Natural Gas Price Cut: ಕೇಂದ್ರ ಸರ್ಕಾರ ಭಾನುವಾರ ನೈಸರ್ಗಿಕ ಅನಿಲದ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿ ಅಧಿಸೂಚನೆ ಹೊರಡಿಸಿದೆ (central government reduces natural gas price in india).  ಈ ನಿರ್ಧಾರದಿಂದಾಗಿ, ರಿಲಯನ್ಸ್ ಇಂಡಸ್ಟ್ರೀಸ್‌ನ KG D6 ಬ್ಲಾಕ್‌ನಿಂದ ಹೊರಬರುವ ಅನಿಲದ ಬೆಲೆ ಈಗ ಪ್ರತಿ MBTU (ಮಿಲಿಯನ್ ಬ್ರಿಟಿಷ್ ಥರ್ಮಲ್ ಯುನಿಟ್) ಗೆ $ 9.87 ಇರಲಿದೆ. ದೇಶೀಯ ನೈಸರ್ಗಿಕ ಅನಿಲ ಬೆಲೆಗಳನ್ನು ಪ್ರತಿ ವರ್ಷ ಏಪ್ರಿಲ್ 1 ಮತ್ತು ಅಕ್ಟೋಬರ್ 1 ರಂದು ನಿರ್ಧರಿಸಲಾಗುತ್ತದೆ (natural gas price chart india). ಇಂಟರ್ನ್ಯಾಷನಲ್ ಗ್ಯಾಸ್ ಪ್ರೈಸ್ ಇಳಿಕೆಯಿಂದಾಗಿ ಬೆಲೆ ಇಳಿಕೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದಾಗ್ಯೂ, ಈ ಬೆಲೆ ಇಳಿಕೆ CNG ಮತ್ತು PNG ಬೆಲೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ (Business News In Kannada).


COMMERCIAL BREAK
SCROLL TO CONTINUE READING

ಇದನ್ನೂ ಓದಿ-Online Fraud ತಡೆಗಟ್ಟಲು ಶೀಘ್ರದಲ್ಲೇ ಬರಲಿದೆ RBI Digita, ಏನಿದು ಹೊಸ ತಂತ್ರಜ್ಞಾನ?


ಹೊಸ ದರವು $ 9.87 ಇರಲಿದೆ (natural gas price chart)
ಭಾನುವಾರ ಈ ಕುರಿತು ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ ಮಾಹಿತಿಯನ್ನು ನೀಡಿದೆ. ಪೆಟ್ರೋಲಿಯಂ ಸಚಿವಾಲಯದ ಪ್ರಕಾರ, ಇದುವರೆಗೆ  ದೇಶೀಯ ನೈಸರ್ಗಿಕ ಅನಿಲದ ದರವು ಪ್ರತಿ MBTU ಗೆ $ 9.96 ಆಗಿತ್ತು. ಏಪ್ರಿಲ್ 1 ರಿಂದ ಅದರಲ್ಲಿ ಸ್ವಲ್ಪ ಇಳಿಕೆಯಾಗಿದೆ ಮತ್ತು ಮುಂದಿನ 6 ತಿಂಗಳ ಹೊಸ ದರವು $ 9.87 ಆಗಿರಲಿದೆ.


ಇದನ್ನೂ ಓದಿ-Income Tax ರೇಡಾರ್ ನಲ್ಲಿ ಮನೆ ಬಾಡಿಗೆ ಭತ್ಯೆ ಕ್ಲೇಮ್ ಮಾಡುವವರು, ಆದಾಯ ತೆರಿಗೆ ವಿಭಾಗಕ್ಕೆ ಕೋಟ್ಯಂತರ ನಷ್ಟ!


ಸತತ ಮೂರನೇ ಇಳಿಕೆ ಇದಾಗಿದೆ (natural gas price in india)
ಕ್ಲಿಷ್ಟಕರ ಪ್ರದೇಶಗಳಿಂದ ಹೊರ ತೆಗೆಯಲಾಗುವ ಈ ನೈಸರ್ಗಿಕ ಅನಿಲ ಬೆಲೆಯಲ್ಲಿ ಇದು ಸತತ ಮೂರನೇ ಇಳಿಕೆಯಾಗಿದೆ. ಮೊದಲು, ಅಕ್ಟೋಬರ್ 1, 2023 ರಂದು, ಸರ್ಕಾರವು ಅನಿಲ ದರದಲ್ಲಿ ಶೇ. 18 ರಷ್ಟು ದೊಡ್ಡ ಇಳಿಕೆ ಮಾಡಿತ್ತು. ಸರ್ಕಾರ ಗ್ಯಾಸ್ ಬೆಲೆಯನ್ನು 12.12 ಡಾಲರ್ ನಿಂದ 9.96 ಡಾಲರ್ ಗೆ ಇಳಿಕೆ ಮಾಡಿತ್ತು. ಹಿಂದಿನ ಕಡಿತದಲ್ಲಿ, ದರವನ್ನು $ 12.46 ರಿಂದ $ 12.12 ಕ್ಕೆ ಇಳಿಸಲಾಯಿತು. ದೇಶೀಯ ನೈಸರ್ಗಿಕ ಅನಿಲ ಬೆಲೆಗಳನ್ನು ಹಣಕಾಸು ವರ್ಷದಲ್ಲಿ ಎರಡು ಬಾರಿ ನಿರ್ಧರಿಸಲಾಗುತ್ತದೆ. ಈ ಅನಿಲವನ್ನು ನಂತರ ವಾಹನಗಳಲ್ಲಿ ಬಳಸಲು CNG ಮತ್ತು ಅಡುಗೆಮನೆಗಳಲ್ಲಿ ಬಳಸಲು PNG ಆಗಿ ಪರಿವರ್ತಿಸಲಾಗುತ್ತದೆ. PNG ಯನ್ನು ವಿದ್ಯುತ್ ಉತ್ಪಾದನೆ ಮತ್ತು ರಸಗೊಬ್ಬರ ಉತ್ಪಾದನೆಯಲ್ಲಿಯೂ ಬಳಸಲಾಗುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