7th Pay Commission DA Hike: ದೇಶಾದ್ಯಂತ 48 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಸುಮಾರು 65 ಲಕ್ಷ ಪಿಂಚಣಿದಾರರು ದೀಪಾವಳಿಗೂ ಮುನ್ನ ಉಡುಗೊರೆ ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಇಂದು ಸಚಿವ ಸಂಪುಟ ಸಭೆ ನಡೆಯಲಿದೆ. ಕೇಂದ್ರ ನೌಕರರ ತುಟ್ಟಿ ಭತ್ಯೆ (ಡಿಎ ) ಹೆಚ್ಚಳ ಕುರಿತು ಇಂದಿನ ಸಭೆಯಲ್ಲಿ ನಿರ್ಧಾರ ಹೊರ ಬೀಳಲಿದೆ. 


COMMERCIAL BREAK
SCROLL TO CONTINUE READING

ಈ ಬಾರಿಯೂ ಕೇಂದ್ರ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳವಾಗಲಿದೆ. ತುಟ್ಟಿಭತ್ಯೆಯಲ್ಲಿನ ಹೆಚ್ಚಳ ನಿರ್ಧಾರಕ್ಕೆ ಇಂದೇ ಅನುಮೋದನೆ ಬೀಳಲಿದೆ.   ತುಟ್ಟಿಭತ್ಯೆ ಹೆಚ್ಚಳಕ್ಕೆ ಇಂದು ಸರ್ಕಾರದ ಅನುಮೋದನೆ ಬಿದ್ದರೆ ತಕ್ಷಣದಿಂದಲೇ ನೌಕರರ ವೇತನವು ಹೆಚ್ಚಾಗುತ್ತದೆ. ಇದರೊಂದಿಗೆ ಇಲ್ಲಿವರೆಗಿನ ಬಾಕಿ ಡಿಎ ಕೂಡಾ ನೌಕರರ ಕೈ ಸೇರಲಿದೆ.  


ಇದನ್ನೂ ಓದಿ : ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ಘೋಷಿಸಿದ ಸರ್ಕಾರ ! ಯಾರ ಖಾತೆಗೆ ಎಷ್ಟು ಹಣ ?


ಪ್ರಸ್ತುತ ಡಿಎ 42 ಶೇಕಡಾ ದರದಲ್ಲಿ  ತುಟ್ಟಿಭತ್ಯೆ : 
ಅಕ್ಟೋಬರ್ ತಿಂಗಳಲ್ಲಿ, ಹೆಚ್ಚಿದ ಸಂಬಳದ ಜೊತೆಗೆ, ನೌಕರರು ಬಾಕಿ ಡಿಎಯ ಮೊತ್ತವನ್ನು ಕೂಡಾ ಪಡೆಯಲಿದ್ದಾರೆ ಎನ್ನಲಾಗಿದೆ. ಪ್ರಸ್ತುತ, ನೌಕರರು 42 ಪ್ರತಿಶತದಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಒಂದು ವೇಳೆ ಈ ಬಾರಿ ಇದನ್ನು ಶೇಕಡಾ 4 ರಷ್ಟು ಹೆಚ್ಚಳ ಮಾಡಿದರೆ ಕೇಂದ್ರ ನೌಕರರು ಪಡೆಯುವ ಒಟ್ಟು ತುಟ್ಟಿಭತ್ಯೆ ಶೇಕಡಾ 46 ಕ್ಕೆ ಏರಲಿದೆ. 


ಖಾತೆ ಸೇರುವುದು 3 ತಿಂಗಳ ಹಣ : 
ಈ ತುಟ್ಟಿಭತ್ಯೆ ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಅಂದರೆ ನೌಕರರು 3 ತಿಂಗಳ ಬಾಕಿ ಹಣವನ್ನು ಅಂದರೆ ಡಿಎ ಅರಿಯರ್ಸ್ ಕೂಡಾ ಪಡೆಯುತ್ತಾರೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ ವರೆಗಿನ ಬಾಕಿ ತುಟ್ಟಿ ಭತ್ಯೆ (ಡಿಎ ಬಾಕಿ) ಕೂಡಾ ನೀಡಲಾಗುವುದು. ಕಳೆದ ಬಾರಿ ಮಾರ್ಚ್ ತಿಂಗಳಿನಲ್ಲಿಯೂ ಸರ್ಕಾರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಿತ್ತು. 


