Amazon Great Indian Festival Sale 2024: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸೆಪ್ಟೆಂಬರ್ 27, 2024 ರಂದು ಆರಂಭವಾಗಲಿದೆ. ಸೆಪ್ಟೆಂಬರ್ 26 ರಂದೇ ಅಮೆಜಾನ್‌ ಪ್ರೈಮ್ ಸದಸ್ಯರಿಗೆ ಸೇಲ್‌ ಪ್ರವೇಶಿಸುವ ಅವಕಾಶ ನೀಡುತ್ತದೆ. ಇದು ಈ ವರ್ಷದ ಅತಿದೊಡ್ಡ ಸೇಲ್‌ ಆಗಲಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಫ್ಯಾಷನ್, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಉತ್ಪನ್ನಗಳ ಮೇಲೆ ಬಹು ದೊಡ್ಡ ರಿಯಾಯಿತಿಗಳನ್ನು ನಿರೀಕ್ಷಿಸಲಾಗಿದೆ. ಮಾರಾಟದ ಮೊದಲು ಅಮೆಜಾನ್ ತನ್ನ ಬಳಕೆದಾರರಿಗೆ Apple iPhone 15 ಅನ್ನು ಉಚಿತವಾಗಿ ಗೆಲ್ಲುವ ಅವಕಾಶವನ್ನು ನೀಡುತ್ತಿದೆ. 


COMMERCIAL BREAK
SCROLL TO CONTINUE READING

Amazon ನಿಂದ iPhone 15 ಅನ್ನು ಉಚಿತವಾಗಿ ಪಡೆಯುವುದು ಹೇಗೆ?


Amazon ನ 'ಗೆಟ್ ಸೇಲ್ ರೆಡಿ' ಆಫರ್‌ನಲ್ಲಿ iPhone 15 ಅನ್ನು ಗೆಲ್ಲುವ ಅವಕಾಶವಿದೆ. ನೀವು ಮಾಡಬೇಕಾಗಿರುವುದು 'ಸ್ಪಿನ್ ಮತ್ತು ವಿನ್' ಆಟವನ್ನು ಆಡುವುದು. ಆ ಬಳಿಕ ನೀವು ಉಚಿತ iPhone 15 ಅನ್ನು ಗೆಲ್ಲಲು ಅರ್ಹರಾಗುತ್ತೀರಿ.


ಇದನ್ನೂ ಓದಿ: ಹೊಸಕೋಟೆ ಪಟ್ಟಣದಲ್ಲಿ 100 ಎಕರೆ ಭೂಮಿಯಲ್ಲಿ ವಾಣಿಜ್ಯ ಗೋದಾಮಿನ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿದ ಸುಮಧುರಾ ಗ್ರೂಪ್


ಲಕ್ಕಿ ಡ್ರಾಗೆ ಪ್ರವೇಶಿಸುವುದು ಹೇಗೆ?


- ಅಮೆಜಾನ್ ಇಂಡಿಯಾ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಹೋಗಿ.
- ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬ್ಯಾನರ್ ಮೇಲೆ ಟ್ಯಾಪ್ ಮಾಡಿ.
- ಇಲ್ಲಿ ನೀವು 'ಗೆಟ್ ಸೇಲ್ ರೆಡಿ' ಬ್ಯಾನರ್ ಅನ್ನು ನೋಡುತ್ತೀರಿ. ಅಲ್ಲಿ ನೀವು 'ಐಫೋನ್ 15 ಅನ್ನು ಗೆಲ್ಲುವ ಅವಕಾಶ' ಎಂದು ಬರೆದಿರುವುದನ್ನು ಕಾಣುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ.
- ಈಗ ನೀವು ಅಮೆಜಾನ್‌ನ ಫನ್ ಝೋನ್‌ಗೆ ಪ್ರವೇಶಿಸುತ್ತೀರಿ. ಇಲ್ಲಿ 'ಸ್ಪಿನ್ ಮತ್ತು ವಿನ್' ಆಟವನ್ನು ನೀಡಲಾಗುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ ಮತ್ತು ಚಕ್ರವನ್ನು ತಿರುಗಿಸಿ.
- ನಿಮ್ಮ ಲಕ್‌ ಚೆನ್ನಾಗಿದ್ದರೆ ಜಾಕ್‌ಪಾಟ್ ಅನ್ನು ಹೊಡೆಯುತ್ತೀರಿ. Apple iPhone 15 ಅನ್ನು ಗೆಲ್ಲಲು ಲಕ್ಕಿ ಡ್ರಾಗೆ ಎಂಟ್ರಿ ಪಡೆಯುತ್ತೀರಿ.


Amazon ಪ್ರಕಾರ, ಈ ಆಟದ ವಿಜೇತರನ್ನು ಅಕ್ಟೋಬರ್ 1, 2024 ರಂದು ಘೋಷಿಸಲಾಗುತ್ತದೆ. ಅಲ್ಲದೆ, ಈ ಆಟವನ್ನು ಆಡಲು ನಿಮಗೆ ಒಮ್ಮೆ ಮಾತ್ರ ಅವಕಾಶ ನೀಡಲಾಗುತ್ತದೆ. 


ಇದನ್ನೂ ಓದಿ: Best Prepaid Plans: ಕೇವಲ 7 ರೂಪಾಯಿ ಪಾವತಿಸಿ ಪ್ರತಿದಿನ 2GB ಡೇಟಾವನ್ನು ಪಡೆಯಿರಿ!


iPhone 15 ವೈಶಿಷ್ಟ್ಯಗಳು


Apple iPhone 15 ಅನ್ನು 2023 ರಲ್ಲಿ ಬಿಡುಗಡೆ ಮಾಡಲಾಯಿತು. ಇದು 2024 ರ ಮೊದಲ ತ್ರೈಮಾಸಿಕದಲ್ಲಿ ಹೆಚ್ಚು ಮಾರಾಟವಾದ ಫೋನ್‌ಗಳಲ್ಲಿ ಒಂದಾಗಿದೆ. iPhone 15 A16 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 6.1-ಇಂಚಿನ ರೆಟಿನಾ ಡಿಸ್ಪ್ಲೇಯೊಂದಿಗೆ ಹಿಂಭಾಗದಲ್ಲಿ 48MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಹ್ಯಾಂಡ್‌ಸೆಟ್ ಚಾರ್ಜ್ ಮಾಡಲು USB ಟೈಪ್-C ಪೋರ್ಟ್ ಅನ್ನು ನೀಡುತ್ತದೆ ಮತ್ತು iOS18 ಸಾಫ್ಟ್‌ವೇರ್ ಅಪ್‌ಡೇಟ್‌ಗೆ ಹೊಂದಿಕೊಳ್ಳುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.