ಬೆಂಗಳೂರು : ಮೂರು ವರ್ಷದಲ್ಲಿ ವಿಧಾನಸಭೆ ಯಲ್ಲು ಚರ್ಚೆ ಮಾಡಿಲ್ಲ, ಈಗ ರಾಜಕೀಯ ಪಾದಯಾತ್ರೆ ಮಾಡ್ತಾ ಇದ್ದಾರೆ. ತಾವು ಏನು ಕೆಲಸ ಮಾಡಿಲ್ಲ ಎನ್ನುವ ಅಪರಾದ ಭಾವ ಕಾಂಗ್ರೆಸ್ ಗೆ ಮೂಡಿದೆ‌. ಆ ಭಾವನೆ ದೂರ ಮಾಡಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ನಗರದ ಪ್ರತಿಕ್ರಿಯೆ ನೀಡಿದ ಅವರು(Basavaraj Bommai), ಕಾವೇರಿ ಮಾನಿಟರಿ ಬೋರ್ಡ್ ಗೆ ಈಗಾಗಲೇ ಪ್ರಸ್ತಾಪ ಹೋಗಿದೆ. ಇದೇ ತಿಂಗಳು ಸುಪ್ರೀಂ ಮುಂದೆ ವಿಚಾರಣೆಗೆ ಬರ್ತಿದೆ, ಅವರಿಗೆ ಬದ್ಧತೆ ಇಲ್ಲ. ಹಿಂದೆ ಕೃಷ್ಣೆಗೆ ಪಾದಯಾತ್ರೆ ಮಾಡಿದ್ರು,  ‌ಜನರ ಮರಳು ಮಾಡಲು ಪಾದಯಾತ್ರೆ ಮಾಡ್ತಿದ್ದಾರೆ. ಜನರು ಮರಳಾಗಲ್ಲ ಎಂದರು.


ಇದನ್ನೂ ಓದಿ : ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ : 'ಹೌದು ಹುಲಿಯಾ' ಎಂದು ಸಿದ್ದರಾಮಯ್ಯಗೆ ಅಭಿಮಾನಿಗಳ ಸ್ವಾಗತ


ಎನ್ ಜಿಟಿ ಇಂದ ಸ್ಟೇ ವೆಕೆಟ್ ಮಾಡಲು ಪ್ರಯತ್ನ ಸಾಗಿದೆ. ಸುಪ್ರೀಂ ಕೋರ್ಟ್(Supreme Court) ಆದೇಶ ಏನು? ಕಾವೇರಿ ನ್ಯಾಯಾದೀಕರಣದ ತೀರ್ಪು ಏನು? ಅಂತ ಅವರಿಗೆ ಗೊತ್ತಿದ್ರೆ, ಈ ಪಾದಯಾತ್ರೆ ಮಾಡ್ತಾ ಇರಲಿಲ್ಲ. ಕಾಂಗ್ರೆಸ್ ಬೆಟ್ಟ ಅಗೆದು ಇಲಿ ಹಿಡಿದವರೆ. ಕೋವಿಡ್ ನಿಯಮ ಇದ್ರು ಪಾದಯಾತ್ರೆ ಮಾಡ್ತಾ ಇದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ನೋಟೀಸ್ ನೀಡಿದ್ದೇವೆ ಎಂದು ಹೇಳಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.