ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ನಡುವೆಯೇ ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ. ನೈಸರ್ಗಿಕ ಅನಿಲಗಳ ಬೆಲೆ ಏರಿಕೆ ಪರಿಣಾಮ ಸಿಎನ್‌ಜಿ ಮತ್ತು ಪಿಎನ್ ಜಿ ದರ(CNG PNG Price)ದಲ್ಲಿಯೂ ಏರಿಕೆಯಾಗಿದೆ. ಇದು ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯನ್ನುಂಟು ಮಾಡಲಿದೆ.


COMMERCIAL BREAK
SCROLL TO CONTINUE READING

ಸಿಎನ್‌ಜಿ(Compressed Natural Gas)ದರ ಪ್ರತಿ ಕೆಜಿಗೆ 2.28 ರೂ. ಮತ್ತು ಪೈಪ್ ಮೂಲಕ ಮನೆಗಳಿಗೆ ಪೂರೈಕೆಯಾಗುತ್ತಿರುವ ಅಡುಗೆ ಅನಿಲ(Piped Natural Gas)ದರದಲ್ಲಿ 2.10 ರೂ.ನಷ್ಟು ಏರಿಕೆ ಮಾಡಲಾಗಿದೆ. ಇಂದಿನಿಂದಲೇ (ಅಕ್ಟೋಬರ್ 2) ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ದೇಶದ ಮಹಾನಗರಗಳಲ್ಲಿ ಪರಿಷ್ಕೃತ ದರವು ಜಾರಿಗೆ ಬರಲಿದೆ. ದೆಹಲಿ, ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ವಾಸಿಸುವವರು ಈಗ ಸಿಎನ್‌ಜಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ 2.55 ರೂ.  ಹೆಚ್ಚಿಸಲಾಗಿದೆ.


ಇದನ್ನೂ ಓದಿ: How To Earn From Facebook: ಫೇಸ್‌ಬುಕ್‌ನಿಂದ ಗಳಿಸುವ ಅವಕಾಶ, ಭಾರತದಲ್ಲಿ ಬಿಡುಗಡೆಯಾಗಿದೆ ಈ ಅದ್ಭುತ ವೈಶಿಷ್ಟ್ಯ


ಪ್ರತಿ ಕೆಜಿಗೆ ಎಷ್ಟು ರೂ. ಹೆಚ್ಚಳ ಮಾಡಲಾಗಿದೆ..?


ಇಲ್ಲಿಯವರೆಗೆ ದೆಹಲಿಯಲ್ಲಿ ಪ್ರತಿ ಕೆಜಿ ಸಿಎನ್‌ಜಿ(CNG Price)ಗೆ 45.20 ರೂ ಪಾವತಿಸಬೇಕಾಗಿತ್ತು. ಈಗ ಸಿಎನ್‌ಜಿಯ ಹೊಸ ದರ ಪ್ರತಿ ಕೆಜಿಗೆ 47.48 ರೂ. ಆಗಲಿದೆ. ಇದೇ ಸಮಯದಲ್ಲಿ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಸಿಎನ್‌ಜಿ ಪ್ರತಿ ಕೆಜಿಗೆ 2.55 ರೂ.ಗಳಷ್ಟು ದುಬಾರಿಯಾಗಿದೆ. ಅಂದರೆ ಈಗ ನೋಯ್ಡಾ, ಗಾಜಿಯಾಬಾದ್ ಮತ್ತು ಗ್ರೇಟರ್ ನೋಯ್ಡಾದಲ್ಲಿ ಪ್ರತಿ ಕೆಜಿಗೆ 53.45 ರೂ. ಆಗಲಿದ್ದು, ಹೊಸ ಬೆಲೆಗಳು ಶನಿವಾರ ಬೆಳಿಗ್ಗೆಯಿಂದಲೇ ಅನ್ವಯವಾಗಲಿದೆ ಎಂದು ತಿಳಿದುಬಂದಿದೆ.


ನೈಸರ್ಗಿಕ ಅನಿಲಗಳ ಬೆಲೆಗಳಲ್ಲಿ ಹೆಚ್ಚಳ


ಕೇಂದ್ರ ಸರ್ಕಾರ ದೇಶೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲಗಳ ಬೆಲೆ(Natural Gas Price)ಯನ್ನು ಶೇ.62 ರಷ್ಟು ಏರಿಕೆ ಮಾಡಿದ್ದರ ಪರಿಣಾಮ ಇನ್ ಪುಟ್ ಖರ್ಚುಗಳನ್ನು ಸರಿದೂಗಿಸಲು ಬೆಲೆ ಏರಿಕೆ ಮಾಡುತ್ತಿರುವುದಾಗಿ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ಮಾಹಿತಿ ನೀಡಿದೆ. ಮೊದಲು ನೈಸರ್ಗಿಕ ಅನಿಲದ ಬೆಲೆಯನ್ನು ಶೇ.62 ರಷ್ಟು ಹೆಚ್ಚಿಸಲಾಗಿತ್ತು. ಇದರೊಂದಿಗೆ CNG, PNG ಕೂಡ ದುಬಾರಿಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು.


