7th Pay Commission: ಸರ್ಕಾರಿ ನೌಕರರಿಗೆ ಈ ತಿಂಗಳು ಸಿಗಲಿದೆ ಮತ್ತೊಂದು ಸಿಹಿ ಸುದ್ದಿ, ತುಟ್ಟಿ ಭತ್ಯೆಯಲ್ಲಿ ಮತ್ತೆ 3% ಹೆಚ್ಚಳ ?
ಕೇಂದ್ರ ಉದ್ಯೋಗಿಗಳು ಶೀಘ್ರದಲ್ಲೇ ಮತ್ತೊಂದು ಉಡುಗೊರೆಯನ್ನು ಪಡೆಯಬಹುದು. ಜುಲೈ 2021ರ ತುಟ್ಟಿ ಭತ್ಯೆ ಇನ್ನು ಘೋಷಣೆಯಾಗಿಲ್ಲ. ಇದರಲ್ಲಿ 3 ಶೇಕಡಾದಷ್ಟು ಮತ್ತೆ ಹೆಚ್ಚಳವಾಗಬಹುದು.
ನವದೆಹಲಿ : 7th Pay Commission : ಕೇಂದ್ರ ಉದ್ಯೋಗಿಗಳಿಗೆ ಹಬ್ಬದ ಋತುವಿನಲ್ಲಿ ಮತ್ತೊಂದು ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ. ತುಟ್ಟಿ ಭತ್ಯೆಯನ್ನು (DA) ಈಗಾಗಲೇ 17% ರಿಂದ 28% ಕ್ಕೆ ಹೆಚ್ಚಿಸಲಾಗಿದೆ. HRA ಅನ್ನು ಸಹ 24% ರಿಂದ 27% ಕ್ಕೆ ಹೆಚ್ಚಿಸಲಾಗಿದೆ. ಇದರ ಹೊರತಾಗಿ ಮತ್ತೊಂದು ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ.
ಮತ್ತೆ ಹೆಚ್ಚಳವಾಗಲಿದೆ ತುಟ್ಟಿ ಭತ್ಯೆ ?
ಕೇಂದ್ರ ಉದ್ಯೋಗಿಗಳು ಶೀಘ್ರದಲ್ಲೇ ಮತ್ತೊಂದು ಉಡುಗೊರೆಯನ್ನು ಪಡೆಯಬಹುದು. ಜುಲೈ 2021ರ ತುಟ್ಟಿ ಭತ್ಯೆ (DA) ಇನ್ನು ಘೋಷಣೆಯಾಗಿಲ್ಲ. ಇದರಲ್ಲಿ 3 ಶೇಕಡಾದಷ್ಟು ಮತ್ತೆ ಹೆಚ್ಚಳವಾಗಬಹುದು. ಜೂನ್ 2021 ರಲ್ಲಿ ಎಐಸಿಪಿಐ (AICPI) ದತ್ತಾಂಶದ ಪ್ರಕಾರ ಡಿಎ 31.18 ಶೇಕಡಾ ಎನ್ನುವುದು ಸ್ಪಷ್ಟವಾಗಿದೆ. ಆದರೆ, ಡಿಎ ಲೆಕ್ಕಾಚಾರ ಯಾವಾಗಲೂ ರೌಂಡ್ ಫಿಗರ್ ನಲ್ಲಿ ಆಗುತ್ತದೆ. ಈ ಹಿನ್ನೆಲೆಯಲ್ಲಿ 31% ಡಿಎ ಪಾವತಿಸಲಾಗುವುದು. ಅಂದರೆ, 3 ಪ್ರತಿಶತದಷ್ಟು ಡಿಎ (dearness allowance) ಹೆಚ್ಚಳವಾಗಿದ್ದರೆ, ಉದ್ಯೋಗಿಗಳು 31 ಪ್ರತಿಶತದಷ್ಟು ಡಿರ್ನೆಸ್ ಭತ್ಯೆಯನ್ನು ಪಡೆಯುತ್ತಾರೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಇನ್ನು ಕೂಡಾ ಆಗಿಲ್ಲ. ಅಲ್ಲದೆ, ಇದನ್ನು ಯಾವಾಗ ಕಾರ್ಯಗತಗೊಳಿಸಲಾಗುವುದು ಎಂದು ಹೇಳಲಾಗಿಲ್ಲ.
