ಜನರೇ ಗಮನಿಸಿ.. 5 ರೂಪಾಯಿ ನಾಣ್ಯ ರದ್ದು..! ಕೇಂದ್ರದಿಂದ ಮಹತ್ತರ ನಿರ್ಧಾರ..
5 Rs coin ban : ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಒಟ್ಟಾಗಿ ಮಹತ್ವದ ನಿರ್ಧಾರ ಕೈಗೊಂಡಿವೆ. ಸದ್ಯ ಮಾರುಕಟ್ಟೆಯಲ್ಲಿ ಇರುವ ರೂ.5 ನಾಣ್ಯಗಳು ರದ್ದಾಗಲಿವೆಯಂತೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ತಪ್ಪದೇ ಓದಿ..
5 rs Coin ban : ಒಂದು ವರ್ಷದಲ್ಲಿ ಎಷ್ಟು ನಾಣ್ಯಗಳನ್ನು ಮುದ್ರಿಸಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಇದರ ನಂತರ, ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ನಿರ್ದೇಶಿಸುತ್ತದೆ. ತದನಂತರ ಭಾರತೀಯ ರಿಸರ್ವ್ ಬ್ಯಾಂಕ್ ನಾಣ್ಯಗಳನ್ನು ಮುದ್ರಿಸುತ್ತದೆ.. ಇದರ ನಡುವೆ 5 ರೂ. ನಾಣ್ಯ ಇನ್ನು ಮುಂದೆ ಚಲಾವಣೆಯಲ್ಲಿ ಇರುವುದಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ.
ನಾಣ್ಯ ಅಥವಾ ನೋಟು ಸ್ಥಗಿತಗೊಂಡಿದ್ದರೂ ಅಥವಾ ಬಿಡುಗಡೆ ಪ್ರಕ್ರಿಯೆಯಲ್ಲಿದ್ದರೂ, ಆರ್‌ಬಿಐ ಕೇಂದ್ರ ಸರ್ಕಾರದ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಆಗ ಮಾತ್ರ ನಾಣ್ಯಗಳು ಅಥವಾ ನೋಟುಗಳನ್ನು ನಿಷೇಧಿಸಬಹುದು. ಪ್ರಸ್ತುತ ಭಾರತದಲ್ಲಿ 1 ರೂಪಾಯಿಯಿಂದ 20 ರೂಪಾಯಿವರೆಗಿನ ನಾಣ್ಯಗಳು ಚಲಾವಣೆಯಲ್ಲಿವೆ. 30 ಮತ್ತು 50 ರೂಪಾಯಿಗಳ ನಾಣ್ಯಗಳ ಚಲಾವಣೆಗೆ ತರುವ ಬಗ್ಗೆ ಮಾತು ಕೇಳಿ ಬರುತ್ತಿದೆ..
ಇದನ್ನೂ ಓದಿ:ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ಗೊತ್ತಾ..?
ಇನ್ನು 5 ರೂಪಾಯಿ ನಾಣ್ಯ ರದ್ದು ಮಾಡುವುದಾಗಿ ಘೋಷಣೆ ಮಾಡಿರುವುದು ಭಾರೀ ಸದ್ದು ಮಾಡುತ್ತಿದೆ. ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ರೂ.5 ರದ್ದತಿಗೆ ಪ್ರಯತ್ನ ಆರಂಭಿಸಿವೆ ಎಂದು ವರದಿಯಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಘೋಷನೆ ಹೊರಬಿದ್ದಿಲ್ಲ.
ಪ್ರಸ್ತುತ ದೇಶದಲ್ಲಿ 2 ರೀತಿಯ 5 ರೂಪಾಯಿ ನಾಣ್ಯಗಳು ಲಭ್ಯವಿವೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಒಂದು ಹಿತ್ತಾಳೆ ಮತ್ತು ಇನ್ನೊಂದು ಸಿಲ್ವರ್. ಪ್ರಸ್ತುತ, 5 ರೂಪಾಯಿ ಹಿತ್ತಾಳೆ ನಾಣ್ಯಗಳು ಲಭ್ಯವಿದೆ. ಆದರೆ, ಈಗ ಸಿಲ್ವರ್ ನಾಣ್ಯಗಳ ಸಂಖ್ಯೆ ಕಡಿಮೆಯಾಗಿದೆ. ಪ್ರಸ್ತುತ, ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಎರಡೂ ಲೋಹದ 5 ರೂಪಾಯಿ ನಾಣ್ಯಗಳನ್ನು ಮುದ್ರಿಸುತ್ತಿಲ್ಲ. ಮಾರುಕಟ್ಟೆಯಲ್ಲಿ ಹೆಚ್ಚಾಗಿ ಹಿತ್ತಾಳೆಯ ನಾಣ್ಯಗಳೇ ಹೆಚ್ಚು ಕಾಣಸಿಗುತ್ತವೆ.
ಇದನ್ನೂ ಓದಿ:ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇದ್ರೆ ದಂಡ ಬಿಳೋದಿಲ್ಲ? ನಿಯಮ ಮೀರಿದ್ರೆ ನೋಟಿಸ್ ಬರೋದು ಫಿಕ್ಸ್!!
5 ರೂಪಾಯಿ ನಾಣ್ಯವನ್ನು ಏಕೆ ನಿಲ್ಲಿಸಲಾಯಿತು? 5 ರೂಪಾಯಿ ಮುಖಬೆಲೆಯ ನೋಟುಗಳನ್ನು ಸ್ಥಗಿತಗೊಳಿಸುವುದರ ಹಿಂದೆ ಏನು ಕಾರಣವಿದೆ ಎನ್ನುವುದನ್ನ ಸರ್ಕಾರ ಮತ್ತು ಆರ್‌ಬಿಐ ತಿಳಿಸಬೇಕಿದೆ. ಅಲ್ಲದೆ 5 ರೂಪಾಯಿ ನಾಣ್ಯಗಳಿಂದ 4-5 ಬ್ಲೇಡ್‌ಗಳನ್ನು ಮಾಡಬಹುದು ಎಂಬ ವದಂತಿ ಹರಿದಾಡುತ್ತಿದೆ. ಅದರ ನಂತರ, ಕೆಲವರು ಈಗಾಗಲೇ 5 ರೂಪಾಯಿ ನಾಣ್ಯಗಳೊಂದಿಗೆ ಬ್ಲೇಡ್‌ಗಳನ್ನು ತಯಾರಿಸಲು ಪ್ರಾರಂಭಿಸಿದ್ದಾರಂತೆ.. ಇದೇ 5 ರೂಪಾಯಿ ನಾಣ್ಯಗಳನ್ನು ಮುದ್ರಿಸುವುದನ್ನು ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ನಿಲ್ಲಿಸಲು ಕಾರಣ ಎನ್ನಲಾಗಿದೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.