ಏಪ್ರಿಲ್ 2019ರ ನಂತರ ಇದು ಮೊದಲ ಬಾರಿ ಆಗುತ್ತಿರುವ ಬೆಲೆ ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯಿಂದಾಗಿ ಗ್ಯಾಸ್ ಬೆಲೆಗಳು ಪ್ರಮಾಣಿತವೆಂದು ಪರಿಗಣಿಸಲಾಗಿದೆ. ಪೆಟ್ರೋಲಿಯಂ ಸಚಿವಾಲಯ(Ministry of Petroleum & Natural Gas)ದ ಪಿಪಿಎಸಿ ಗುರುವಾರ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್ ಜಿಸಿ), ಆಯಿಲ್ ಇಂಡಿಯಾ ಲಿಮಿಟೆಡ್ ಗೆ ನೀಡಲಾಗಿರುವ ಕ್ಷೇತ್ರಗಳಿಂದ ಉತ್ಪಾದಿಸುವ ನೈಸರ್ಗಿಕ ಅನಿಲದ ಬೆಲೆ ಅಕ್ಟೋಬರ್ 1 ರಿಂದ ಮುಂದಿನ 6 ತಿಂಗಳವರೆಗೆ ಪ್ರತಿ ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ ಗೆ 2.90 ಅಮೆರಿಕನ್ ಡಾಲರ್ ಇರುತ್ತದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: SBI Car Loan: 7.75% ಬಡ್ಡಿ ದರದಲ್ಲಿ ಕಾರು ಸಾಲ ನೀಡುತ್ತಿದೆ ಎಸ್‌ಬಿಐ


ವಿದ್ಯುತ್ ದರದ ಮೇಲೂ ಪರಿಣಾಮ ಬೀರುತ್ತದೆಯೇ?


ಉದ್ಯಮದ ಮೂಲಗಳ ಪ್ರಕಾರ ಗ್ಯಾಸ್ ಬೆಲೆ ಏರಿಕೆಯಿಂದ ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ CNG ಮತ್ತು ಪೈಪ್ಡ್ LPG ಬೆಲೆ ಶೇ.10-11ರಷ್ಟು ಹೆಚ್ಚಾಗುತ್ತದೆ. ಈ ಹೆಚ್ಚಳವು ಅನಿಲವನ್ನು ಇಂಧನವಾಗಿ ಬಳಸುವ ವಿದ್ಯುತ್ ಸ್ಥಾವರಗಳಿಂದ ಉತ್ಪಾದಿಸುವ ವಿದ್ಯುತ್ ವೆಚ್ಚವನ್ನು ಹೆಚ್ಚಿಸುತ್ತದೆ. ಆದಾಗ್ಯೂ ಇದು ಗ್ರಾಹಕರ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಏಕೆಂದರೆ ಗ್ಯಾಸ್ ಆಧಾರಿತ ಸ್ಥಾವರಗಳಿಂದ ಉತ್ಪತ್ತಿಯಾಗುವ ವಿದ್ಯುತ್ ಪಾಲು ಹೆಚ್ಚಿಲ್ಲ.


ಆಟೋ ಬಾಡಿಗೆ ದರವೂ ಏರಿಕೆಯಾಗಲಿದೆ


ಸಿಎನ್ ಜಿ ದರ ಏರಿಕೆಯಿಂದ ಆಟೋ ಬಾಡಿಗೆ ದರವೂ ಏರಿಕೆಯಾಗಲಿದೆ. ಪ್ರತಿ ಆಟೋ ಬಾಡಿಗೆ ಕಿ.ಮೀ ಗೆ 6 ಪೈಸೆಯಷ್ಟ, ಟ್ಯಾಕ್ಸಿ ಗಳಿಗೆ 11 ಪೈಸೆಯಷ್ಟು ಮತ್ತು ಬಸ್ ಗಳಲ್ಲಿ ಪ್ರತಿ ಕಿ.ಮೀ ಗೆ 1.65 ಪೈಸೆಯಷ್ಟು ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.