ನವದೆಹಲಿ: 2022ರಲ್ಲಿನ ಕಾರು ಮಾರಾಟದ ಅಂಕಿಅಂಶಗಳನ್ನು ನೋಡಿದ್ರೆ ದೇಶದಲ್ಲಿ ಯುಟಿಲಿಟಿ ವೆಹಿಕಲ್‌ಗಳ (ಯುವಿ) ಬೇಡಿಕೆ ವೇಗವಾಗಿ ಹೆಚ್ಚಾಗಿರುವುದು ತಿಳಿಯುತ್ತದೆ. ಎಸ್‌ಯುವಿಗಳ ಹೊರತಾಗಿ, ಎಂಪಿವಿ ಕಾರುಗಳು ಸಹ ಈ ವರ್ಗದಲ್ಲಿ ಗ್ರಾಹಕರಿಗೆ ತುಂಬಾ ಇಷ್ಟವಾಗುತ್ತಿವೆ. ಆದರೆ MPV ವಿಭಾಗದಲ್ಲಿ 7 ಆಸನಗಳ ಕಾರೊಂದು ಪ್ರಾಬಲ್ಯ ಸಾಧಿಸಿದೆ. ಮಹೀಂದ್ರಾ, ಕಿಯಾ ಮತ್ತು ಟೊಯೋಟಾ ತಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಈ ಕಾರನ್ನು ನಂ.1 ಸ್ಥಾನದಿಂದ ಹೊರಹಾಕಲು ವಿಫಲವಾಗಿವೆ. ವಿಶೇಷವೆಂದರೆ ಡಿಸೆಂಬರ್ ತಿಂಗಳಿನಲ್ಲಿ ಈ ಸೆವೆನ್ ಸೀಟರ್ ಕಾರು ಆಲ್ಟೊ ಮತ್ತು ವ್ಯಾಗನಾರ್ ನಂತಹ ಅಗ್ಗದ ಕಾರುಗಳಿಗಿಂತಲೂ ಹೆಚ್ಚು ಮಾರಾಟವಾಗಿದೆ.


COMMERCIAL BREAK
SCROLL TO CONTINUE READING

7 ಆಸನಗಳ ಕಾರಿನ ಪ್ರಾಬಲ್ಯ   


ಮಾರುತಿ ಎರ್ಟಿಗಾ ಕಳೆದ ತಿಂಗಳು ದೇಶದಲ್ಲಿ ಹೆಚ್ಚು ಮಾರಾಟವಾದ 7 ಆಸನಗಳ MPV ಆಗಿದೆ. ವಿಶೇಷವೆಂದರೆ ಮಾರಾಟದ ವಿಷಯದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸುವಂತೆ ದೇಶದ ಅತಿಹೆಚ್ಚು ಮಾರಾಟವಾಗುವ ಕಾರಿನಲ್ಲಿ ಇದು 2ನೇ ಸ್ಥಾನಕ್ಕೆ ತಲುಪಿದೆ. ಮಾರುತಿ ಬಲೆನೊ ಮಾತ್ರ ಇಡೀ ತಿಂಗಳಲ್ಲಿ ಇದಕ್ಕಿಂತ ಹೆಚ್ಚು ಮಾರಾಟವಾದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಿಸೆಂಬರ್ 2022ರಲ್ಲಿ ಮಾರುತಿ ಎರ್ಟಿಗಾದ 12,273 ಯುನಿಟ್‌ಗಳು ಮಾರಾಟವಾಗಿವೆ. 2021ರಲ್ಲಿ ಮಾರಾಟವಾದ 11,840 ಯುನಿಟ್‌ಗಳಿಗೆ ಹೋಲಿಸಿದರೆ ಇದು ಶೇ.4ರಷ್ಟು ಬೆಳವಣಿಗೆ ಸಾಧಿಸಿದೆ. ಇದೇ ಅವಧಿಯಲ್ಲಿ ಮಾರುತಿ ಆಲ್ಟೊದ 8648 ಯುನಿಟ್‌ಗಳು ಮತ್ತು ಮಾರುತಿ ವ್ಯಾಗನ್‌ಆರ್‌ನ 10,181 ಯುನಿಟ್‌ಗಳು ಮಾತ್ರ ಮಾರಾಟವಾಗಿವೆ. ಮಾರುತಿ ಎರ್ಟಿಗಾದ ಬೆಲೆ 8.35 ಲಕ್ಷ ರೂ.ದಿಂದ ಆರಂಭವಾಗುತ್ತದೆ.


ಇದನ್ನೂ ಓದಿ: Lalit Modi: ತನ್ನ 4555 ಕೋಟಿ ರೂ. ಮೌಲ್ಯದ ಟ್ರಸ್ಟ್ ಉತ್ತರಾಧಿಕಾರಿ ಘೋಷಿಸಿದ ಲಲಿತ್ ಮೋದಿ


ಕಿಯಾ ಕ್ಯಾರೆನ್ಸ್ & ಇನ್ನೋವಾ ಮಾರಾಟ ಹೇಗಿದೆ?


ಮಾರುತಿ ಎರ್ಟಿಗಾಗೆ ಪೈಪೋಟಿ ನೀಡಲು ಕಿಯಾ ಮೋಟಾರ್ಸ್ ತನ್ನ ಕಿಯಾ ಕ್ಯಾರೆನ್ಸ್ ಎಂಪಿವಿಯನ್ನು ಕಳೆದ ವರ್ಷ ಬಿಡುಗಡೆ ಮಾಡಿತ್ತು. ಟೊಯೊಟಾ ಈಗಾಗಲೇ ಇನ್ನೋವಾವನ್ನು ಮಾರಾಟ ಮಾಡುತ್ತಿದೆ. ಆದಾಗ್ಯೂ, ಈ ಎರಡೂ ವಾಹನಗಳು ಟಾಪ್ 25 ಅತ್ಯುತ್ತಮ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.


ಮಾರುತಿ ಎರ್ಟಿಗಾದ ಮೈಲೇಜ್


ಮಾರುತಿ ಎರ್ಟಿಗಾದಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಇದರೊಂದಿಗೆ ಸಿಎನ್‌ಜಿ ಕಿಟ್‌ನ ಆಯ್ಕೆಯೂ ಲಭ್ಯವಿದೆ. CNG ಹೊಂದಿರುವ ಈ ಕಾರಿನ ಮೈಲೇಜ್ ಪ್ರತಿ ಕೆಜಿಗೆ 26 ಕಿ.ಮೀ. ನೀಡುತ್ತದೆ. ಎರ್ಟಿಗಾ 209 ಲೀಟರ್ ಬೂಟ್ ಸ್ಪೇಸ್ ಹೊಂದಿರುವ 7 ಆಸನಗಳ ಕಾರಾಗಿದೆ. 3ನೇ ಸಾಲಿನ ಸೀಟುಗಳನ್ನು ಮಡಿಸುವ ಮೂಲಕ ಬೂಟ್ ಸ್ಪೇಸ್ ಅನ್ನು 550 ಲೀಟರ್ ವರೆಗೆ ವಿಸ್ತರಿಸಬಹುದು.


ಇದನ್ನೂ ಓದಿ: ಓಲಾಗೆ ಟಕ್ಕರ್ ನೀಡಲು ಬಂದಿದೆ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.