ಪಿಎಂ ಕಿಸಾನ್ ಸಮ್ಮಾನ್ ನಿಧಿ 12ನೇ ಕಂತು:  ದೇಶದ ಅನ್ನದಾತ ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಮಹತ್ವದ ಉದ್ದೇಶದಿಂದ ಕೇಂದ್ರ ಸರ್ಕಾರ  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಆರಂಭಿಸಿದೆ. ಈ ಮಹಾತ್ವಾಕಾಂಕ್ಷೆಯ ಯೋಜನೆಯಲ್ಲಿ ರೈತರು ಇದುವರೆಗೂ 11ಕಂತುಗಳನ್ನು ಸ್ವೀಕರಿಸಿದ್ದಾರೆ. ಇದೀಗ ಪಿಎಂ ಕಿಸಾನ್ ಯೋಜನೆಯ 12ನೇ ಕಂತಿಗಾಗಿ ಕಾಯುತ್ತಿದ್ದಾರೆ. ಈ ಯೋಜನೆಯಡಿ ದೇಶಾದ್ಯಂತ 12 ಕೋಟಿಗೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದಾರೆ. 12ನೇ ಕಂತು ಆಗಸ್ಟ್ ಮತ್ತು ನವೆಂಬರ್ ನಡುವೆ ಬರಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತಿಗೆ ಹಲವು ರಾಜ್ಯ ಸರ್ಕಾರಗಳು ಅನುಮೋದನೆ ನೀಡಿವೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಪಿಎಂ ಕಿಸಾನ್ ಯೋಜನೆಯ ಹಣವನ್ನು ನೇರವಾಗಿ ರೈತರ ಖಾತೆಗೆ ಸೇರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವತಿಯಿಂದ ನಿರಂತರವಾಗಿ ಪ್ರಕ್ರಿಯೆ ನಡೆಯುತ್ತಿದೆ. ಈ ಯೋಜನೆಯ ಕಂತನ್ನು ಖಾತೆಗೆ ವರ್ಗಾಯಿಸುವ ಮೊದಲು ರಾಜ್ಯ ಸರ್ಕಾರದ ಅನುಮೋದನೆ ಅಗತ್ಯ. ಈಗಾಗಲೇ ಪಿಎಂ ಕಿಸಾನ್ 12ನೇ ಕಂತಿಗೆ ಕೆಲವು ರಾಜ್ಯ ಸರಕಾರಗಳು ಅನುಮೋದನೆ ನೀಡಿವೆ. ಇನ್ನೂ ಕೆಲವು ರಾಜ್ಯಗಳ ಅನುಮೋದನೆ ಇನ್ನೂ ಬಾಕಿ ಇದೆ.  


ಇದನ್ನೂ ಓದಿ- Kisan Credit Card: ಮನೆಯಲ್ಲಿಯೇ ಕುಳಿತು ಎಸ್‌ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಸುಲಭ ಪ್ರಕ್ರಿಯೆ


ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ನಿಮ್ಮ ಖಾತೆ ಸೇರಿದೆಯೇ? ಈ ರೀತಿ ಪರಿಶೀಲಿಸಿ:-
ಪಿಎಂ ಕಿಸಾನ್ ಯೋಜನೆಯಲ್ಲಿ ನಿಮ್ಮ ಸ್ಟೇಟಸ್ ಅನ್ನು ಪರಿಶೀಲಿಸಲು ಮೊದಲು ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಈ ವೆಬ್‌ಸೈಟ್‌ನಲ್ಲಿ ಸ್ಥಿತಿಯನ್ನು ಪರಿಶೀಲಿಸಿದಾಗ , ನೀವು ವಿಭಿನ್ನ ಸ್ಥಿತಿಯನ್ನು ನೋಡುತ್ತೀರಿ. ಈ ಸ್ಥಿತಿಗಳು ವಿಭಿನ್ನ ಅರ್ಥಗಳನ್ನು ಹೊಂದಿವೆ. ಅಂತಹ ಪರಿಸ್ಥಿತಿಯಲ್ಲಿ, ಅವುಗಳನ್ನು ಓದುವ ಮೂಲಕ ನಿಮ್ಮ ಕಂತುಗಳ ಸ್ಥಿತಿಯನ್ನು ನೀವು ತಿಳಿದುಕೊಳ್ಳಬಹುದು.


ಸ್ಥಿತಿ ಮತ್ತು ಅವುಗಳ ಅರ್ಥ
1. ರಾಜ್ಯವಾರು ಅನುಮೋದನೆಗಾಗಿ ಕಾಯಲಾಗುತ್ತಿದೆ --- ರಾಜ್ಯ ಸರ್ಕಾರದಿಂದ ಅನುಮೋದನೆ ಬಂದಿಲ್ಲ. 
2. ವರ್ಗಾವಣೆಗಾಗಿ ವಿನಂತಿ --- ಇದರರ್ಥ ಫಲಾನುಭವಿಯ ಡೇಟಾವನ್ನು ರಾಜ್ಯವು ಪರಿಶೀಲಿಸಿದೆ ಮತ್ತು ಮೊತ್ತವನ್ನು ವರ್ಗಾಯಿಸಲು ಕೇಂದ್ರವನ್ನು ವಿನಂತಿಸಲಾಗಿದೆ.
3. FTO ರಚಿಸಲಾಗಿದೆ ಮತ್ತು ಪಾವತಿ ದೃಢೀಕರಣವು ಬಾಕಿ ಉಳಿದಿದೆ: ನಿಧಿ ವರ್ಗಾವಣೆ ಪ್ರಕ್ರಿಯೆಯು ಪ್ರಾರಂಭವಾಗಿದೆ, ಕೆಲವೇ ದಿನಗಳಲ್ಲಿ ಮೊತ್ತವನ್ನು ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.


ಇದನ್ನೂ ಓದಿ- EPFO Big Update: ನೌಕರರ ನಿವೃತ್ತಿ ವಯಸ್ಸಿನ ಕುರಿತು ಬಿಗ್ ಅಪ್ಡೇಟ್ ಪ್ರಕಟ! EPFO ಹೇಳಿದ್ದೇನು?


ಮಾಧ್ಯಮ ವರದಿಗಳ ಪ್ರಕಾರ, ಪಿಎಂ ಕಿಸಾನ್ ನಿಧಿಯ 12 ನೇ ಕಂತಿನ ಹಣವು ಖಾತೆಗೆ ಯಾವಾಗ ಬರುತ್ತದೆ ಎಂಬ ಬಗ್ಗೆ ನಿಖರವಾದ ದಿನಾಂಕ ಇನ್ನೂ ತಿಳಿದಿಲ್ಲ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಅರ್ಹ ರೈತರ ಖಾತೆಗೆ ಹಣ ಬರಬಹುದು ಎಂದು ಹೇಳಲಾಗುತ್ತಿದೆ. ಈ ಹಿಂದೆ ಪ್ರಧಾನಿ ಮೋದಿಯವರು 11ನೇ ಕಂತಿನ ಹಣವನ್ನು ರೈತರ ಖಾತೆಗೆ 31 ಮೇ 2022 ರಂದು ವರ್ಗಾಯಿಸಿದ್ದರು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.