Aadhaar Card Update : ಆಧಾರ್ ಕಾರ್ಡ್ ಅನ್ನು ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಒಂದು. ಆಧಾರ್ ಕಾರ್ಡ್ ಮೂಲಕ ಅನೇಕ ಕೆಲಸಗಳನ್ನು ಪೂರೈಸುವುದು ಸುಲಭವಾಗುತ್ತದೆ. ಅದೇ ಸಮಯದಲ್ಲಿ, ಅನೇಕ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಅನ್ನು ಬಳಸಲಾಗುತ್ತದೆ. ಜನರು ತಮ್ಮ ಆಧಾರ್ ಕಾರ್ಡ್ ಅನ್ನು ಕಾಲ ಕಾಲಕ್ಕೆ ಅಪ್ಡೇಟ್ ಮಾಡುತ್ತಿರಬೇಕು. ಆಧಾರ್ ದಾಖಲೆಗಳ ಆನ್‌ಲೈನ್ ನವೀಕರಣವನ್ನು ಜೂನ್14, 2023ರವರೆಗೆ  ಉಚಿತವಾಗಿ ಮಾಡುವ ಅವಕಾಶವನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ನೀಡಿದೆ.  ಸಾಮಾನ್ಯವಾಗಿ, ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಲು ಸುಮಾರು 50 ಅಥವಾ 100 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ  UIDAI ನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ವಿವರಗಳನ್ನು ಅಪ್ಡೇಟ್ ಮಾಡುವುದು ಜೂನ್ 14 ರವರೆಗೆ ಉಚಿತವಾಗಿರುತ್ತದೆ.


COMMERCIAL BREAK
SCROLL TO CONTINUE READING

ಆಧಾರ್ ಕಾರ್ಡ್ ಅಪ್ಡೇಟ್ ಎಲ್ಲಿ ಮಾಡಬಹುದು ?  : 
ಈ ಸೇವೆಯು ಮೈ ಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಉಚಿತವಾಗಿರಲಿದೆ. ಭೌತಿಕ ಆಧಾರ್ ಕೇಂದ್ರಗಳಲ್ಲಿ  50  ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ಯುಐಡಿಎಐ ಸ್ಪಷ್ಟಪಡಿಸಿದೆ. ವಾಸ್ತವವಾಗಿ, UIDAI ಮೂಲಕ, ಆಧಾರ್ ಕಾರ್ಡ್ ಅನ್ನು ನವೀಕರಿಸಲು ಪ್ರೋತ್ಸಾಹಿಸಲಾಗುತ್ತಿದೆ. 10 ವರ್ಷಗಳಷ್ಟು ಹಳೆಯ ಆಧಾರ್ ಕಾರ್ಡ್ ಅಥವಾ ಯಾರ ಆಧಾರ್ ಕಾರ್ಡ್ ಅನ್ನು ಹತ್ತು ವರ್ಷಗಳಿಂದ ನವೀಕರಿಸಲಾಗಿಲ್ಲ ಅವರೂ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಲೇ ಬೇಕು.   


ಇದನ್ನೂ ಓದಿ : Gold Price: ಚಿನ್ನ ದರ 1500 ರೂ. ಇಳಿಕೆ: ಸಾರ್ವಕಾಲಿಕ ಕುಸಿತದ ಬಳಿಕ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ಗೊತ್ತಾ?


ಆನ್‌ಲೈನ್‌ನಲ್ಲಿ ನವೀಕರಿಸುವುದು ಹೇಗೆ : 
- ಆಧಾರ್ ಸಂಖ್ಯೆಯನ್ನು ಬಳಸಿಕೊಂಡು https://myaadhaar.uidai.gov.in/ ಗೆ ಲಾಗಿನ್ ಮಾಡಿ .
- ಪ್ರೋಸೀಡ್ ಟು ಅಡ್ರೆಸ್ ಅಪ್ಡೇಟ್ ಆಯ್ಕೆಯನ್ನು ಆರಿಸಿ.
-ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
- ಇದರ ನಂತರ  'ಡಾಕ್ಯುಮೆಂಟ್ ಅಪ್ಡೇಟ್ " ಮೇಲೆ ಕ್ಲಿಕ್ ಮಾಡಬೇಕು.
- ಇದರ ನಂತರ, ಯಾವುದೇ ರೀತಿಯ ಅಪ್ಡೇಟ್ ಮಾಡಬಹುದಾಗಿದೆ. 
- ಅಂತಿಮವಾಗಿ ಸಬ್ಮಿಟ್ ಬಟನ್ ಆಯ್ಕೆಮಾಡಿ.
-  ಡಾಕ್ಯುಮೆಂಟ್‌ಗಳನ್ನು  ಅಪ್ಡೇಟ್ ಮಾಡಲು ಅದರ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
-  ಆಧಾರ್ ಅಪ್‌ಡೇಟ್ ವಿನಂತಿಯನ್ನು ಸ್ವೀಕರಿಸಲಾಗುತ್ತದೆ ಮತ್ತು 14 ಅಂಕಿಗಳ ಅಪ್‌ಡೇಟ್ ವಿನಂತಿ ಸಂಖ್ಯೆ (URN) ಅನ್ನು ರಚಿಸಲಾಗುತ್ತದೆ.


ಈ URN ಅನ್ನು ಬಳಸಿಕೊಂಡು ಆಧಾರ್ ವಿಳಾಸದ ನವೀಕರಣದ ಸ್ಥಿತಿಯನ್ನು ಪರಿಶೀಲಿಸಬಹುದು. ನಂತರ ನೀವು ಅಪ್ಡೇಟ್ ಮಾಡಿದ  ಆವೃತ್ತಿಯನ್ನು ಡೌನ್‌ಲೋಡ್ ಮಾಡಬಹುದು.   ಪ್ರಿಂಟೆಡ್ ಆಧಾರ್ ಕಾರ್ಡ್ ಅನ್ನು ಪಡೆಯಬಹುದು.
 
ಇದನ್ನೂ ಓದಿ : 
ವರ್ಷದ ಬಳಿಕ ಮತ್ತೆ ಏರಿಕೆಯಾದ ಪೆಟ್ರೋಲ್, ಡಿಸೇಲ್ ಬೆಲೆ ! ನಿಮ್ಮ ನಗರದಲ್ಲಿ ಎಷ್ಟಿದೆ ತಿಳಿದುಕೊಳ್ಳಿ ತೈಲ ಬೆಲೆ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