ಸರ್ಕಾರಿ ನೌಕರರಿಗೆ ಬಂಪರ್! ತುಟ್ಟಿಭತ್ಯೆಯ ನಂತರ ಈ ಎರಡು ಭತ್ಯೆಗಳಲ್ಲಿ 25% ದಷ್ಟು ಹೆಚ್ಚಳ !
7th pay Commission:2024ರ ಜನವರಿ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರಕಾರಿ ನೌಕರರಿಗೆ ನೀಡುತ್ತಿದ್ದ ತುಟ್ಟಿಭತ್ಯೆ ದರವನ್ನು ಶೇ.50ಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣ ಭತ್ಯೆ ಮೊತ್ತದ ಕುರಿತು ಕೂಡಾ ನಾನಾ ಕಡೆಯಿಂದ ಉಲ್ಲೇಖಗಳು ಬರುತ್ತಿವೆ ಎಂದು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.
7th pay Commission : ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸುವುದರೊಂದಿಗೆ ಶೇ.50ಕ್ಕೆ ಏರಿಸಲಾಗಿದೆ.ಇದು ಜನವರಿ 2024 ರಿಂದ ಜಾರಿಗೆ ಬರಲಿದೆ.ಇದಾದ ನಂತರ ಮಕ್ಕಳ ಶಿಕ್ಷಣ ಭತ್ಯೆ (CEA) ಮತ್ತು ವಸತಿ ಅನುದಾನದಂತಹ ಕೆಲವು ಭತ್ಯೆಗಳನ್ನು ಸಹ 25% ವರೆಗೆ ಪರಿಷ್ಕರಿಸಲಾಗಿದೆ.
ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಿವಿಧ ವಿಭಾಗಗಳಿಂದ ಹಲವು ಅನುಮಾನಗಳು ಹಾಗೂ ಪ್ರಶ್ನೆಗಳು ಎದ್ದಿದ್ದವು.ಇದರ ನಂತರ,ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ನಿಟ್ಟಿನಲ್ಲಿ ಎಲ್ಲಾ ಅನುಮಾನಗಳನ್ನು ನಿವಾರಿಸುವ ಸಲುವಾಗಿ ಸ್ಪಷ್ಟೀಕರಣಗಳನ್ನು ನೀಡಿದೆ.
ಇದನ್ನೂ ಓದಿ : EPFO Rules: ಈ ಷರತ್ತು ಪೂರೈಸಿದರೆ ಪಿಎಫ್ ಖಾತೆದಾರರಿಗೆ ಸಿಗುತ್ತೆ ₹ 50,000 ನೇರ ಪ್ರಯೋಜನ
2024ರ ಜನವರಿ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರಕಾರಿ ನೌಕರರಿಗೆ ನೀಡುತ್ತಿದ್ದ ತುಟ್ಟಿಭತ್ಯೆ ದರವನ್ನು ಶೇ.50ಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣ ಭತ್ಯೆ ಮೊತ್ತದ ಕುರಿತು ಕೂಡಾ ನಾನಾ ಕಡೆಯಿಂದ ಉಲ್ಲೇಖಗಳು ಬರುತ್ತಿವೆ ಎಂದು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.
ನಿಯಮವನ್ನು ಸ್ಪಷ್ಟಪಡಿಸಿದ ಸಾರ್ವಜನಿಕ ಕುಂದುಕೊರತೆಗಳ ಇಲಾಖೆ,"ಪರಿಷ್ಕೃತ ವೇತನ ರಚನೆಯ ಮೇಲಿನ ತುಟ್ಟಿಭತ್ಯೆ ದರವನ್ನು ಪ್ರತಿ ಬಾರಿ 50% ಕ್ಕೆ ಹೆಚ್ಚಿಸಿದಾಗ ಮಕ್ಕಳ ಶಿಕ್ಷಣ ಭತ್ಯೆ ಮತ್ತು ಬೋರ್ಡಿಂಗ್ ಭತ್ಯೆಯ ಮಿತಿಗಳು ಸ್ವಯಂಚಾಲಿತವಾಗಿ 25% ರಷ್ಟು ಹೆಚ್ಚಾಗುತ್ತವೆ." ಎಂದು ಹೇಳಲಾಗಿದೆ.
ಇದನ್ನೂ ಓದಿ : Amazon Great Summer Sale 2024: 40 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಬಂಪರ್ ರಿಯಾಯಿತಿ!
ಮಕ್ಕಳ ಶಿಕ್ಷಣ ಭತ್ಯೆ :
ಮಕ್ಕಳ ಶಿಕ್ಷಣ ಭತ್ಯೆಗೆ ಪ್ರತಿ ತಿಂಗಳು ಮರುಪಾವತಿ ಮೊತ್ತ 2,812.50 (ನಿಶ್ಚಿತ) ಎಂದು ಇಲಾಖೆ ತಿಳಿಸಿದೆ.ಅಲ್ಲದೆ, ಹಾಸ್ಟೆಲ್ ಸಬ್ಸಿಡಿ ಮೊತ್ತವು ತಿಂಗಳಿಗೆ 8,437.50 ರೂ, (fixed) ಇರುತ್ತದೆ.ಸರ್ಕಾರಿ ನೌಕರರು ಮಾಡುವ ನಿಜವಾದ ವೆಚ್ಚವನ್ನು ಲೆಕ್ಕಿಸದೆ ಈ ಮೊತ್ತವನ್ನು ಮಿತಿಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಮಕ್ಕಳ ಆರೈಕೆಗಾಗಿ ವಿಶೇಷ ಭತ್ಯೆ :
ವಿಕಲಚೇತನ ಮಹಿಳೆಯರಿಗೆ ವಿಶೇಷ ಶಿಶುಪಾಲನಾ ಭತ್ಯೆಯನ್ನು ಇಲಾಖೆಯ ಕಚೇರಿಯ ಜ್ಞಾಪಕ ಪತ್ರದಲ್ಲಿ ನಮೂದಿಸಿರುವ ಇತರ ಷರತ್ತುಗಳಿಗೆ ಒಳಪಟ್ಟು ತಿಂಗಳಿಗೆ 3,750 ರೂಪಾಯಿಗೆ ಪರಿಷ್ಕರಿಸಲಾಗಿದೆ.
ಏತನ್ಮಧ್ಯೆ, ಮುಂದಿನ ವೇತನ ಆಯೋಗದ ಬಗ್ಗೆ ಶೀಘ್ರದಲ್ಲೇ ಘೋಷಣೆ ಬರಬಹುದು ಎಂದು ಹೇಳಲಾಗಿದೆ. ಭಾರತೀಯ ರೈಲ್ವೆ ತಾಂತ್ರಿಕ ಮೇಲ್ವಿಚಾರಕರ ಸಂಘ (IRTSA) 8ನೇ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಅಡಿಯಲ್ಲಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯಕ್ಕೆ ಪತ್ರ ಬರೆದಿದೆ.
ಇದನ್ನೂ ಓದಿ : Mahindra XUV 3XO: ಕಡಿಮೆ EMI ಪಾವತಿಸಿ ಮಹೀಂದ್ರಾ XUV 3XO ಮನೆಗೆ ಕೊಂಡೊಯ್ಯಿರಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.