ಬೆಂಗಳೂರು : ಮಾರ್ಚ್ ತಿಂಗಳು ಪ್ರಾರಂಭವಾಗಿದೆ. ಈ ತಿಂಗಳು ಹಣಕ್ಕೆ ಸಂಬಂಧಿಸಿದ ಅನೇಕ ಕಾರ್ಯಗಳನ್ನು ಪೂರೈಸಬೇಕಾಗುತ್ತದೆ.  31 ರೊಳಗೆ ಈ  ಕೆಲಸವನ್ನು ಇತ್ಯರ್ಥಪಡಿಸಿಕೊಳ್ಳದಿದ್ದರೆ, ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಬೇಕಾಗಬಹುದು. ಈ ತಿಂಗಳ ಅಂತ್ಯದೊಳಗೆ ಕೆಲವು ಪ್ರಮುಖ ಕೆಲಸವನ್ನು ಮಾಡಿ ಮುಗಿಸದಿದ್ದರೆ, ನಷ್ಟ ಅನುಭವಿಸಬೇಕಾಗಿ ಬರಬಹುದು. 


COMMERCIAL BREAK
SCROLL TO CONTINUE READING

ಪ್ರಧಾನ ಮಂತ್ರಿ ವಯ ವಂದನಾ ಯೋಜನೆ :
ನೀವು ಈ ಸರ್ಕಾರಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಬಗ್ಗೆ  ಯೋಚಿಸುತ್ತಿದ್ದರೆ, ಇದು ಕೊನೆಯ ಅವಕಾಶವಾಗಿರಲಿದೆ. ಈ ಯೋಜನೆಯು 60 ವರ್ಷ ವಯಸ್ಸಿನ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.  ಈ ಯೋಜನೆಯಲ್ಲಿ ಸರಕಾರದಿಂದ ಪಿಂಚಣಿ ಸಿಗುತ್ತದೆ. ಈ ಯೋಜನೆಯು ಮಾರ್ಚ್ 31, 2023 ರ ನಂತರ ಕೊನೆಗೊಳ್ಳುತ್ತದೆ. ಆದ್ದರಿಂದ ಮಾರ್ಚ್ ತಿಂಗಳಲ್ಲಿ ಈ ಯೋಜನೆಗೆ ಹೂಡಿಕೆ ಮಾಡಬಹುದು ಎಂದು ಸರ್ಕಾರ ತಿಳಿಸಿದೆ. 


ಇದನ್ನೂ ಓದಿ : ಚೀನಾದಿಂದ ಉತ್ಪಾದಕರನ್ನು ಸೆಳೆಯಬಲ್ಲ ರಾಷ್ಟ್ರಗಳು


SBI ಸ್ಕೀಮ್ ನಲ್ಲಿ ಹೂಡಿಕೆ :
SBI ಸ್ಕೀಮ್ ಮೂಲಕ ಹೆಚ್ಚಿನ ಬಡ್ಡಿ ಪಡೆಯುವ ಇರಾದೆಯಿದ್ದರೆ  ಇದು  ಕೊನೆಯ ಅವಕಾಶವಾಗಿರಲಿದೆ. ಎಸ್‌ಬಿಐನ ಹೊಸ ಎಫ್‌ಡಿ ಸ್ಕೀಮ್ ಅಮೃತ್ ಕಲಾಶ್‌ನಲ್ಲಿ, ಶೇಕಡಾ 7.6 ರ ದರದಲ್ಲಿ ಬಡ್ಡಿಯನ್ನು ಪಡೆಯುವುದು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ಕೇವಲ 400 ದಿನಗಳವರೆಗೆ ಹೂಡಿಕೆ ಮಾಡಬೇಕು.


ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ : 
ಆಧಾರ್ ಜೊತೆಗೆ ಪ್ಯಾನ್ ಲಿಂಕ್ ಮಾಡಲು ಮಾರ್ಚ್ 31 ರವರೆಗೆ ಮಾತ್ರ ಅವಕಾಶವಿದೆ. ಇದಕ್ಕಾಗಿ ಲೇಟ್ ಫೀಸ್ ಪಾವತಿಸಬೇಕಾಗುತ್ತದೆ. ಆದರೆ ಅದನ್ನು 31 ನೇ ದಿನಾಂಕದೊಳಗೆ ಲಿಂಕ್ ಮಾಡಲೇ ಬೇಕು. ಇಲ್ಲವಾದರೆ ಆದಾಯ ತೆರಿಗೆ ಪಾವತಿಸಲು ಸಾಧ್ಯವಾಗುವುದಿಲ್ಲ. 


ಟ್ಯಾಕ್ಸ್ ಪ್ಲಾನಿಂಗ್ : 
ಆರ್ಥಿಕ ವರ್ಷದಲ್ಲಿ ತೆರಿಗೆ ಉಳಿಸಲು ಈಗಲೇ ಪ್ಲಾನ್ ಮಾಡಬೇಕಾಗುತ್ತದೆ. ಇದರ ನಂತರ, ಯಾವುದೇ ತೆರಿಗೆ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಅದರ ಮೇಲಿನ ಕಡಿತದ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ.  ಇದಕ್ಕಾಗಿ PPF, NPS, ಸುಕನ್ಯಾ ಸಮೃದ್ಧಿ ಮುಂತಾದ ಹಲವು ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು. 


ಇದನ್ನೂ ಓದಿ : Adani stocks : ಅದಾನಿ ಷೇರುಗಳಿಂದ 2 ದಿನದಲ್ಲಿ ₹3,100 ಕೋಟಿ ಲಾಭ ಪಡೆದ ಎನ್‌ಆರ್‌ಐ!


ಮ್ಯೂಚುವಲ್ ಫಂಡ್ ಸ್ಕೀಮ್ : 
ಮ್ಯೂಚುವಲ್ ಫಂಡ್ ಸ್ಕೀಮ್‌ನಲ್ಲಿ ಇನ್ನೂ ನಾಮಿನೇಷನ್ ಮಾಡದಿದ್ದರೆ, ಈ ಕೆಲಸವನ್ನು ಮಾರ್ಚ್ 31 ರೊಳಗೆ ಪೂರ್ಣಗೊಳಿಸಬೇಕು. ಇದನ್ನು ಅಪ್ಡೇಟ್ ಮಾಡಲು ಫಂಡ್ ಹೌಸ್‌ಗಳು ಎಲ್ಲಾ ಹೂಡಿಕೆದಾರರಿಗೆ ಸೂಚಿಸಿವೆ. ನೀವು ನಾಮಿನೇಷನ್ ಮಾಡದೇ ಹೋದಲ್ಲಿ ಮ್ಯೂಚುವಲ್ ಫಂಡ್ ಫೋಲಿಯೊವನ್ನು ಫ್ರೀಜ್ ಮಾಡಲಾಗುತ್ತದೆ. ಆದ್ದರಿಂದ ಮಾರ್ಚ್ 31 ರೊಳಗೆ ಈ ಕೆಲಸವನ್ನು ಪೂರ್ಣಗೊಳಿಸಬೇಕು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.