾ? ಹೀಗೆ ಸುಮ್ಮನೆ ಚಿಂತಿಸುವ ಬದಲು ಇನ್ನೂ ರಿಫಂಡ್ ಯಾಕೆ ಆಗಿಲ್ಲ ಎಂದು ತಿಳಿದುಕೊಳ್ಳುವ ಅಗತ್ಯವಿದೆ.ಈ ಬಾರಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ 2024 ಆಗಿತ್ತು.ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಸಿದವರಿಗೆ ಆದಾಯ ತೆರಿಗೆ ಇಲಾಖೆಯಿಂದ ರಿಫಂಡ್ ಕೂಡಾ ಆಗಿದೆ.ಇದೀಗ ಇನ್ನೂ ಅನೇಕ ತೆರಿಗೆದಾರರು ಮರುಪಾವತಿಗಾಗಿ ಕಾಯುತ್ತಿದ್ದಾರೆ.
ರಿಫಂಡ್ ಗಾಗಿ ಎಷ್ಟು ಸಮಯ ಬೇಕಾಗುತ್ತದೆ ? :
ಸರಿಯಾದ ಸಮಯಕ್ಕೆ ಐಟಿಆರ್ ಸಲ್ಲಿಸಿದ್ದರೂ ಮರುಪಾವತಿ ವಿಳಂಬವಾಗುತ್ತಿದೆ ಎಂದರೆ ನೀವು ನೀಡಿರುವ ಬ್ಯಾಂಕ್ ಖಾತೆ ಮಾಹಿತಿ ತಪ್ಪಾಗಿರಬಹುದು. ಅಥವಾ ತಪ್ಪು ಆದಾಯ ತೆರಿಗೆ ಮರುಪಾವತಿಯನ್ನು ಕ್ಲೈಮ್ ಮಾಡಿರಬಹುದು.ಈಗಾಗಲೇ ಪಾವತಿಸಿದ ಮೊತ್ತವು ನಿಜವಾದ ಹೊಣೆಗಾರಿಕೆಗಿಂತ ಹೆಚ್ಚಿದ್ದಾಗ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ಮರುಪಾವತಿ ನೀಡಲಾಗುತ್ತದೆ. ಎಲ್ಲಾ ಕಡಿತಗಳು ಮತ್ತು ವಿನಾಯಿತಿಗಳನ್ನು ಗಣನೆಗೆ ತೆಗೆದುಕೊಂಡ ನಂತರ ಆದಾಯ ತೆರಿಗೆ ಇಲಾಖೆ ತೆರಿಗೆ ಮರುಪಾವತಿಯನ್ನು ಲೆಕ್ಕಹಾಕಲಾಗುತ್ತದೆ. ಸಾಮಾನ್ಯವಾಗಿ, ಆದಾಯ ತೆರಿಗೆ ಮರುಪಾವತಿ ಹಣವನ್ನು 30 ರಿಂದ 45 ದಿನಗಳಲ್ಲಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.ಕೆಲವು ಸಂದರ್ಭಗಳಲ್ಲಿ, ತೆರಿಗೆದಾರರು ಎರಡು ವಾರಗಳಲ್ಲಿಯೂ ತೆರಿಗೆ ಮರುಪಾವತಿಯನ್ನು ಪಡೆಯುತ್ತಾರೆ.
ಇದನ್ನೂ ಓದಿ: ಅಕ್ಟೋಬರ್ ಒಂದರಿಂದ ಬದಲಾಗುವುದು ಸುಕನ್ಯ ಸಮೃದ್ದಿ ನಿಯಮ!ಬಡ್ಡಿಯ ಮೇಲೆಯೇ ನೇರ ಪರಿಣಾಮ !
ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಿದ ನಂತರ ಅದನ್ನು ವೆರಿಫೈ ಮಾಡಬೇಕಾಗುತ್ತದೆ. ನಂತರ ಅದನ್ನು ಇಲಾಖೆಯು ಪ್ರಕ್ರಿಯೆಗೊಳಿಸುತ್ತದೆ.ಒಂದು ವೇಳೆ, ನೀವು ಸಲ್ಲಿಸಿದ ದಾಖಲೆ ಸರಿಯಾಗಿದೆ ಎಂದಾದರೆ ನಿಮಗೆ ಸೆಕ್ಷನ್ 143(1) ಅಡಿಯಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ.ಇನ್ಕಮ್ ಟ್ಯಾಕ್ಸ್ ರಿಫಂಡ್ ನಿಮಗೆ ಬರುವುದಾದರೆ ಬಡ್ಡಿ ಸಮೇತ ಆ ಹಣವನ್ನು ನಿಮ್ಮ ಖಾತೆಗೆ ಹಾಕಲಾಗುವುದು. ಒಂದು ವೇಳೆ 30 ರಿಂದ 45 ದಿನಗಳಲ್ಲಿ ಹಣ ನಿಮ್ಮ ಖಾತೆಗೆ ಬಾರದೇ ಹೋದಲ್ಲಿ ನೀವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮರುಪಾವತಿಯ ಮರು ವಿತರಣೆಗೆ ವಿನಂತಿ:
ತೆರಿಗೆದಾರರಿಂದ ಆಗಿರುವ ತಪ್ಪಿನಿಂದಾಗಿ ಮರುಪಾವತಿಯಲ್ಲಿ ವಿಳಂಬವಾಗಬಹುದು.ಅಥವಾ ಇಲಾಖೆಯ ಕಡೆಯಿಂದ ಏನಾದರೂ ಸಮಸ್ಯೆಗಳು ಎದುರಾದಲ್ಲಿ ಕೂಡಾ ಮರುಪಾವತಿ ವಿಳಂಬವಾಗಬಹುದು.ನೀವು ಐಟಿಆರ್ ಸಲ್ಲಿಸಿ ಹೆಚ್ಚು ಸಮಯ ಆಗಿದ್ದರೆ ಮರುಪಾವತಿಯನ್ನು ಮರು-ವಿತರಣೆಗಾಗಿ ವಿನಂತಿಸಬಹುದು.
ಇದನ್ನೂ ಓದಿ: ನಿಮ್ಮ ಬಳಿ ಇದೊಂದಿದ್ದರೆ ಸಾಕು, ನಯಾ ಪೈಸೆ ಖರ್ಚಿಲ್ಲದೆ ತಿಂಗಳಿಗೆ 1 ಲಕ್ಷದವರೆಗೆ ಗಳಿಸಬಹುದು!
ರಿಫಂಡ್ ಅನ್ನು ರೀ ಇಶ್ಯೂ ಮಾಡಲು ವಿನಂತಿಸುವುದು ಹೇಗೆ ? :
೧.ಮೊದಲನೆಯದಾಗಿ ITR ಫೈಲಿಂಗ್ ಪೋರ್ಟಲ್‌ಗೆ ಹೋಗಿ ಮತ್ತು ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ.
೨.ಇದರ ನಂತರ ‘Services’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ‘Refund Reissue’ ಕ್ಲಿಕ್ ಮಾಡಿ.
೩.ಇಲ್ಲಿ ಕ್ಲಿಕ್ ಮಾಡುವುದರಿಂದ ಹೊಸ ವೆಬ್‌ಪುಟ ತೆರೆಯುತ್ತದೆ. ಇಲ್ಲಿ ನೀವು 'creat refund reissue request'ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇದರ ನಂತರ, ರಿಫಂಡ್ ಅನ್ನು ರೀ ಇಶ್ಯೂಗೆ ವಿನಂತಿಸಲು ಬಯಸುವ ITR ಅನ್ನು ಆಯ್ಕೆಮಾಡಿ.ಇದು ಪೂರ್ಣಗೊಂಡ ನಂತರ, Next ಕ್ಲಿಕ್ ಮಾಡಿ.
೪.ನೀವು ಮರುಪಾವತಿಯನ್ನು ತೆಗೆದುಕೊಳ್ಳಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿ.
೫. ಇದರ ನಂತರ Next ಅನ್ನು ಕ್ಲಿಕ್ ಮಾಡಿ.
೬. ವೆರಿಫಿಕೆಶನ್ ವಿಧಾನದಿಂದ ಆಧಾರ್ OTP, EVC ಅಥವಾ DSC ಅನ್ನು ಆಯ್ಕೆ ಮಾಡಿ.
೭. OTP ಸ್ವೀಕರಿಸಿದ ನಂತರ, ಅದನ್ನು ನಮೂದಿಸಿ ಮತ್ತು ಅದನ್ನು ಪ್ರಕ್ರಿಯೆಗೊಳಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.