ಬೆಂಗಳೂರು : ದೇಶದಲ್ಲಿರುವ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಒಳ್ಳೆಯ ಸುದ್ದಿ ಇದೆ.  ತುಟ್ಟಿಭತ್ಯೆಯಲ್ಲಿನ ಹೆಚ್ಚಳವನ್ನು ಸರ್ಕಾರ ಶೀಘ್ರದಲಿಯೇ ಪ್ರಕಟಿಸಲಿದೆ. ಈ ಹೆಚ್ಚಳ ಶೇ.3 ಅಥವಾ 4ರಷ್ಟು ಆಗಿರಲಿದೆ. ಈ ಹೆಚ್ಚಳವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ. ಇದಕ್ಕಾಗಿ ಸರ್ಕಾರ ಸಕಲ ವ್ಯವಸ್ಥೆ ಮಾಡಿದೆ. ಹೆಚ್ಚಿಸಿದ ಡಿಎ ಯನ್ನು ಜುಲೈನಿಂದ ನೀಡಲಾಗುವುದು.  


COMMERCIAL BREAK
SCROLL TO CONTINUE READING

ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ಪ್ರಕಟಣೆ ಹೊರಡಿಸುವ ನಿರೀಕ್ಷೆ ಇದೆ. ನವರಾತ್ರಿಗೂ ಮುನ್ನ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ತುಟ್ಟಿಭತ್ಯೆಯಲ್ಲಿ 3 ಅಥವಾ 4 ಪ್ರತಿಶತ ಹೆಚ್ಚಳವಾದರೂ ಉದ್ಯೋಗಿಗಳ ವೇತನದಲ್ಲಿ ಗಮನಾರ್ಹ ಹೆಚ್ಚಳವಾಗುವುದು. 


ಇದನ್ನೂ ಓದಿ : ಚಿನ್ನ ಖರೀದಿಗೆ ಇದುವೇ ಬೆಸ್ಟ್ ಟೈಂ… 10 ಗ್ರಾಂ ಬಂಗಾರದ ದರ ಹೇಗಿದೆ ಗೊತ್ತಾ?


ತುಟ್ಟಿಭತ್ಯೆಯಲ್ಲಿ 3% ಹೆಚ್ಚಳ : 
ಮೂಲಗಳ ಪ್ರಕಾರ ತುಟ್ಟಿಭತ್ಯೆಯಲ್ಲಿನ ಹೆಚ್ಚಳವು ಮೂರು ಶೇಕಡಾಕ್ಕಿಂತ ಹೆಚ್ಚು ಇರಲಿದೆ ಎಂದು ಹೇಳಲಾಗುತ್ತದೆ. ದಶಮಾಂಶ ಬಿಂದುವನ್ನು ಮೀರಿ ಡಿಎ ಹೆಚ್ಚಿಸುವುದನ್ನು ಸರ್ಕಾರ ಪರಿಗಣಿಸುವುದಿಲ್ಲ. ಹೀಗಾಗಿ ಡಿಎ ಶೇ.3ರಷ್ಟು ಹೆಚ್ಚಳವಾಗಿ ಶೇ.45ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಪ್ರತಿ ವರ್ಷ ಉದ್ಯೋಗಿಗಳ DAಯನ್ನು ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI-IW) ಆಧರಿಸಿ ಲೆಕ್ಕಹಾಕಲಾಗುತ್ತದೆ. ಜುಲೈ ತಿಂಗಳ ಸಿಪಿಐ ಅಂಕಿಅಂಶಗಳ ಪ್ರಕಾರ, ಸರ್ಕಾರವು ಡಿಎಯನ್ನು ಶೇಕಡಾ 3 ಕ್ಕಿಂತ ಹೆಚ್ಚು ಹೆಚ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅಧಿಕೃತ ಅಧಿಸೂಚನೆ ಇನ್ನೂ ಹೊರಬಿದ್ದಿಲ್ಲ.


ಹೇಗಿರಲಿದೆ ಲೆಕ್ಕಾಚಾರ ? : 
ಜನವರಿ ಲೆಕ್ಕಾಚಾರದಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇ.42ಕ್ಕೆ ಹೆಚ್ಚಿಸಲಾಗಿತ್ತು. ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಲೆಕ್ಕ ಹಾಕಲಾಗುತ್ತದೆ. ಜನವರಿ ಮತ್ತು ಜುಲೈನಲ್ಲಿ  ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗುತ್ತದೆ. ಜನವರಿಯಲ್ಲಿ ಏರಿಕೆಯಾದ ನಂತರ, ಇಲ್ಲಿಯವರೆಗೆ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಯಾವುದೇ ಮಾಹಿತಿ ಇಲ್ಲ. 


ಇದನ್ನೂ ಓದಿ : ದಾಖಲೆಯ ಮಟ್ಟಕ್ಕೆ ಕಚ್ಚಾತೈಲ ದರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ..?


ಶೇ. 4 ರಷ್ಟು ತುಟ್ಟಿಭತ್ಯೆ ಹೆಚ್ಚಳ : 
ಜನವರಿಯಿಂದ ಜುಲೈವರೆಗೆ AICPI ಮಾಹಿತಿಯ ಪ್ರಕಾರ, ಹಣದುಬ್ಬರ ದರವು 4% ರಷ್ಟು ಹೆಚ್ಚಾಗುತ್ತದೆ ಎನ್ನುವುದು ಕೆಲವರ ವಾದ. ಹೀಗಾದಲ್ಲಿ   ಡಿಎ  42 ರಿಂದ 46 ಪ್ರತಿಶತಕ್ಕೆ ಏರುತ್ತದೆ. ಇದರಿಂದಾಗಿ ಕೇಂದ್ರ ನೌಕರರ ವಾರ್ಷಿಕ ವೇತನ 8,000ರೂಪಾಯಿಯಿಂದ 27,000ಕ್ಕೆ ಏರಿಕೆಯಾಗಲಿದೆ.


ಕನಿಷ್ಠ ಮೂಲ ವೇತನ ರೂ 18,000 ಮೇಲೆ ಡಿಎ ಹೆಚ್ಚಳ  ಎಷ್ಟಿರಲಿದೆ ? : 
ನೌಕರರ ಮೂಲ ವೇತನ - ತಿಂಗಳಿಗೆ 18,000 ರೂ
ಹೊಸ  ತುಟ್ಟಿಭತ್ಯೆ  (46%) - ತಿಂಗಳಿಗೆ ರೂ 8280
ಹಿಂದಿನ ತುಟ್ಟಿಭತ್ಯೆ (42%) - ರೂ. 7560
ಡಿಎ ಹೆಚ್ಚಳ - 8280-7560 = ರೂ. 720
ವಾರ್ಷಿಕ ವೇತನ ಹೆಚ್ಚಳ 720X12 = ರೂ.8640


56,900 ರೂ.ಗಳ ಗರಿಷ್ಠ ಮೂಲ ವೇತನದಲ್ಲಿ ಡಿಎ ಹೆಚ್ಚಳ ಎಷ್ಟಿರಲಿದೆ ? : 
ನೌಕರರ ಮೂಲ ವೇತನ = ತಿಂಗಳಿಗೆ 56,900 ರೂ


ಹೊಸ  ತುಟ್ಟಿಭತ್ಯೆ  (46%) = ತಿಂಗಳಿಗೆ ರೂ 26,174
 ಹಿಂದಿನ ತುಟ್ಟಿಭತ್ಯೆ (42%) = ರೂ. 23,898 
ಡಿಎ ಹೆಚ್ಚಳ - 26,174-23,898 = ರೂ. 2,276 ತಿಂಗಳಿಂದ
ವಾರ್ಷಿಕ  ವೇತನ  ಹೆಚ್ಚಳ = 2276X12= ರೂ. 27,312


ಇದನ್ನೂ ಓದಿ : ಸರ್ಕಾರದ ಗ್ಯಾರಂಟಿ ಮೇಲೆ ಹೂಡಿಕೆ ಮಾಡಿದರೆ ಈ ಯೋಜನೆಯಲ್ಲಿ ಸಿಗುತ್ತೆ ಎಫ್ ಡಿಗಿಂತ ಹೆಚ್ಚು ಬಡ್ಡಿಯ ಲಾಭ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