ಬೆಂಗಳೂರು : Cheapest Electric Car in India : ಮುಂಬೈ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ ಅಪ್ ಪಿಎಂವಿ ಎಲೆಕ್ಟ್ರಿಕ್  ಇಎಎಸ್-ಇ ಹೆಸರಿನ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದರ ಬೆಲೆ ಆಲ್ಟೊಗಿಂತ ಕಡಿಮೆ ಎಂದು ಹೇಳಲಾಗುತ್ತಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಅದರ ಮಾರಾಟ ಪ್ರಾರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಈ ಕಾರಿನಲ್ಲಿರುವ ಅದ್ಭುತ ವೈಶಿಷ್ಟ್ಯಗಳು :
EAS-e ಒಂದು ಪರಿಸರ ಸ್ನೇಹಿ ಮತ್ತು ಸಮರ್ಥನೀಯ ಎಲೆಕ್ಟ್ರಿಕ್ ಕಾರು. ಇದು 4 ಬಾಗಿಲುಗಳನ್ನು ಹೊಂದಿದೆ. ಆದರೆ ಈ ಕಾರಿನಲ್ಲಿ ಮುಂಭಾಗದಲ್ಲಿ ಕೇವಲ ಒಂದು ಆಸನ ಮತ್ತು ಹಿಂಭಾಗದಲ್ಲಿ ಒಂದು ಆಸನವಿದೆ.  ಈ  ಕಾರಿನ  ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ಅದು ಸಿಟ್ರೊಯೆನ್ AMI ಮತ್ತು MG E200 ನಂತೆ ಕಾಣುತ್ತದೆ. ಇದಲ್ಲದೆ, ರಿಮೋಟ್ ಪಾರ್ಕಿಂಗ್ ಅಸಿಸ್ಟ್, ರಿಮೋಟ್ ಕೀ ಕನೆಕ್ಟಿವಿಟಿ, 1 ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 1 ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಇದರ ಹೊರತಾಗಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, OTA ಅಪ್‌ಡೇಟ್‌ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ರಿಮೋಟ್ ಕೀಲೆಸ್ ಎಂಟ್ರಿ, ಪವರ್ ವಿಂಡೋಸ್, ಎಲೆಕ್ಟ್ರಾನಿಕ್ ಕಂಟ್ರೋಲ್ ಮಿರರ್,  ರಿಯರ್ ವ್ಯೂ ಕ್ಯಾಮೆರಾ, ಹವಾನಿಯಂತ್ರಣ ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿವೆ. 


ಇದನ್ನೂ ಓದಿ : New Wage Code: ವಾರದಲ್ಲಿ ಮೂರು ದಿನ ರಜೆ, ನಾಲ್ಕೇ ದಿನ ಕೆಲಸ, ಈ ದಿನದಿಂದ ಜಾರಿ ಹೊಸ ನಿಯಮ


4 ಗಂಟೆಗಳಲ್ಲಿ ಆಗುತ್ತದೆ ಸಂಪೂರ್ಣ ಚಾರ್ಜ್ :  
ಈ ಕಾರಿನ ವೀಲ್ ಬೇಸ್ 2,087 ಎಂಎಂ ಮತ್ತು ಗ್ರೌಂಡ್ ಕ್ಲಿಯರೆನ್ಸ್ 170 ಎಂಎಂ ಇರಲಿದೆ. ಟ್ರಾಫಿಕ್‌ನಲ್ಲಿ ಹ್ಯಾಂಡ್ಸ್-ಫ್ರೀ ಡ್ರೈವಿಂಗ್‌ಗಾಗಿ ಕಾರಿನಲ್ಲಿ  EAS-E ಮೋಡ್ ಅನ್ನು ಹೊಂದಿರುತ್ತದೆ. ಈ ಮೋಡ್‌ನಲ್ಲಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು "+" ಬಟನ್‌ನೊಂದಿಗೆ 20 kmph ವರೆಗೆ ಮುಂದುವರೆಯಲು ಮತ್ತು "-" ಬಟನ್‌ನೊಂದಿಗೆ ಬ್ರೇಕ್ ಹಾಕುವ ಆಯ್ಕೆಯನ್ನು ನೀಡುತ್ತದೆ. 3 kW AC ಚಾರ್ಜರ್‌ನೊಂದಿಗೆ, ಈ ಕಾರನ್ನು 4 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. 


