ಬೆಂಗಳೂರು : ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್  ಅನ್ನ ಯೋಜನೆ ಅಡಿಯಲ್ಲಿ ಉಚಿತ ರೇಷನ್ ಪಡೆಯುತ್ತಿದ್ದವರಿಗೆ ಸಂತಸದ ಸುದ್ದಿ ಇದು. ಸರ್ಕಾರದ ಬಳಿ ಸಾಕಷ್ಟು ಆಹಾರ ಧಾನ್ಯಗಳಿಲ್ಲದ ಕಾರಣ, ಡಿಸೆಂಬರ್ ನಂತರ ಸರ್ಕಾರ ಈ ಯೋಜನೆಯಡಿ ನೀಡುವ ಸೌಲಭ್ಯವನ್ನು ನಿಲ್ಲಿಸಲಿದೆ ಎನ್ನುವ ಮಾತುಗಳು ಇಲ್ಲಿವರೆಗೆ ಕೇಳಿ ಬಂದಿತ್ತು. ಆದರೆ ಇದೀಗ ಡಿಸೆಂಬರ್ ನಂತರವೂ ಬಡವರಿಗೆ ಉಚಿತ ಪಡಿತರವನ್ನು ಒದಗಿಸುವ PMGKAY ಯೋಜನೆಯನ್ನು ಕೇಂದ್ರ ಸರ್ಕಾರ ವಿಸ್ತರಿಸಲಿದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಇಂದು ನಡೆಯಲಿದೆ ಸಚಿವ ಸಂಪುಟ ಸಭೆ  :
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೀಡಿದ ಮಾಹಿತಿ ಪ್ರಕಾರ, , ಸರ್ಕಾರದ ಬಳಿ ಸಾಕಷ್ಟು ಆಹಾರ ಧಾನ್ಯ ದಾಸ್ತಾನು ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ವಿಸ್ತರಿಸುವ ಬಗ್ಗೆ  ಕ್ಯಾಬಿನೆಟ್ ನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಪ್ರಧಾನ ಮಂತ್ರಿ ಅಧ್ಯಕ್ಷತೆಯಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಲಿದೆ. ಇಂದಿನ ಸಭೆಯಲ್ಲಿ ಪಡಿತರ ಯೋಜನೆ ಮುಂದುವರಿಸುವುದು ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.  ಸೆಪ್ಟೆಂಬರ್‌ನಲ್ಲಿ, ಪಡಿತರ ಯೋಜನೆಯ ಗಡುವನ್ನು ಸರ್ಕಾರವು ಮೂರು ತಿಂಗಳವರೆಗೆ ಅಂದರೆ ಡಿಸೆಂಬರ್ 31 ರವರೆಗೆ ವಿಸ್ತರಿಸಿತ್ತು. 


ಇದನ್ನೂ ಓದಿ : LPG Price : ಹೊಸ ವರ್ಷದಲ್ಲಿ ಗುಡ್ ನ್ಯೂಸ್‌! LPG ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ!


ಯೋಜನೆಗಾಗಿ 1.80 ಲಕ್ಷ ಕೋಟಿ ರೂ. ವ್ಯಯ : 
ಉಚಿತ ಪಡಿತರ ವಿತರಣೆಗೆ ಸರ್ಕಾರ 1.80 ಲಕ್ಷ ಕೋಟಿ ಖರ್ಚು ಮಾಡಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಕರಂದ್ಲಾಜೆ ಹೇಳಿದ್ದಾರೆ. ಇದೀಗ ಮತ್ತೆ  'ಕೋವಿಡ್-19  ಕೇಸ್  ಕೂಡಾ ಸುದ್ದಿಯಾಗುತ್ತಿದೆ.   PMGKAY ಯೋಜನೆಯ ಗಡುವು ಡಿಸೆಂಬರ್ ವರೆಗೆ ಇರಲಿದ್ದು, ಅದನ್ನು ವಿಸ್ತರಿಸುವ ಬಗ್ಗೆ ಪ್ರಧಾನಿ ಮೋದಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. 


ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಬರ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳಿಂದಾಗಿ ಅಕ್ಕಿ ಮತ್ತು ಗೋಧಿ ಉತ್ಪಾದನೆಯಲ್ಲಿ ಇಳಿಮುಖವಾಗುವ ಸಾಧ್ಯತೆಯಿದೆ ಎಂಬ ಗ್ರಹಿಕೆ ಸರಿಯಲ್ಲ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ. ಜನವರಿ 1, 2023 ರ ವೇಳೆಗೆ ಸುಮಾರು 159 ಲಕ್ಷ ಟನ್ ಗೋಧಿ ಮತ್ತು 104 ಲಕ್ಷ ಟನ್ ಅಕ್ಕಿ ಲಭ್ಯವಿರಲಿದೆ ಎಂದು ಆಹಾರ ಸಚಿವಾಲಯ ಕಳೆದ ವಾರ,  ಹೇಳಿದೆ. ಬಫರ್ ನಿಯಮದ ಪ್ರಕಾರ  ಜನವರಿ 1 ರಂದು 138 ಲಕ್ಷ ಟನ್ ಗೋಧಿ ಮತ್ತು 76 ಲಕ್ಷ ಟನ್ ಅಕ್ಕಿ ಬೇಕು. ಡಿಸೆಂಬರ್ 15ರವರೆಗೆ ಕೇಂದ್ರ ಸಂಗ್ರಹದಲ್ಲಿ ಸುಮಾರು 180 ಲಕ್ಷ ಟನ್ ಗೋಧಿ ಹಾಗೂ 111 ಲಕ್ಷ ಟನ್ ಅಕ್ಕಿ ಲಭ್ಯವಿದೆ ಎಂದು  ಅವರು ತಿಳಿಸಿದ್ದಾರೆ. 


ಇದನ್ನೂ ಓದಿ : ಹೊಸ, ಶಕ್ತಿಯುತ, ಸ್ಟೈಲಿಶ್, XPULSE 200T 4Valve ಅನಾವರಣ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