ಇದನ್ನೂ ಓದಿ : EPFO New Rules : EPF ನಿಯಮಗಳಲ್ಲಿ ದೊಡ್ಡ ಬದಲಾವಣೆ : ಈಗ ಉದ್ಯೋಗಿಗಳಿಗೆ ಎರಡು PF ಖಾತೆಗಳು!
3% ಡಿಎ ಹೆಚ್ಚಳ ನಿರ್ಧಾರವಾಗಿದೆಯೇ ? :
ಉದ್ಯೋಗಿಗಳ ಒಕ್ಕೂಟವು ಸರ್ಕಾರವು ಶೀಘ್ರದಲ್ಲೇ 3% ತುಟ್ಟಿ ಭತ್ಯೆಯ ಹೆಚ್ಚಳವನ್ನು ಘೋಷಿಸಬೇಕು ಎನ್ನುವ ನಿರೀಕ್ಷೆಯಲ್ಲಿದೆ. ಎಐಸಿಪಿಐ ಸೂಚ್ಯಂಕದ ಮಾಹಿತಿಯ ಪ್ರಕಾರ, ಜೂನ್ 2021 ರ ಸೂಚ್ಯಂಕವು 1.1 ಅಂಶಗಳಷ್ಟು ಹೆಚ್ಚಾಗಿದೆ. ಜೂನ್ ನಲ್ಲಿ ಸೂಚ್ಯಂಕ 121.7 ಕ್ಕೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ, ಜೂನ್ 2021 ರ ಡಿಯರ್ನೆಸ್ ಭತ್ಯೆ ಶೇಕಡಾ 3 ರಷ್ಟು ಹೆಚ್ಚಳವಾಗುವುದು ಸ್ಪಷ್ಟವಾಗಿದೆ.
ಸೆಪ್ಟೆಂಬರ್‌ನಲ್ಲಿ ನಿರ್ಧಾರ :
ನೌಕರರ ಸಂಘದ ಬೇಡಿಕೆಯಿಂದಾಗಿ, ಜುಲೈ 2021 ರ ಡಿಯರ್ನೆಸ್ ಅಲೋವೆನ್ಸ್ ಅನ್ನು ಈ ತಿಂಗಳು ಘೋಷಿಸಬಹುದು ಎನ್ನಲಾಗಿದೆ. ಆದರೆ, ಇದಕ್ಕಾಗಿ ಯಾವುದೇ ಗಡುವು ನಿಗದಿಯಾಗಿಲ್ಲ. ಸರ್ಕಾರ ಇದನ್ನು ಸೆಪ್ಟೆಂಬರ್‌ನಲ್ಲಿ ಘೋಷಿಸಬಹುದು ಮತ್ತು ಅಕ್ಟೋಬರ್ ಸಂಬಳದಲ್ಲಿ ಪಾವತಿಸಬಹುದು ಎಂದು ನಿರೀಕ್ಷಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಬಾಕಿ ಭತ್ಯೆಯನ್ನು ಘೋಷಿಸಿದರೆ, ಸರ್ಕಾರವು (government) ಜುಲೈನಿಂದ ಇಲ್ಲಿಯವರೆಗೆ ಬಾಕಿ ಪಾವತಿಸಬೇಕು ಎನ್ನುವುದು ಉದ್ಯೋಗಿಗಳ ಒಕ್ಕೂಟದ ಮಾತು.
ಇದನ್ನೂ ಓದಿ : EPFO ನಿಂದ ಈ ಪ್ರಯೋಜನಗಳನ್ನು ಪಡೆಯಲು ಮೊದಲು ಸಲ್ಲಿಸಿ ಇ-ನಾಮಿನೇಷನ್ : ಹೇಗೆ ಇಲ್ಲಿದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.