Bharat Rice: ಹಣದುಬ್ಬರದಿಂದ ಜನ ಸಾಮಾನ್ಯರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಂದಾರೆ ಸರ್ಕಾರ "ಭಾರತ್ ರೈಸ್" ಅನ್ನು ಪ್ರಾರಂಭಿಸಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರು ನಿನ್ನೆ (ಫೆ. 6) ಗ್ರಾಹಕರಿಗೆ ನೇರವಾಗಿ ಸಬ್ಸಿಡಿ ದರದಲ್ಲಿ ಅಕ್ಕಿಯನ್ನು ನೀಡುವ ಭಾರತ್ ರೈಸ್ ಗೆ ಚಾಲನೆ ನೀಡಿದರು.  


COMMERCIAL BREAK
SCROLL TO CONTINUE READING

ಸಬ್ಸಿಡಿ ದರದಲ್ಲಿ ಅಕ್ಕಿ! 
ಭಾರತ್ ರೈಸ್ ನಲ್ಲಿ ಸಾರ್ವಜನಿಕರು ಪ್ರತಿ ಕೆಜಿಗೆ 29 ರೂ. ದರದಲ್ಲಿ ಅಕ್ಕಿಯನ್ನು ಖರೀದಿಸಬಹುದಾಗಿದೆ.  ಸಬ್ಸಿಡಿ ಅಕ್ಕಿ 5 ಕೆಜಿ ಮತ್ತು 10 ಕೆಜಿ ಪ್ಯಾಕೆಟ್‌ಗಳಲ್ಲಿ ಲಭ್ಯವಿರುತ್ತದೆ. 


ಭಾರತ್ ರೈಸ್ ಅನ್ನು ಎಲ್ಲಿ? ಹೇಗೆ ಖರೀದಿಸಬೇಕು? 
ಎಫ್‌ಸಿಐ ಮೂಲಕ ಅಕ್ಕಿಯನ್ನು ಚಿಲ್ಲರೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ, ನೀವು ಭಾರತ್ ರೈಸ್ ಅನ್ನು NAFED, NCCF ಮತ್ತು ಕೇಂದ್ರೀಯ ಭಂಡಾರ್ ಮೂಲಕ ಖರೀದಿಸಬಹುದಾಗಿದೆ. 


ಇದನ್ನೂ ಓದಿ- ನಿಮ್ಮ ಪಿ‌ಪಿ‌ಎಫ್ ಅಕೌಂಟ್ ಬಂದ್ ಆಗಿದ್ಯಾ? ಅದನ್ನು ಮತ್ತೆ ಪ್ರಾರಂಭಿಸಲು ಇಲ್ಲಿದೆ ಸುಲಭ ವಿಧಾನ


ಭಾರತ್ ರೈಸ್ ಅನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್,  ಕೈಗೆಟುಕುವ ಬೆಲೆಯಲ್ಲಿ ಪಡಿತರ ನೀಡಲು ಸರ್ಕಾರ ಬದ್ಧವಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ 81 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ ಮತ್ತು ಸರ್ಕಾರವು ಮುಂದಿನ ಐದು ವರ್ಷಗಳವರೆಗೆ ಯೋಜನೆಯನ್ನು ವಿಸ್ತರಿಸಿದೆ ಎಂದು ಹೇಳಿದರು.


ಭಾರತ್ ರೈಸ್ ಯೋಜನೆಯಡಿ ಬಡ ಕುಟುಂಬಗಳು ಪ್ರತಿ ತಿಂಗಳು 1500 ರಿಂದ 2000 ರೂಪಾಯಿಗಳನ್ನು ಉಳಿಸಲು ಸಾಧ್ಯವಾಗುತ್ತದೆ.  ಈ ಉಪಕ್ರಮವು ರೈತರ ಬದುಕನ್ನು ಬದಲಾಯಿಸುವುದಲ್ಲದೆ ಅವರಿಗೆ ಭದ್ರತೆಯನ್ನು ನೀಡುತ್ತದೆ ಎಂದು ಸಚಿವ ಗೋಯಲ್ ಭರವಸೆ ವ್ಯಕ್ತಪಡಿಸಿದರು. 


ಇದನ್ನೂ ಓದಿ- Salary Hike News : ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಗಿಫ್ಟ್ : ಮಾಸಿಕ ವೇತನದಲ್ಲಿ ಭಾರೀ ಹೆಚ್ಚಳ


ಮೊದಲ ಹಂತದಲ್ಲಿ ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಎರಡು ಸಹಕಾರಿ ಸಂಸ್ಥೆಗಳಿಗೆ ಎಂದರೆ ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಹಾಗೂ ಚಿಲ್ಲರೆ ಸರಪಳಿ ಕೇಂದ್ರೀಯ ಭಂಡಾರ್  5 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಒದಗಿಸುತ್ತದೆ.  


ಈ ಏಜೆನ್ಸಿಗಳು 5 ಕೆಜಿ ಮತ್ತು 10 ಕೆಜಿ ಪ್ಯಾಕೆಟ್‌ಗಳಲ್ಲಿ ಅಕ್ಕಿಯನ್ನು ಪ್ಯಾಕ್ ಮಾಡುತ್ತವೆ ಮತ್ತು "ಭಾರತ್ ರೈಸ್" ಬ್ರಾಂಡ್‌ನ ಅಡಿಯಲ್ಲಿ ತಮ್ಮ ಔಟ್‌ಲೆಟ್‌ಗಳ ಮೂಲಕ ಚಿಲ್ಲರೆ ಮಾರಾಟ ಮಾಡುತ್ತವೆ. ಅಕ್ಕಿಯನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕವೂ ಖರೀದಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.