ಕೇವಲ ಒಂದು ಮೊಬೈಲ್ ನಂಬರ್ ಮೂಲಕ ಮನೆಯ ಎಲ್ಲಾ ಸದಸ್ಯರ PVC Aadhaar Card ಮಾಡಿಸಬಹುದು
ಇಲ್ಲಿಯವರೆಗೆ ಆಧಾರ್ ಕಾರ್ಡ್ ಅನ್ನು ಕಾಗದದಲ್ಲಿ ಮುದ್ರಿಸಲಾಗುತ್ತಿತ್ತು, ಆದರೆ UIDAI ಆಧಾರ್ ಕಾರ್ಡ್‌ನ ಡಿಜಿಟಲ್ ರೂಪಕ್ಕೂ ಅನುಮತಿ ನೀಡಿದೆ. ಆಧಾರ್ ಕಾರ್ಡನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಸೇವ್ ಮಾಡಿಟ್ಟುಕೊಳ್ಳಬಹುದು. ಅಗತ್ಯವಿದ್ದಾಗ ಅದನ್ನು ಬಳಸಿಕೊಳ್ಳಬಹುದು.
ನವದೆಹಲಿ : ಆಧಾರ್ ಕಾರ್ಡ್ (Aadhaar ) ಪ್ರತಿ ಹಂತದಲ್ಲೂ ಅಗತ್ಯವಿರುವ ದಾಖಲೆ. ಇದಿಲ್ಲದೆ, ಯಾವುದೇ ಸರ್ಕಾರಿ ಯೋಜನೆಯ ಲಾಭ ಪಡೆಯುವುದು ಸಾಧ್ಯವಿಲ್ಲ. ಸಮಯಕ್ಕನುಗುಣವಾಗಿ ಆಧಾರ್ ಕಾರ್ಡ್‌ನಲ್ಲೂ ಅನೇಕ ಬದಲಾವಣೆಗಳಾಗಿವೆ. Unique Identification Authority of India (UIDAI) ಈ ವರ್ಷ ಪಿವಿಸಿ ಆಧಾರ್ ಕಾರ್ಡ್ ಅನ್ನು ತಂದಿದೆ. ಇದನ್ನು ಒಯ್ಯುವುದೂ ಸುಲಭ, ಜೊತೆಗೆ ದೀರ್ಘಕಾಲದವರೆಗೆ ಇಟ್ಟುಕೊಳ್ಳಬಹುದು.
ಪಿವಿಸಿ ಆಧಾರ್ ಕಾರ್ಡ್ ಪಡೆಯುವುದು ಹೇಗೆ ?:
ಇಲ್ಲಿಯವರೆಗೆ ಆಧಾರ್ ಕಾರ್ಡ್ (Aadhaar card) ಅನ್ನು ಕಾಗದದಲ್ಲಿ ಮುದ್ರಿಸಲಾಗುತ್ತಿತ್ತು, ಆದರೆ UIDAI ಆಧಾರ್ ಕಾರ್ಡ್‌ನ ಡಿಜಿಟಲ್ ರೂಪಕ್ಕೂ ಅನುಮತಿ ನೀಡಿದೆ. ಆಧಾರ್ ಕಾರ್ಡನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಸೇವ್ ಮಾಡಿಟ್ಟುಕೊಳ್ಳಬಹುದು. ಅಗತ್ಯವಿದ್ದಾಗ ಅದನ್ನು ಬಳಸಿಕೊಳ್ಳಬಹುದು. ಡಿಜಿಟಲ್ ಆಧಾರ್ ಕಾರ್ಡ್ (digital aadhaar card) ಕೂಡಾ ಫಿಸಿಕಲ್ ಕಾರ್ಡ್ ನಷ್ಟೇ ಮಾನ್ಯತೆ ಹೊಂದಿದೆ.
