Chillies Quantity : 3,577 ಚೀಲಗಳು ಮಾರಾಟಕ್ಕೆ ಇಡಲಾಗಿತ್ತು. ಇವುಗಳಲ್ಲಿ ಕಡ್ಡಿ, ಡಬ್ಬಿ & ಗುಂಟೂರು ತಳಿಯ ಮೆಣಸಿನಕಾಯಿ ಮಾರಾಟವಾಗಿದೆ. ಈ ಮಧ್ಯೆ ಕಳೆದೆ 2 ವರ್ಷಗಳ ಮಾರುಕಟ್ಟೆ ನೋಡಿದರೆ ಈ ವರ್ಷ ಉತ್ತಮ ವಾತಾವರಣವಿದೆ. ಪ್ರಸ್ತುತ ವರ್ಷ ಎಪ್ರಿಲ್‌  ಮತ್ತು ಮೇ ತಿಂಗಳಲ್ಲಿ ಅತ್ಯಧಿಕ ಸಂಖ್ಯೆ ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಯಲ್ಲಿ ಆವಕವಾಗಿದ್ದವು. 


COMMERCIAL BREAK
SCROLL TO CONTINUE READING

ಇನ್ನು ದರ ಕಡಿಮೆಯಾದಾಗ ರೈತರು ತಮ್ಮ ಮೆಣಸಿನಕಾಯಿ ಚೀಲವನ್ನ ಬ್ಯಾಡಗಿ ನಗರದಲ್ಲಿರುವ ಶೀಥಲಿಕರಣ ಗೋದಾಮಿನಲ್ಲಿಸಿದ್ದರು. ನಗರದ ಸುಮಾರು 30 ಕೋಲ್ಟ್ ಸ್ಟೋರೇಜ್‌ಗಳಲ್ಲಿ ಮೆಣಸಿನಕಾಯಿ ಚೀಲ ರೈತರು ಬರ್ತಿ ಮಾಡಿದ್ದರು. ಇದೀಗ ರೈತರು ಈ ಶೀಥಲಿಕರಣ ಘಟಕದಲ್ಲಿರುವ ಮೆಣಸಿನಕಾಯಿ ಚೀಲಗಳನ್ನು ಮಾರುಕಟ್ಟೆಗೆ ತಂದು ಮಾರಾಟಕ್ಕೆ ಇಡುತ್ತಿದ್ದಾರೆ. 


ತಾವು ತಂದು ಶೀಥಲಿಕರಣ ಘಟಕದಲ್ಲಿರಿಸಿದ ಮೆಣಸಿನಕಾಯಿ ಚೀಲಗಳಲ್ಲಿ ಕಡಿಮೆ ಸಂಖ್ಯೆ ಚೀಲಗಳನ್ನು ರೈತರು ಮಾರಾಟಕ್ಕೆ ಇಡುತ್ತಿದ್ದಾರೆ. ಮಾರಾಟಕ್ಕೆ ಇಟ್ಟ ಚೀಲಗಳಿಗೆ ಉತ್ತಮ ದರ ಸಿಕ್ಕರೆ ಉಳಿದ ಚೀಲಗಳನ್ನು ಮಾರಾಟ ಮಾಡುವ ಮೂಲಕ ರೈತರು ಲಾಭ ಪಡೆಯುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಡಿಲಕ್ಸ್ ಮೆಣಸಿನಕಾಯಿ ಆವಕ ಕಡಿಮೆಯಿದೆ. 


ಅದನ್ನ ಬಿಟ್ಟರೇ 2ನೇ ಕ್ವಾಲಿಟಿ ಮತ್ತು 3ನೇ ಕ್ವಾಲಿಟಿ ಮೆಣಸಿನಕಾಯಿ ಹೆಚ್ಚಿನ ಪ್ರಮಾಣದಲ್ಲಿದೆ. ಪ್ರಸ್ತುತ ವರ್ಷ ಸುರಿದ ಸತತ ಮಳೆಯಿಂದ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮವಾಗಿಲ್ಲ ಎನ್ನುತ್ತಾರೆ ವರ್ತಕರು. 


