ಬೆಂಗಳೂರು: ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ, ಇಂದಿನಿಂದ ಅಂದರೆ ಡಿಸೆಂಬರ್ 18, 2023 ರಿಂದ ಉತ್ತಮ ಅವಕಾಶ ಸಿಗುತ್ತಿದೆ. ಏಕೆಂದರೆ ಹೊಸ ಸರಣಿಯ ಸಾರ್ವಭೌಮ ಗೋಲ್ಡ್ ಬಾಂಡ್ ಯೋಜನೆ- 2023-24 ಇಂದಿನಿಂದ ಆರಂಭಗೊಂಡಿದೆ, ಇದರಲ್ಲಿ ನೀವು ರಿಯಾಯಿತಿಯೊಂದಿಗೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು ಮತ್ತು ನೀವು ಹೂಡಿಕೆ ಉದ್ದೇಶಗಳಿಗಾಗಿ ಚಿನ್ನದಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸಿದರೆ, ಚಿನ್ನದ ಬಾಂಡ್ ಆಯ್ಕೆಯು ನಿಮಗೆ ಏಕೆ ಉತ್ತಮವಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ ಸಂಗತಿ. (Business News In Kannada).


COMMERCIAL BREAK
SCROLL TO CONTINUE READING

ಗೋಲ್ಡ್ ಬಾಂಡ್ ಯೋಜನೆಯ ವಿಶೇಷ ಲಕ್ಷಣಗಳು
ಡಿಸೆಂಬರ್ 18 ಮತ್ತು 22 ರ ನಡುವೆ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರಾರಂಭಿಸಲಾದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ - 2023-24 ರ ಮೂರನೇ ಸರಣಿ ತೆರೆದುಕೊಂಡಿದೆ. ನಾಲ್ಕನೇ ಕಂತು ಫೆಬ್ರವರಿಯಲ್ಲಿ ತೆರೆಯಲಿದೆ. ಮೂರನೇ ಕಂತಿನ ಸರಣಿ ದಿನಾಂಕ ಡಿಸೆಂಬರ್ 18 ಆಗಿದೆ ಮತ್ತು ಅದು ಈ ವರ್ಷದ ಅಂದರೆ  2023-24 ರ ಯೋಜನೆಯ ಸರಣಿಯಾಗಿರಲಿದೆ. ಹಣಕಾಸು ವರ್ಷದ ಕೊನೆಯ ಅಂದರೆ ನಾಲ್ಕನೇ ಯೋಜನೆಯು ಫೆಬ್ರವರಿ 12 ರಿಂದ 16 ರವರೆಗೆ ತೆರೆದುಕೊಳ್ಳಲಿದೆ.


ಗೋಲ್ಡ್ ಬಾಂಡ್‌ನಲ್ಲಿ ನೀವು ಯಾವ ಬೆಲೆಯಲ್ಲಿ ಚಿನ್ನ ಖರೀದಿಸಬಹುದು?
ಈ ಯೋಜನೆಯಡಿ, ಆರ್‌ಬಿಐ ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು 6,199 ರೂ. ನಿಗದಿಪಡಿಸಿದೆ.  ಚಿನ್ನದ ಬಾಂಡ್ ಅಡಿಯಲ್ಲಿ ಲೋಹದ ಬೆಲೆಯನ್ನು ನಿರ್ಧರಿಸಲು, ನಾವು 999 ಶುದ್ಧತೆಯ ಚಿನ್ನದ ಸರಾಸರಿ ಮುಕ್ತಾಯದ ಬೆಲೆಯನ್ನು ನೋಡಲಾಗುತ್ತದೆ. ಇಶ್ಯೂ ಜಾರಿಯಾಗುವ ಮೊದಲು IBJA ನ 3 ದಿನದ ಸರಾಸರಿ ಬೆಲೆಯನ್ನು ಇದು ಆಧರಿಸಿರುತ್ತದೆ. 


ಹೇಗೆ ಖರೀದಿಸಬೇಕು?
ನೀವು ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಹಲವು ವಿಧಗಳಲ್ಲಿ ಹೂಡಿಕೆ ಮಾಡಬಹುದು
- ಬ್ಯಾಂಕ್‌ಗಳಿಂದ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದು
- ಆನ್‌ಲೈನ್ ಖರೀದಿಯಲ್ಲಿ ನೀವು ರೂ 50/ಗ್ರಾಂ ರಿಯಾಯಿತಿಯನ್ನು ಪಡೆಯಬಹುದು.
- ನೀವು ಅಂಚೆ ಕಚೇರಿಯಿಂದಲೂ ಖರೀದಿಸಬಹುದು.
- ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಮೂಲಕ ಖರೀದಿಸಬಹುದು.
- BSE ಮತ್ತು NSE ಪ್ಲಾಟ್‌ಫಾರ್ಮ್‌ಗಳಿಂದಲೂ ಖರೀದಿಸಲು ಒಂದು ಆಯ್ಕೆ ಇದೆ.


ಇದನ್ನೂ ಓದಿ-ನಿಮ್ಮ ಖಾತೆಯಲ್ಲಿ 35 ಸಾವಿರ ರೂ.ಗಳಿವೆಯಾ? ಈ ದೇಶಕ್ಕೆ ಹೋಗಿ ಕೋಟ್ಯಾಧೀಶರಾಗುವಿರಿ!


ಚಿನ್ನದ ಬಾಂಡ್‌ಗಳಲ್ಲಿ ಏಕೆ ಹೂಡಿಕೆ ಮಾಡಬೇಕು?
ಚಿನ್ನದ ಬಾಂಡ್‌ಗಳು ಅನೇಕ ಪ್ರಯೋಜನಗಳನ್ನು ಹೊಂದಿವೆ. ಇದರ ಮೇಲೆ ನೀವು ವಾರ್ಷಿಕವಾಗಿ ಶೇ. 2.4 ಬಡ್ಡಿಯನ್ನು ಪಡೆಯುತ್ತೀರಿ, ಇದನ್ನು ಪ್ರತಿ ಆರು ತಿಂಗಳಿಗೊಮ್ಮೆ ಪಾವತಿಸಲಾಗುತ್ತದೆ. ಇದೇ ವೇಳೆ, ಮಾರುಕಟ್ಟೆ ಬೆಲೆಗಳು ಹೆಚ್ಚಾದಾಗ, ನಿಮ್ಮ ಹೂಡಿಕೆಯ ಮೌಲ್ಯವೂ ಹೆಚ್ಚಾಗುತ್ತದೆ. ಇದರ ಹೊರತಾಗಿ ಅನೇಕ ಪ್ರಯೋಜನಗಳಿವೆ.


ಇದನ್ನೂ ಓದಿ-ಚಳಿಗಾಲದಲ್ಲಿ ರೈಲು ವಿಳಂಬವಾಗಿ ಚಲಿಸುತ್ತಿದೆಯೇ? ಕೇವಲ ರೂ.25ಕ್ಕೆ ಈ ರೀತಿ ಎಸಿ ರೂಂ ಬುಕ್ ಮಾಡಿ!

1. GST ವ್ಯಾಪ್ತಿಗೆ ಬರುವುದಿಲ್ಲ, ಭೌತಿಕ ಚಿನ್ನದ ಮೇಲೆ 3% GST ವಿಧಿಸಲಾಗುತ್ತದೆ.
2. ಚಿನ್ನದ ಬಾಂಡ್‌ಗಳಲ್ಲಿ ವರ್ಗಾವಣೆ ಆಯ್ಕೆಯೂ ಲಭ್ಯವಿದೆ.
3. ಬಾಂಡ್ ಮೇಲೆ ಸಾಲವನ್ನು ತೆಗೆದುಕೊಳ್ಳುವ ಆಯ್ಕೆಯೂ ಇದೆ.
4. ಶುದ್ಧತೆಯ ಸಮಸ್ಯೆ ಇಲ್ಲ, ಅದು ಕಾಗದವಾಗಿರುವುದರಿಂದ ನೀವು ಅದರ ಶುದ್ಧತೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ನೀವು ಭೌತಿಕ ಚಿನ್ನದಲ್ಲಿ ಚಿನ್ನವನ್ನು ಮಾರಾಟ ಮಾಡಲು ಹೋದಾಗ, ಮೊದಲು ಅದರ ಶುದ್ಧತೆಯನ್ನು ಪರಿಶೀಲಿಸಲಾಗುತ್ತದೆ ಮತ್ತು ಆಗಾಗ್ಗೆ ಮಾರಾಟದ ಸಮಯದಲ್ಲಿ ಶುದ್ಧತೆ ಸರಿಯಾಗಿರುವುದಿಲ್ಲ ಅಥವಾ ಅಂತಹದ್ದೇನಾದರೂ ಕಂಡುಬರುತ್ತದೆ.
6. ಮುಕ್ತಾಯದ ನಂತರ, ನೀವು ಚಿನ್ನದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.
7. ಅಲ್ಲದೆ, ಅದನ್ನು ಮನೆಯಲ್ಲಿ ಇಟ್ಟುಕೊಳ್ಳಲು ಯಾವುದೇ ತೊಂದರೆ ಇಲ್ಲ, ಅಂದರೆ, ನೀವು ಅದರ ಸಂಗ್ರಹಣೆ ಮತ್ತು ಸುರಕ್ಷತೆಯ ಬಗ್ಗೆ ಚಿಂತಿಸಬೇಕಾಗಿಲ್ಲ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