ನವದೆಹಲಿ : ಸದ್ಯ ದೇಶದ ಸಾಮಾನ್ಯ ನಾಗರಿಕರು ಹಣದುಬ್ಬರದ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ದೇಶದ ವಿವಿಧ ಪ್ರದೇಶಗಳಲ್ಲಿನ ಆಹಾರ ಪದಾರ್ಥಗಳ ಬೆಲೆಯಲ್ಲಿ ತುಂಬಾ ವ್ಯತ್ಯಾಸವಿದೆ ಎಂಬುವುದು ನಿಮಗೆ ಗೊತ್ತಾ? ವರದಿ ಪ್ರಕಾರ ಪೋರ್ಟ್ ಬ್ಲೇರ್ ನಲ್ಲಿ ಟೊಮೇಟೊ ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಇಲ್ಲಿ 1 ಕೆಜಿ ಟೊಮೆಟೊ ಬೆಲೆ 135 ರೂ. ದೆಹಲಿಯಲ್ಲಿ ಟೊಮೆಟೊ ಕೆಜಿಗೆ 80 ರೂ.ಗೆ ಮಾರಾಟವಾಗುತ್ತಿದೆ.


COMMERCIAL BREAK
SCROLL TO CONTINUE READING

ಗಗನದತ್ತ ಆಹಾರ ಮತ್ತು ಪಾನೀಯಗಳ ಬೆಲೆ


ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅಗ್ಗದ ಬೆಲೆಗೆ ಟೊಮೆಟೊ(Tomato Price)ವನ್ನು 24 ನವೆಂಬರ್ 2021 ರಂದು ಜೋಧ್‌ಪುರ, ರಾಜಸ್ಥಾನ ಮತ್ತು ಗುಜರಾತ್‌ನ ಬೋಡೆಲಿಯಲ್ಲಿ ಮಾರಾಟ ಮಾಡಲಾಗಿದೆ. ಇಲ್ಲಿ 1 ಕೆಜಿ ಟೊಮೆಟೊ ಬೆಲೆ 23 ರೂಪಾಯಿ. ಆದರೆ ದೇಶದ ಹಮೀರ್‌ಪುರದಲ್ಲಿ ಅಗ್ಗದ ಆಲೂಗಡ್ಡೆ ಮಾರಾಟವಾಗಿದೆ. ಇಲ್ಲಿ ಜನರು ಆಲೂಗಡ್ಡೆಯನ್ನು ಕೆಜಿಗೆ 11 ರೂ. ಇದಲ್ಲದೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕಡಿಮೆ ಬೆಲೆಯ ಈರುಳ್ಳಿ ಇದೆ. ಇಲ್ಲಿ ಈರುಳ್ಳಿ ಬೆಲೆ ಕೆಜಿಗೆ 11 ರೂ. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಈರುಳ್ಳಿ ಕೆಜಿಗೆ 60 ರೂ.ಗೆ ಮಾರಾಟವಾಗುತ್ತಿದೆ.


ಇದನ್ನೂ ಓದಿ : Aadhaar ತೋರಿಸಿ, ಹೊಸ LPG ಗ್ಯಾಸ್ ಸಂಪರ್ಕದ ಜೊತೆಗೆ ಸಬ್ಸಿಡಿ ಪಡೆಯಿರಿ : ಹೇಗೆ ಇಲ್ಲಿದೆ ನೋಡಿ


ಇಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುತ್ತೆ ಸಾಸಿವೆ ಎಣ್ಣೆ 


ದೇಶದ ವಿವಿಧ ಸ್ಥಳಗಳಲ್ಲಿ ಖಾದ್ಯ ತೈಲಗಳ ಬೆಲೆ(Cooking Oil)ಯಲ್ಲಿ ಭಾರಿ ವ್ಯತ್ಯಾಸವಾಗಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಪೋರ್ಟ್ ಬ್ಲೇರ್ 1 ಲೀಟರ್ ಸಾಸಿವೆ ಎಣ್ಣೆ ಪ್ಯಾಕ್ ಅನ್ನು 234 ರೂ.ಗೆ ಮಾರಾಟ ಮಾಡುತ್ತಿದ್ದರೆ, ನಮ್ಮ ರಾಜ್ಯದ ಶಿವಮೊಗ್ಗದಲ್ಲಿ ಸಾಸಿವೆ ಎಣ್ಣೆ 110 ರೂ.ಗೆ ಮಾರಾಟವಾಗುತ್ತಿದೆ. ಲಕ್ನೋದಲ್ಲಿ ಶೇಂಗಾ ಎಣ್ಣೆ ಕೆಜಿಗೆ 265 ರೂ. ಇದ್ದರೆ, ಮೇಘಾಲಯದ ಜೋವಾಯ್ ನಲ್ಲಿ 140 ರೂಪಾಯಿ ಇದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.