Indian Railways: ಆನ್ ಲೈನ್ ಟಿಕೆಟ್ ಬುಕಿಂಗ್ ನಿಯಮದಲ್ಲಿ ಬದಲಾವಣೆ, ಇನ್ನು ಈ ಪ್ರಕ್ರಿಯೆ ಪೂರ್ಣಗೊಳಿಸುವುದು ಅಗತ್ಯ
ವೆರಿಫಿಕೆಶನ್ ಪ್ರಕ್ರಿಯೆ ಪೂರ್ಣಗೊಂಡ ನಂತರ, ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಈ ವೆರಿಫಿಕೆಶನ್ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಇದನ್ನು ಒಂದು ನಿಮಿಷದಲ್ಲಿ ಮಾಡಿಬಿಡಬಹುದು. ಅಲ್ಲದೆ, ಇದನ್ನು ಮನೆಯಲ್ಲಿಯೇ ಸುಲಭವಾಗಿ ಪೂರ್ಣಗೊಳಿಸಬಹುದು.
ನವದೆಹಲಿ : Indian Railways : ರೈಲು ಪ್ರಯಾಣವನ್ನು ಯೋಜಿಸುತ್ತಿದ್ದು, ಇನ್ನೂ ಟಿಕೆಟ್ ಬುಕ್ ಮಾಡಿರದಿದ್ದರೆ, ಟಿಕೆಟ್ ಬುಕಿಂಗ್‌ನ ಬದಲಾದ ನಿಯಮಗಳನ್ನು ತಿಳಿದುಕೊಂಡಿರಬೇಕು. ಐಆರ್‌ಸಿಟಿಸಿ (IRCTC) ಆನ್‌ಲೈನ್ ಟಿಕೆಟ್ ಬುಕಿಂಗ್ (Online ticke booking) ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಈಗ ಟಿಕೆಟ್‌ಗಳನ್ನು ಬುಕ್ ಮಾಡುವಾಗ, ವೆರಿಫಿಕೆಶನ್ ಪ್ರಕ್ರಿಯೆ ಪೂರ್ಣಗೊಳಿಸುವುದು ಅಗತ್ಯವಾಗಿರುತ್ತದೆ. ಹಾಗಾಗಿ ಟಿಕೆಟ್ ಬುಕ್ ಮಾಡುವ ಮುನ್ನ ವೆರಿಫಿಕೆಶನ್ ಪ್ರಕ್ರಿಯೆ ಪೂರ್ಣಗೊಂಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು, ಐಆರ್‌ಸಿಟಿಸಿ ಹೇಳಿದೆ. ಈ ವೆರಿಫಿಕೆಶನ್ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಎರಡನ್ನೂ ಒಳಗೊಂಡಿದೆ.
ವೆರಿಫಿಕೆಶನ್ ಪ್ರಕ್ರಿಯೆ ಪೂರ್ಣಗೊಂಡ ನಂತರ, ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ (Online ticket book) ಮಾಡಬಹುದು. ಈ ವೆರಿಫಿಕೆಶನ್ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಇದನ್ನು ಒಂದು ನಿಮಿಷದಲ್ಲಿ ಮಾಡಿಬಿಡಬಹುದು. ಅಲ್ಲದೆ, ಇದನ್ನು ಮನೆಯಲ್ಲಿಯೇ ಸುಲಭವಾಗಿ ಪೂರ್ಣಗೊಳಿಸಬಹುದು. ಆದರೆ, ನಿಯಮಿತವಾಗಿ ಟಿಕೆಟ್ ಬುಕ್ ಮಾಡುವ ಗ್ರಾಹಕರು ಈ ಪ್ರಕ್ರಿಯೆಯನ್ನು ಮಾಡಬೇಕಿಲ್ಲ. IRCTC ಯ ಆನ್‌ಲೈನ್ ಪೋರ್ಟಲ್ ಮೂಲಕ ಆನ್‌ಲೈನ್ ಟಿಕೆಟ್ ಬುಕ್ ಮಾಡಬಹುದು. ಲಾಗಿನ್ ಪಾಸ್‌ವರ್ಡ್‌ಗಳನ್ನು (Login password) ರಚಿಸಲು ಗ್ರಾಹಕರು ಈಗ ಇಮೇಲ್ ಮತ್ತು ಫೋನ್ ನಂಬರ್ ಗಳನ್ನೂ ನೀಡಬೇಕಾಗುತ್ತದೆ. ಅಂದರೆ ವೆರಿಫಿಕೆಶನ್ ಮಾಡಿದ ನಂತರವೇ ಟಿಕೆಟ್ ಬುಕ್ ಮಾಡಬಹುದು.
ಇದನ್ನೂ ಓದಿ : INTERNET ಇಲ್ಲದೆಯೂ ಕೂಡ UPI ಮೂಲಕ ಆನ್ಲೈನ್ ಪೇಮೆಂಟ್ ಮಾಡಬಹುದು! ಹೇಗೆ?
- ನೀವು IRCTC ಪೋರ್ಟಲ್‌ಗೆ ಲಾಗ್ ಇನ್ ಮಾಡಿದಾಗ, ಹೊಸ ವೆರಿಫಿಕೆಶನ್ ವಿಂಡೋ ತೆರೆಯುತ್ತದೆ.
- ಅಲ್ಲಿ ನೀವು ನಿಮ್ಮ ನೋಂದಾಯಿತ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು (Mobile number) ನಮೂದಿಸಬೇಕು.
- ಪುಟದ ಒಂದು ಭಾಗದಲ್ಲಿ ವೆರಿಫಿಕೆಶನ್ ಆಯ್ಕೆ ಕಾಣಿಸುತ್ತದೆ. ಇನ್ನೊಂದು ಸಭಾಗದಲ್ಲಿ ಎಡಿಟ್ ಆಯ್ಕೆ ಕಾಣಿಸುತ್ತದೆ.
- ಒಂದು ವೇಳೆ, ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವುದಾದರೆ, ಎಡಿಟ್ ಆಯ್ಕೆಯನ್ನು ಆರಿಸಿಕೊಳ್ಳಬಹುದು.
- ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ನೀವು ನೀಡಿದ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
- ಪೋರ್ಟಲ್‌ನಲ್ಲಿ ಒಟಿಪಿ ಅನ್ನು ಹಾಕಿದ ನಂತರ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲಾಗುತ್ತದೆ. ಇಮೇಲ್ ಅನ್ನು ಕೂಡಾ ಅದೇ ರೀತಿಯಲ್ಲಿ ಪರಿಶೀಲಿಸಬೇಕು.
ಇದನ್ನೂ ಓದಿ : ವೇತನ ಹೆಚ್ಚಳದ ಖುಷಿ ಮೇಲೆ ಗ್ರಹಣ, ನಿಯಮ ಬದಲಾವಣೆ ನಂತರ ಸ್ಯಾಲರಿ ಸ್ಲಿಪ್ ನಲ್ಲಿ ಆಗಲಿದೆ ಬಹು ದೊಡ್ಡ ಬದಲಾವಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.