ಇದನ್ನೂ ಓದಿ : State Bank Of India: ಕೊರೊನಾ ಕಾಲದಲ್ಲಿ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ SBI
50 ರೂಪಾಯಿಗೆ ಕೈಸೇರುತ್ತದೆ ಪಿವಿಸಿ ಆಧಾರ್ ಕಾರ್ಡ್ :
ಕೇವಲ ಒಂದು ಮೊಬೈಲ್ ನಂಬರಿನ ಮೂಲಕ, ಮನೆಯ ಎಲ್ಲಾ ಸದಸ್ಯರ PVC ಆಧಾರ್ ಕಾರ್ಡ್ ಅನ್ನು ಪಡೆಯಬಹುದು. ಪಿವಿಸಿ ಆಧಾರ್ ಕಾರ್ಡ್ (PVC aadhaar card) ನಿರ್ವಹಣೆ ಬಲು ಸುಲಭ. ಇದು ಪ್ಲಾಸ್ಟಿಕ್ ರೂಪದಲ್ಲಿರುತ್ತದೆ. ಅದರ ಗಾತ್ರವು ATM ಡೆಬಿಟ್ ಕಾರ್ಡ್‌ನಂತಿರುತ್ತದೆ. ಪಿವಿಸಿ ಆಧಾರ್ ಕಾರ್ಡ್ ಮಾಡಿಸಲು ಬಯಸುವುದಾದರೆ, ಕೇವಲ 50 ರೂಪಾಯಿಗಳ ಸಣ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಪಿವಿಸಿ ಆಧಾರ್ ಕಾರ್ಡ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು ? :
1. ನೀವು PVC ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಬಯಸಿದರೆ, UIDAI ವೆಬ್‌ಸೈಟ್ uidai.gov.in ಅಥವಾ ರೆresident.uidai.gov.in ಗೆ ಭೇಟಿ ನೀಡಿ.
2. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ವರ್ಚುವಲ್ ಐಡಿ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ನಮೂದಿಸಬೇಕು.
3. 50 ರೂಪಾಯಿ ಶುಲ್ಕವನ್ನು ಪಾವತಿಸುವ ಆರ್ಡರ್ ಮಾಡಬಹುದು . ಕೆಲವೇ ದಿನಗಳಲ್ಲಿ ನೋಂದಾಯಿತ ವಿಳಾಸಕ್ಕೆ ಆಧಾರ್ ಕಾರ್ಡ್ ತಲುಪುತ್ತದೆ.
ಇದನ್ನೂ ಓದಿ : Gold-Silver Rate : ಸುಮಾರು 4 ತಿಂಗಳ ನಂತ್ರ ಗರಿಷ್ಠಮಟ್ಟದಲ್ಲಿ ಇಳಿಕೆ ಕಂಡ ಚಿನ್ನದ ಬೆಲೆ..!
ಮೊಬೈಲ್ ನೋಂದಾಯಿಸದಿದ್ದರೆ ಹೇಗೆ ಅರ್ಜಿ ಸಲ್ಲಿಸಬೇಕು ? :
ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡದಿದ್ದರೂ, ಪಿವಿಸಿ ಆಧಾರ್ ಕಾರ್ಡ್ ಆರ್ಡರ್ ಮಾಡಬಹುದು. ಇದಕ್ಕಾಗಿ, ಈ ರೀತಿ ಅರ್ಜಿ ಸಲ್ಲಿಸಬೇಕು.
1. ನೀವು https://residentpvc.uidai.gov.in/order-pvcreprint ವೆಬ್‌ಸೈಟ್‌ಗೆ ಭೇಟಿ ನೀಡಿ.
2. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನೋಂದಾಯಿಸಿ
3. ಸೆಕ್ಯುರಿಟಿ ಕೋಡ್ ಅನ್ನು ಭರ್ತಿ ಮಾಡಿ ಮತ್ತು my mobile not registered ಆಯ್ಕೆಯ ಮೇಲೆ ಕ್ಲಿಕ್ ಮಾಡಿ
4. ನಿಮ್ಮ ಮೊಬೈಲ್ ಗೆ ಬರುವ OTPಯನ್ನು ಹಾಕಿ
6. 50 ರೂ ಶುಲ್ಕವನ್ನು ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ
ಪಿವಿಸಿ ಆಧಾರ್ ಕಾರ್ಡ್ ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಎರಡು ವಾರಗಳಲ್ಲಿ ನಿಮ್ಮ ನೋಂದಾಯಿತ ವಿಳಾಸಕ್ಕೆ ಬರುತ್ತದೆ.
ಇದನ್ನೂ ಓದಿ : SBI ಡೆಬಿಟ್ ಕಾರ್ಡ್ ನಲ್ಲೂ ಸಿಗಲಿದೆ EMI ಸೌಲಭ್ಯ, ಲಾಭ ಪಡೆಯಲು ಏನು ಮಾಡಬೇಕು ತಿಳಿದಿರಲಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ..