ಬೆಂಗಳೂರು : ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಅಥವಾ ಬ್ಯಾಂಕ್ ಖಾತೆ ತೆರೆಯಬೇಕಾದರೆ,  ಮನೆ ನಿರ್ಮಾಣ, ಫ್ಲಾಟ್ ಅಥವಾ ಆಸ್ತಿಯನ್ನು ಖರೀದಿ ಮಾಡುವಾಗ ಅಗತ್ಯವಾಗಿ ಬೇಕಾಗಿರುವ ದಾಖಲೆ ಸಲ್ಲಿಸಬೇಕಾಗುತ್ತದೆ. ಅಂಥಹ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ ಕೂಡಾ ಒಂದು. ಸರ್ಕಾರವು ಈ ಪ್ಯಾನ್ ಕಾರ್ಡ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಸೋಮವಾರ ಮೋದಿ ಸಂಪುಟ ಸಭೆಯಲ್ಲಿ ಪ್ಯಾನ್ 2.0 ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಸರ್ಕಾರ 1435 ಕೋಟಿ ರೂ.ಗಳನ್ನು ವೆಚ್ಚ ಮಾಡಲಿದೆ ಎಂದು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ. ಹೊಸ ಪ್ಯಾನ್ ಕಾರ್ಡ್ ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್‌ಗಿಂತ ಹೆಚ್ಚು ಸುಧಾರಿತವಾಗಿರುತ್ತದೆ.ಪ್ಯಾನ್ ಕಾರ್ಡ್ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ದಾಖಲೆಯಾಗಿದೆ. ಡಿಜಿಟಲ್ ಭದ್ರತೆಯನ್ನು ಬಲಪಡಿಸುವುದು, ವಂಚನೆ ಮತ್ತು ಡೇಟಾ ಕಳ್ಳತನದ ಸಾಧ್ಯತೆಯನ್ನು ಕಡಿಮೆ ಮಾಡುವ   ಉದ್ದೇಶದಿಂದ ಪ್ಯಾನ್ ಕಾರ್ಡ್ ಗೆ ಹೊಸ ರೂಪ ನೀಡಲಾಗಿದೆ.   


COMMERCIAL BREAK
SCROLL TO CONTINUE READING

ಹೊಸ ಪ್ಯಾನ್ ಕಾರ್ಡ್ : 
ಹೊಸ ಪ್ಯಾನ್ ಕಾರ್ಡ್ ಹಳೆಯದಕ್ಕಿಂತ ಹೆಚ್ಚು ಭಿನ್ನವಾಗಿರಲಿದೆ. ಹೊಸ ಪ್ಯಾನ್ ಕಾರ್ಡ್‌ಗಳು ಕ್ಯೂಆರ್ ಕೋಡ್‌ಗಳನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ಪೇಪರ್‌ಲೇನ್ ಅಂದರೆ ಆನ್‌ಲೈನ್ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗುವುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಜನರು ಇದಕ್ಕಾಗಿ ಪ್ರತ್ಯೇಕ ಹಣವನ್ನು ಖರ್ಚು ಮಾಡಬೇಕಾಗಿಲ್ಲ, ಜನರು QR ಕೋಡ್‌ನೊಂದಿಗೆ ಪ್ಯಾನ್‌ಗಾಗಿ ಪ್ರತ್ಯೇಕವಾಗಿ ಖರ್ಚು ಮಾಡುವ ಅಗತ್ಯವಿಲ್ಲ. ಸ್ಕ್ಯಾನರ್ ಅಳವಡಿಸಲಾಗಿರುವ ಹೊಸ ಪ್ಯಾನ್ ಕಾರ್ಡ್‌ನಲ್ಲಿ ಡೇಟಾ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. 


ಇದನ್ನೂ ಓದಿ :  RBI ಗವರ್ನರ್ ಶಕ್ತಿಕಾಂತ ದಾಸ್ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು


ಪ್ಯಾನ್ ಕಾರ್ಡ್ 2.0 ಎಷ್ಟು ವಿಭಿನ್ನವಾಗಿರುತ್ತದೆ? : 
ಕೇಂದ್ರ ಸಚಿವ ಸಂಪುಟವು ಪ್ಯಾನ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯ ಉದ್ದೇಶವು PAN ಕಾರ್ಡ್ ಅನ್ನು ಹೆಚ್ಚು ಸುರಕ್ಷಿತಗೊಳಿಸುವುದು ಮತ್ತು ತೆರಿಗೆದಾರರ ಶಾಶ್ವತ ಖಾತೆ ಸಂಖ್ಯೆ (PAN)ಯನ್ನು ಎಲ್ಲಾ ಸರ್ಕಾರಿ ಏಜೆನ್ಸಿಗಳಿಗೆ 'ಸಾಮಾನ್ಯ ವ್ಯಾಪಾರ ಗುರುತಿಸುವಿಕೆಗಾಗಿ ಬಳಸುವ ಪ್ರಕ್ರಿಯೆಯನ್ನು ಸರಳಗೊಳಿಸುವುದು.   ಇದರೊಂದಿಗೆ, ಪ್ಯಾನ್ ಕಾರ್ಡ್‌ನ ಉತ್ತಮ ಗುಣಮಟ್ಟದ ಜೊತೆಗೆ, ಅದರ ಸೇವೆಯನ್ನು ಸುಲಭ ಮತ್ತು ವೇಗವಾಗಿ ಮಾಡಬೇಕು. ಹೊಸ ಪ್ಯಾನ್ ಕಾರ್ಡ್ ಹಳೆಯ ಪ್ಯಾನ್ ಕಾರ್ಡ್‌ಗಿಂತ ಭಿನ್ನವಾಗಿರುತ್ತದೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