ಇದನ್ನೂ ಓದಿ : Tata Harrier: ಬಂದಿದೆ ಹೊಸ ಟಾಟಾ ಹ್ಯಾರಿಯರ್, ಬೆಲೆ & ವೈಶಿಷ್ಟ್ಯಗಳನ್ನು ತಿಳಿಯಿರಿ


ಕಳೆದ 3 ವರ್ಷಗಳಿಂದ ಅಕ್ಟೋಬರ್‌ನಲ್ಲಿ ಡಿಎ ಹೆಚ್ಚಳವಾಗುತ್ತಿದೆ:
ಕಳೆದ 3 ವರ್ಷಗಳ ಟ್ರೆಂಡ್ ನೋಡಿದರೆ, ಸರ್ಕಾರ ಅಕ್ಟೋಬರ್ ತಿಂಗಳಿನಲ್ಲಿಯೇ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸುತ್ತದೆ. ಈ ಬಾರಿಯೂ ನವರಾತ್ರಿಯ ಸಮಯದಲ್ಲಿ ಸರ್ಕಾರವು ಡಿಎ ಹೆಚ್ಚಳವನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಅಕ್ಟೋಬರ್ 18ರಂದು ನಡೆಯಲಿರುವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಡಿಎ ಹೆಚ್ಚಳವನ್ನೂ ಸೇರಿಸಬಹುದು. 


ಮೂಲ ವೇತನದ ಲೆಕ್ಕಾಚಾರ ಹೇಗಿರುತ್ತದೆ ? ( 56,900 ರೂ.ಗೆ )


>> ಮೂಲ ವೇತನ - 56,900 ರೂ 
>> ಹೊಸ ಡಿಎ (ಶೇ 46) - ತಿಂಗಳಿಗೆ  26,174 ರೂ
>> ಪ್ರಸ್ತುತ ಡಿಎ (ಶೇ 42) - 23,898  ರೂ
>> ಎಷ್ಟು ಡಿಎ ಹೆಚ್ಚಳ -2276 . ರೂ 
>>  ವಾರ್ಷಿಕ ಹೆಚ್ಚಳ - 27,312 ರೂ


ಮೂಲ ವೇತನದ ಲೆಕ್ಕಾಚಾರ ಹೇಗಿರುತ್ತದೆ - (18,000.ರೂ ಗೆ )
>> ಮೂಲ ವೇತನ - 18,000 .ರೂ 
>> ಹೊಸ ಡಿಎ (ಶೇಕಡಾ 46) -  8280 .ರೂ ಪ್ರತಿ ತಿಂಗಳು
>> ಪ್ರಸ್ತುತ ಡಿಎ (ಶೇ 42) -  7560 ರೂ. ಪ್ರತಿ ತಿಂಗಳು
>> ಎಷ್ಟು ಡಿಎ ಹೆಚ್ಚಳ -  720 ರೂ. ಪ್ರತಿ ತಿಂಗಳು
>> ವಾರ್ಷಿಕ ಹೆಚ್ಚಳ - 8640 ರೂ


ಇದನ್ನೂ ಓದಿ : PPF vs SIP: ಎಲ್ಲಿ ಹಣ ಹೂಡಿದ್ರೆ ನೀವು ಮಿಲಿಯನೇರ್ ಆಗುತ್ತೀರಿ ಗೊತ್ತಾ?


ಸಚಿವ ಸಂಪುಟ ಸಭೆಯಲ್ಲಿ ನೌಕರರ ತುಟ್ಟಿಭತ್ಯೆಗೆ ಅನುಮೋದನೆ ದೊರೆತರೆ ಅಕ್ಟೋಬರ್ ತಿಂಗಳ ವೇತನದಲ್ಲಿ ನೀಡಲಾಗುವುದು. ದೀಪಾವಳಿಗೆ ಮುಂಚೆಯೇ ನೌಕರರು ಹೆಚ್ಚಳವಾದ ಮೊತ್ತವನ್ನು ಪಡೆಯುತ್ತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.