ನವದೆಹಲಿ: ದೇಶದಲ್ಲಿ ಇದೀಗ ಎಲೆಕ್ಟ್ರಿಕ್ ಸ್ಕೂಟರ್‌ಗಳದ್ದೇ ಕಾರುಬಾರು. ದಿನದಿಂದ ದಿನಕ್ಕೆ ಇವುಗಳಿಗೆ ಬೇಡಿಕೆ ಹೆಚ್ಚುತ್ತಲಿದ್ದು, ಮಾರಾಟವೂ ಹೆಚ್ಚಾಗಿದೆ. ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವ ವಿಭಿನ್ನ ವಿನ್ಯಾಸಗಳ ಇ-ಸ್ಕೂಟರ್‍ಗಳು ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಜನರು ಸಹ ಬಿಸಿದೋಸೆಯಂತೆ ಖರೀದಿ ಮಾಡ್ತಿದ್ದಾರೆ. ಹೊಸ ಹೊಸ ಕಂಪನಿಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇ-ಬೈಕ್‍ಗಳ ಮಾರಾಟ ಸ್ಪರ್ಧೆಯೂ ಜೋರಾಗಿದೆ.


COMMERCIAL BREAK
SCROLL TO CONTINUE READING

ಪ್ರಸಿದ್ಧ ಆಟೋಮೊಬೈಲ್ ಕಂಪನಿಗಳಾದ ಬಜಾಜ್ ಆಟೋ, ಹೀರೋ ಮೋಟೋಕಾರ್ಪ್, ಟಿವಿಎಸ್ ಮೋಟಾರ್ಸ್ ಜೊತೆಗೆ ಓಲಾ, ಎಥರ್, ಬೌನ್ಸ್ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ.  ನೀಡುತ್ತಿವೆ. EV ವಿಭಾಗದಲ್ಲಿ ಹೊಸ ಹೊಸ ಸ್ಟಾರ್ಟ್‌ಅಪ್‌ಗಳು ಅದೃಷ್ಟ ಪರೀಕ್ಷೆಗೆ ಇಳಿದಿವೆ.


ಇದನ್ನೂ ಓದಿ: ಈ ಒಂದು ಕೆಲಸ ಮಾಡಿದರೆ ಕಾರು ಲೋನ್ ಮೇಲಿನ ಸಂಪೂರ್ಣ ಬಡ್ಡಿ ಮನ್ನಾವಾಗುತ್ತದೆ .!


ಬಜೆಟ್ ಬೆಲೆಗೆ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್!


ನೀವೂ ಸಹ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬಯಸಿದರೆ ನಾವು ನಿಮಗೆ ಬೆಸ್ಟ್ ಸ್ಕೂಟರ್ ಬಗ್ಗೆ ತಿಳಿಸಿಕೊಡಲಿದ್ದೇವೆ. ದೆಹಲಿ ಐಐಟಿ ಮೂಲದ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ಅಪ್ ಬಾಜ್ ಬೈಕ್(Baaz Electric Scooter)ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದರಲ್ಲಿ ಬ್ಯಾಟರಿ ವಿನಿಮಯ ಸೌಲಭ್ಯವೂ ಇದೆ. ಮಳೆ ಮತ್ತು ಧೂಳಿನಿಂದ ರಕ್ಷಿಸಲು IP65 ರೇಟಿಂಗ್ ಸಹ ಹೊಂದಿದೆ. ಬಜೆಟ್‍ಗೆ ತಕ್ಕಂತೆ ಬಾಜ್ ಎಲೆಕ್ಟ್ರಿಕ್ ಸ್ಕೂಟರ್ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಬೆಲೆ ಕೇವಲ 35 ಸಾವಿರ ರೂ. ಮಾತ್ರ.


ಒಮ್ಮೆ ಚಾರ್ಜ್ ಮಾಡಿದ್ರೆ 100 ಕಿ.ಮೀ ಕ್ರಮಿಸುತ್ತೆ!


ಕೇವಲ 90 ಸೆಕೆಂಡುಗಳಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿರುವ ಬ್ಯಾಟರಿ  ಬದಲಾಯಿಸಬಹುದಂತೆ. ಬ್ಯಾಟರಿ ವಿನಿಮಯ ಕೇಂದ್ರದಲ್ಲಿ ಬ್ಯಾಟರಿ ಬದಲಾಯಿಸುವ ಮೂಲಕ ನೀವು ತಡೆರಹಿತ ಪ್ರಯಾಣ ಮಾಡಬಹುದು. ಈ ಸ್ಕೂಟರ್‍ನ ಉದ್ದ 1624 MM, ಅಗಲ 680 MM, ಎತ್ತರ 1052 MM ಇದೆ. ಈ ವಾಹನಕ್ಕೆ ಯಾವುದೇ ನೋಂದಣಿ ಅಗತ್ಯವಿಲ್ಲ, ಡ್ರೈವಿಂಗ್ ಲೈಸೆನ್ಸ್​ ಕೂಡ ಬೇಕಾಗಿಲ್ಲ. ಒಮ್ಮೆ ಚಾರ್ಜ್ ಮಾಡಿದ್ರೆ ನೀವು 100 ಕಿ.ಮೀ ದೂರ ಕ್ರಮಿಸಬಹುದು.  


ಇದನ್ನೂ ಓದಿ: ಆನ್‌ಲೈನ್ ರೈಲ್ವೇ ಟಿಕೆಟ್ ಬುಕಿಂಗ್ ನಿಯಮದಲ್ಲಿ ಬದಲಾವಣೆ .! IRCTC ಹೊಸ ಆದೇಶ


ಈ ಇ-ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 25 ಕಿ.ಮೀ. ಇದು ಡ್ಯುಯಲ್ ಫೋರ್ಕ್ ಹೈಡ್ರಾಲಿಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳಿವೆ. ಇದು ಸ್ಕೂಟರ್ ಸರಾಗವಾಗಿ ಚಲಿಸಲು ಸಹಾಯ ಮಾಡುತ್ತದೆ. ನೀವು ಈ ಸ್ಕೂಟರ್ ಅನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಎಲ್ಲಿಯಾದರೂ ನೀವೂ ಸ್ಕೂಟರ್ ನಿಲ್ಲಿಸಿದ್ರೆ ಸ್ಕೂಟರ್ ಫೈಂಡ್ ಮೈ ಸ್ಕೂಟರ್ ಬಟನ್ ಮೂಲಕ ಅದು ಅಲ್ಲಿದೆ ಅಂತಾ ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ಹಾಗಾದ್ರೆ ಇನ್ನೇಕೆ ತಡ ಕೂಡಲೇ ಈ ಸ್ಕೂಟರ್ ಖರೀದಿಸಿ ನಿಮ್ಮ ಮನೆಗೆ ತನ್ನಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.