ನವದೆಹಲಿ : PM Kisan Samman Nidhi Update: ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಸರ್ಕಾರ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆ. ಈ ಯೋಜನೆಯ ಅನ್ವಯ 2000 ರೂಪಾಯಿಗಳ ಮೂರು ಕಂತುಗಳನ್ನು ನೇರವಾಗಿ ರೈತನ ಖಾತೆಗೆ ಹಾಕಲಾಗುತ್ತದೆ. ಇಲ್ಲಿಯವರೆಗೆ 8 ಕಂತುಗಳು ರೈತರ ಖಾತೆಗೆ ಬಂದಿವೆ. ಇದೀಗ ರೈತರು 9 ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ,  ಪ್ರಧಾನಿ ಕಿಸಾನ್ ಸಮ್ಮನ್ ನಿಧಿ (PM Kisan Samman Nidhi ) ಯೋಜನೆಯ ಲಾಭವನ್ನು ಪತಿ ಮತ್ತು ಪತ್ನಿ ಇಬ್ಬರೂ ಪಡೆದುಕೊಳ್ಳಬಹುದೇ ಎಂಬ ಪ್ರಶ್ನೆ  ಎದ್ದಿದೆ. 


COMMERCIAL BREAK
SCROLL TO CONTINUE READING

ಯಾರಿಗೆ ಲಾಭ ಸಿಗುತ್ತದೆ?
ಪತಿ ಮತ್ತು ಪತ್ನಿ ಇಬ್ಬರೂ ಪಿಎಂ ಕಿಸಾನ್ (PM Kisan) ಸಮ್ಮನ್ ನಿಧಿ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಯಾರಾದರು ಹೀಗೆ ಮಾಡಿದ್ದಲ್ಲಿ, ನೀಡಿದ ಮೊತ್ತವನ್ನು ಸರ್ಕಾರ ರಿಕವರ್ ಮಾಡಿಬಿಡುತ್ತದೆ. ರೈತ ಕುಟುಂಬದಲ್ಲಿ (Farmer Family) ಯಾರಾದರೂ ತೆರಿಗೆ ಪಾವತಿಸುತ್ತಿದ್ದರೆ, ಈ ಯೋಜನೆಯ ಲಾಭ ಪಡೆಯಲು ಅವರು ಅರ್ಹರಾಗಿರುವುದಿಲ್ಲ. ಅಂದರೆ, ಪತಿ ಅಥವಾ ಪತ್ನಿಯಲ್ಲಿ ಯಾರಾದರೊಬ್ಬರು, ಆದಾಯ ತೆರಿಗೆ (Income tax) ಪಾವತಿಸಿದ್ದರೆ, ಅವರಿಗೆ ಈ ಯೋಜನೆಯ ಲಾಭ ದೊರೆಯುವುದಿಲ್ಲ.


ಇದನ್ನೂ ಓದಿ :New Wage Code : ಸರ್ಕಾರಿ ನೌಕರರಿಗೆ ಇನ್ನು ಸಿಗಲಿದೆ 300 Earned Leave! ಈ ತಿಂಗಳಿನಿಂದ ಹೊಸ ನಿಯಮ ಜಾರಿ


ಯಾರು ಅನರ್ಹರು : 
ಒಬ್ಬ ರೈತ ತನ್ನ ಕೃಷಿ ಭೂಮಿಯನ್ನು ಕೃಷಿ ಕೆಲಸಕ್ಕೆ ಬಳಸದೆ, ಕೃಷಿಯೇತರ ಕೆಲಸಗಳನ್ನು ಮಾಡುತ್ತಿದ್ದರೆ ಈ ಯೋಜನೆಯ ಲಾಭ ಪಡೆಯಲು ಅರ್ಹರಲ್ಲ. ಅಲ್ಲದೆ ತನ್ನ ಹೆಸರಿನಲ್ಲಿ ಜಮೀನು ಇರದೇ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರೂ, ಈ ಯೋಜನೆಯ ಲಾಭ ಸಿಗುವುದಿಲ್ಲ. ಅಂದರೆ ಆ ಜಮೀನು ರೈತನ (Farmer) ತಂದೆ ಅಥವಾ ಅಜ್ಜನ ಹೆಸರಿನಲ್ಲಿ ಇದ್ದರೆ, ಈ ಯೋಜನೆಯ ಲಾಭ ಅವನಿಗೆ ಸಿಗುವುದಿಲ್ಲ.


ಯಾರಿಗೆ ಸಿಗುವುದಿಲ್ಲ ಯೋಜನೆಯ ಲಾಭ : 
ಯಾರಾದರೂ ಕೃಷಿ ಭೂಮಿಯ ಮಾಲೀಕರಾಗಿದ್ದು, ಅವರು ಸರ್ಕಾರಿ ನೌಕರರಾಗಿದ್ದರೆ,  ಮಾಜಿ ಸಂಸದ, ಶಾಸಕ, ಸಚಿವರಾಗಿದ್ದರೆ, ಅಂತಹವರಿಗೆ  ಯೋಜನೆಯ ಲಾಭ ಸಿಗುವುದಿಲ್ಲ.  ವೃತ್ತಿಪರ ನೋಂದಾಯಿತ ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು (CA) ಅಥವಾ ಅವರ ಕುಟುಂಬ ಸದಸ್ಯರು ಸಹ ಅನರ್ಹರ ಜನರ ಪಟ್ಟಿಯಲ್ಲಿ ಬರುತ್ತಾರೆ. ಆದಾಯ ತೆರಿಗೆ ಪಾವತಿಸುವ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ.


ಇದನ್ನೂ ಓದಿ :ಕೇವಲ 24 ಗಂಟೆಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಗೆ ಸುಮಾರು 1 ಲಕ್ಷ ಬುಕಿಂಗ್ ಬೇಡಿಕೆ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.