ಎಷ್ಟು ವೆಚ್ಚ? :
ಈ ಕಾರಿನ ಬೆಲೆ  4 ಲಕ್ಷದಿಂದ 6 ಲಕ್ಷದವರೆಗೆ ಇರುತ್ತದೆ.  ಇದರಲ್ಲಿ ನೀವು ಅನೇಕ ವಿಧದ ರೂಪಾಂತರಗಳನ್ನು ಕಾಣಬಹುದು. EAS-E 2 ಸೀಟರ್ ಬೆಲೆ  4 ಲಕ್ಷದಿಂದ ಪ್ರಾರಂಭವಾಗುತ್ತದೆ. ಈ ಕಾರನ್ನು 120 ಕಿಮೀ, 160 ಕಿಮೀ ಮತ್ತು 200 ಕಿಮೀ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರಸ್ತುತ ಟಾಟಾ ಟಿಗೋರ್ ಇವಿ ಅಗ್ಗದ ಎಲೆಕ್ಟ್ರಿಕ್ ಕಾರು ಎಂದು ಹೇಳಬಹುದಾಗಿದೆ. 


ಇದನ್ನೂ ಓದಿ : PM Kisan: ನೀವೂ ಈ ತಪ್ಪು ಮಾಡಿದ್ದರೆ ಖಾತೆ ಸೇರಲ್ಲ ಪಿಎಂ ಕಿಸಾನ್ ಹಣ


 ಕಾರಿನ ಬಣ್ಣ  : 
ಸಿಲ್ವರ್, ವೈಟ್, ಗ್ರೀನ್, ರೆಡ್, ಆರೆಂಜ್, ಬ್ಲ್ಯಾಕ್, ಬ್ಲೂ, ಹಳದಿ, ಬ್ರೌನ್ ಮತ್ತು ಬೀಜ್ ಸೇರಿದಂತೆ ಡ್ಯುಯಲ್-ಟೋನ್  ಎಕ್ಸ್ ಟೀರಿಯರ್  ಥೀಮ್‌ಗಳಲ್ಲಿ ಈ ಕಾರೂ ಬರಲಿದೆ. EAS-e ಸಂಪೂರ್ಣ ಎಲೆಕ್ಟ್ರಿಕ್ 'ಸ್ಮಾರ್ಟ್ ಮೈಕ್ರೋಕಾರ್' ಆಗಿದ್ದು, ದೈನಂದಿನ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ.


ಈ ರೀತಿಯಲ್ಲಿ ಮುಂಗಡ ಬುಕ್ ಮಾಡಬಹುದು :
EAS-E ಪ್ರಸ್ತುತ ಆನ್‌ಲೈನ್ ಬುಕಿಂಗ್‌ಗೆ ಲಭ್ಯವಿದೆ. https://pmvelectric.com/product/ease/ ಗೆ ಭೇಟಿ ನೀಡುವ ಮೂಲಕ ಅದನ್ನು ಮೊದಲೇ ಬುಕ್ ಮಾಡಬಹುದು . ಇದಕ್ಕಾಗಿ,  2,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ಹಣವನ್ನು ರಿಫಂಡ್ ಮಾಡಲಾಗುತ್ತದೆ. ಈ ಎಲೆಕ್ಟ್ರಿಕ್ ಕಾರನ್ನು ಜುಲೈನಲ್ಲಿ ಬಿಡುಗಡೆ ಮಾಡಲಾಗುವುದು ಮತ್ತು ವರ್ಷದ ದ್ವಿತೀಯಾರ್ಧದಲ್ಲಿ ಗ್ರಾಹಕರೂ ಯಾದನ್ನು ಪಡೆಯುವುದು ಸಾಧ್ಯವಾಗುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.