ನವದೆಹಲಿ: PM Kisan - ದೇಶದ ರೈತರಿಗೆ ಒಳ್ಳೆಯ ಸುದ್ದಿ ಇದೆ. ನೀವು ಪಿಎಂ ಕಿಸಾನ್ ನ ಒಂಬತ್ತನೇ ಕಂತನ್ನು ಸ್ವೀಕರಿಸದಿದ್ದರೆ, ಈಗ ನೀವು ಒಟ್ಟಾಗಿ 4000 ರೂ. ಲಾಭ ಪಡೆಯಬಹುದು. ಇದರೊಂದಿಗೆ, ಸರ್ಕಾರವು ಮುಂದಿನ ದಿನಗಳಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಸ್ವೀಕರಿಸಿದ ಮೊತ್ತವನ್ನು ದ್ವಿಗುಣಗೊಳಿಸಬಹುದು ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಈ ಆರ್ಥಿಕ ವರ್ಷದ ಎರಡನೇ ಕಂತಿನ ಅಡಿಯಲ್ಲಿ ಅಂದರೆ ಆಗಸ್ಟ್-ನವೆಂಬರ್‌ನಲ್ಲಿ, 10.27 ಕೋಟಿ ರೈತರ ಖಾತೆಗಳಿಗೆ 2000ರೂ.  ಮೊತ್ತವು ತಲುಪಿದೆ. ಈ ಯೋಜನೆಯಡಿ ಇದುವರೆಗೆ 12.14 ಕೋಟಿ ರೈತ ಕುಟುಂಬಗಳನ್ನು ಸಂಪರ್ಕಿಸಲಾಗಿದೆ. ಅದೇ ಸಮಯದಲ್ಲಿ, ನವೆಂಬರ್ 30 ರವರೆಗೆ, ಉಳಿದ ರೈತರ ಖಾತೆಗಳಿಗೆ ಹಣ ತಲುಪುತ್ತದೆ. 


COMMERCIAL BREAK
SCROLL TO CONTINUE READING

ರೈತರ ಖಾತೆಗೆ 4000 ರೂ. :
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojane) ತಮ್ಮನ್ನು ಇನ್ನೂ ನೋಂದಾಯಿಸಿಕೊಳ್ಳದ ಅರ್ಹ ರೈತರು ಸೆಪ್ಟೆಂಬರ್ 30 ರ ಮೊದಲು ಪಿಎಂ ಕಿಸಾನ್ ಯೋಜನೆಯಲ್ಲಿ ನೋಂದಾಯಿಸಿಕೊಂಡರೆ 4000 ರೂ. ಪಡೆಯಬಹುದಾಗಿದೆ. ಇದರೊಂದಿಗೆ ನೀವು 2 ಕಂತುಗಳನ್ನು ಒಟ್ಟಿಗೆ ಅಂದರೆ 4000 ರೂಪಾಯಿಗಳನ್ನು ಪಡೆಯುವ ಅವಕಾಶವಿದೆ. ಇದರ ಅಡಿಯಲ್ಲಿ, ನಿಮ್ಮ ಅರ್ಜಿಯನ್ನು ಸ್ವೀಕರಿಸಿದರೆ, ನೀವು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ 2000 ರೂ. ಇದರ ನಂತರ, ಡಿಸೆಂಬರ್‌ನಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ 2000 ರೂಪಾಯಿಗಳ ಮುಂದಿನ ಕಂತು ಬರುತ್ತದೆ. 


ಇದನ್ನೂ ಓದಿ- PM Awas Yojana 2021 Update: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸಿಗಲಿದೆ ಮತ್ತೊಂದು ದೊಡ್ಡ ಸೌಕರ್ಯ, ಫಟಾ-ಫಟ್ ಲಾಭ ಪಡೆದುಕೊಳ್ಳಿ


ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ನೋಂದಣಿಗೆ ಅಗತ್ಯವಾದ ದಾಖಲೆಗಳಿವು: 
1. ಪಿಎಂ ಕಿಸಾನ್ ಯೋಜನೆ (PM Kisan Yojane) ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಲು ಅರ್ಹ ರೈತರು ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಏಕೆಂದರೆ ಸರ್ಕಾರವು ರೈತರಿಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸುತ್ತದೆ.
2. ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು.
3. ನೀವು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಇದು ಇಲ್ಲದೆ ನೀವು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
4. ನಿಮ್ಮ ದಾಖಲೆಗಳನ್ನು PM ಕಿಸಾನ್ ವೆಬ್‌ಸೈಟ್ pmkisan.gov.in ನಲ್ಲಿ ಅಪ್‌ಲೋಡ್ ಮಾಡಿ.
5. ಆಧಾರ್ ಲಿಂಕ್ ಮಾಡಲು, ನೀವು ಫಾರ್ಮರ್ ಕಾರ್ನರ್ ಆಯ್ಕೆಗೆ ಹೋಗಿ ಮತ್ತು ಆಧಾರ್ ವಿವರವನ್ನು ಎಡಿಟ್ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಅಪ್ಡೇಟ್ ಮಾಡಿ.


ಈ ಯೋಜನೆಯಲ್ಲಿ ರೈತರು 9 ಕಂತುಗಳನ್ನು ಪಡೆದಿದ್ದಾರೆ:
2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯೊಂದಿಗೆ ಪಿಎಂ ಕಿಸಾನ್ ಯೋಜನೆಯನ್ನು 2018 ರಲ್ಲಿ ಆರಂಭಿಸಲಾಯಿತು. ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಸರ್ಕಾರವು 9 ಕಂತುಗಳನ್ನು ಬಿಡುಗಡೆ ಮಾಡಿದೆ. ಮೊದಲ ಕಂತಿನ ರೂಪದಲ್ಲಿ, ರೂ. 2000 ಮೊತ್ತವು 3,16,06,630 ರೈತರ ಖಾತೆಯನ್ನು ತಲುಪಿತು, ಇಲ್ಲಿಯವರೆಗೆ 9 ನೇ ಕಂತಿನಲ್ಲಿ, 9,90,95,145 ರೈತರ ಖಾತೆಗಳಿಗೆ ಹಣವನ್ನು ಕಳುಹಿಸಲಾಗಿದೆ. ಈಗ ನವೆಂಬರ್ 30 ರವರೆಗೆ, 9 ನೇ ಕಂತಿನ ಹಣವನ್ನು ಉಳಿದ ರೈತರ ಖಾತೆಗೆ ಕಳುಹಿಸಲಾಗುತ್ತದೆ. 


ಇದನ್ನೂ ಓದಿ- Petrol-Diesel Price : ಪ್ರಮುಖ ನಗರಗಳಲ್ಲಿಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ ನೋಡಿ…


ಪಿಎಂ ಕಿಸಾನ್ ಯೋಜನೆ ಅದ್ಭುತವಾದ ಯೋಜನೆ :
ಈ ಯೋಜನೆಯಡಿ, ವಾರ್ಷಿಕ 6000 ರೂ.ಗಳನ್ನು ಫಲಾನುಭವಿ ರೈತ ಕುಟುಂಬಗಳಿಗೆ ಅವರ ಬ್ಯಾಂಕ್ ಖಾತೆಗಳಲ್ಲಿ ವರ್ಗಾಯಿಸಲಾಗುತ್ತದೆ. ಈ ಮೊತ್ತವನ್ನು 2000-2000 ರೂಪಾಯಿಗಳ ಮೂರು ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ. ಈ ಯೋಜನೆಯಡಿ, 1.38 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಗೌರವ ಧನವನ್ನು ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.