SBI ATM Withdrawl Rule Changed : ಎಸ್‌ಬಿಐ ಈಗ ಎಟಿಎಂನಿಂದ  ಹಣ ತೆಗೆಯುವ ನಿಯಮವನ್ನು ಬದಲಾಯಿಸಿದೆ. ಈಗ ಎಸ್‌ಬಿಐ ಎಟಿಎಂನಿಂದ ನಗದು ಪಡೆಯಬೇಕಾದರೆ ವಿಶೇಷ ಸಂಖ್ಯೆಯನ್ನು ನೀಡಬೇಕು. ಈ ಸಂಖ್ಯೆಯನ್ನು ನಮೂದಿಸದಿದ್ದರೆ ಎಟಿಎಂನಿಂದ ಹಣ ಬರುವುದಿಲ್ಲ. ಎಟಿಎಂ ವಹಿವಾಟುಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಬ್ಯಾಂಕ್ ಈ ಕ್ರಮ ಕೈಗೊಂಡಿದೆ. 


COMMERCIAL BREAK
SCROLL TO CONTINUE READING

ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ಈ ಹೊಸ ನಿಯಮದ ಪ್ರಕಾರ ಗ್ರಾಹಕರು ಒಟಿಪಿ ಇಲ್ಲದೆ ಎಟಿಎಂನಿಂದ ನಗದು ತೆಗೆಯುವಂತಿಲ್ಲ. ನಗದು  ತೆಗೆದುಕೊಳ್ಳುವ ಸಮಯದಲ್ಲಿ, ಗ್ರಾಹಕರ ಮೊಬೈಲ್ ಫೋನ್‌ಗಳಲ್ಲಿ OTP ಬರುತ್ತದೆ. ಆ ಒಟಿಪಿಯನ್ನು ನಮೂದಿಸಿದ ಬಳಿಕವೇ ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ.  


ಇದನ್ನೂ ಓದಿ : Gold Price Today : ಚಿನ್ನದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ದರದಲ್ಲಿ ಕೊಂಚ ಏರಿಕೆ


ಏನಿದು ಹೊಸ ನಿಯಮ ? : 
ಗ್ರಾಹಕರನ್ನು ವಂಚನೆಯಿಂದ ರಕ್ಷಿಸುವ ಸಲುವಾಗಿ ನಿಯಮ ಜಾರಿಗೆ ತರಲಾಗಿದೆ. 10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಎಟಿಎಂನಿಂದ ಡ್ರಾ ಮಾಡುವವರಿಗೆ ಈ ನಿಯಮ ಅನ್ವಯವಾಗುತ್ತದೆ. ಇದರ ಅಡಿಯಲ್ಲಿ, SBI ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTPಯನ್ನು ಹಾಕಿದ ನಂತರವೇ ATMನಿಂದ 10,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡುವುದು ಸಾಧ್ಯವಾಗುತ್ತದೆ. 


ಸಂಪೂರ್ಣ ಪ್ರಕ್ರಿಯೆಯನ್ನು ಇಲ್ಲಿದೆ : 
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
- ಈ OTP ನಾಲ್ಕು ಅಂಕಿಗಳ ಸಂಖ್ಯೆಯಾಗಿರುತ್ತದೆ. 
- ಒಮ್ಮೆ ನೀವು  ಡ್ರಾ ಮಾಡಲು ಬಯಸುವ ಮೊತ್ತವನ್ನು ನಮೂದಿಸಿದರೆ, ಎಟಿಎಂ ಸ್ಕ್ರೀನ್ ನಲ್ಲಿ OTPಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ.
- ಆಗ ನಿಮ್ಮ ಮೊಬೈಲ್ ನಲ್ಲಿ ಬಂದ ಒತಿಪಿಯನ್ನು ನಮೂದಿಸಬೇಕು.  


ಇದನ್ನೂ ಓದಿ : Bank Credit: ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ, ಗ್ರಾಹಕರ ಜೇಬಿನ ಮೇಲೆ ನೇರ ಪ್ರಭಾವ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.