ಇನ್ನು, ಬ್ಯಾಡಗಿ ಮೆಣಸಿನಕಾಯಿ ಕಡ್ಡಿ, ಡಬ್ಬಿ ಮತ್ತು ಡಿಲಕ್ಸ್ ತಳಿಗಳು ಬೆಳೆಯುವದು ಕರಿಮಣ್ಣಿನಲ್ಲಿ. ಧಾರವಾಡ ಕುಂದಗೋಳ  ಮತ್ತು ಗದಗ ಜಿಲ್ಲೆಯಲ್ಲಿ ಹಲವು ರೈತರು ಈ ತಳಿಯ ಮೆಣಸಿನಕಾಯಿ ಬೆಳೆಯುತ್ತಾರೆ. ಈ ಬೆಳೆಗೆ ಇದೀಗ ಉತ್ತಮ ಮಳೆಯಾಗಿದ್ದು ಬರುವ ಸೀಜನ್‌ನಲ್ಲಿ ಅತಿಹೆಚ್ಚು ಮೆಣಸಿನಕಾಯಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. 


ಇದನ್ನೂ ಓದಿ-ರೈತರ ಆದಾಯ ಹೆಚ್ಚಿಸಲು ಸರ್ಕಾರ ಕೈಗೊಂಡಿದೆ ಈ ಕ್ರಮ, ಈ ಕೆಲಸಕ್ಕೆ ಸಿಗಲಿದೆ 2.5 ಲಕ್ಷ ರೂ.ಗಳು!


ಇನ್ನು ಹಾವೇರಿ ಜಿಲ್ಲೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಪ್ರಮುಖವಾಗಿ ತುಂಗಭದ್ರಾ ಡ್ಯಾಮ್  ಮತ್ತು  ಆಲಮಟ್ಟಿ ಡ್ಯಾಮ್ ಭರ್ತಿಯಾದರೆ ಚನ್ನಾಗಿ ಬೆಳೆ ಬಂದು, ಮೆಣಸಿನಕಾಯಿ ಆವಕ ಅಧಿಕವಾಗುತ್ತೆ. ಇನ್ನು ಪ್ರಸ್ತುತ ವರ್ಷ ಈ ಎರಡು ಡ್ಯಾಮ್‌ಗಳು ಪ್ರತಿಶತ 85 ರಷ್ಟು ಭರ್ತಿಯಾಗಿವೆ.


ಈ ಹಿನ್ನೆಲೆ ಮೆಣಸಿನಕಾಯಿ ಬೆಳೆಗೆ ಯಾವುದೇ ರೋಗಗಳು ಕಾಣಿಸಿಕೊಳ್ಳದಿದ್ದರೆ ಉತ್ತಮ ಫಸಲು ಬರಲಿದೆ. ಶ್ರಾವಣ ಮಾಸ ಆರಂಭವಾಗಿದ್ದು, ಹಬ್ಬಗಳು ಸರತಿಯಲ್ಲಿ ಆಗಮಿಸುತ್ತವೆ ಈ ದಿನಗಳಲ್ಲಿ ಮೆಣಸಿನಕಾಯಿಗೆ ಹೆಚ್ಚು ಬೇಡಿಕೆ ಬರಲಿದೆ. ಇದರಿಂದ ಮೆಣಸಿನಕಾಯಿಗೆ ಸಹ ಹಚ್ಚು ಬೆಲೆ ಬರುವ ಸಾಧ್ಯತೆ  ಇದೆ. 


ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ 55 ಸಾವಿರದಿಂದ 60 ಸಾವಿರದವರೆಗೆ ಇದೆ. ಕೆಡಿಎಲ್ ಬ್ಯಾಡಗಿ 48 ಸಾವಿರದಿಂದ 54 ಸಾವಿರ ರೂಪಾಯಿವರೆಗೆ ಇದೆ ಎಂದು ವರ್ತಕರು ತಿಳಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯ ಅಷ್ಟೇ ಅಲ್ದೆ, ವಿಶ್ವದಲ್ಲಿ ಅತ್ಯಾಧುನಿಕ  ಮತ್ತು ರೈತರಿಗೆ ಪ್ರಾಧ್ಯಾನ್ಯತೆ ನೀಡುವ ಮಾರುಕಟ್ಟೆ ಬ್ಯಾಡಗಿದಾಗಿದೆ. 


ಈ ಮಾರುಕಟ್ಟೆಯಲ್ಲಿ ಡಬ್ಬಿ ಮೆಣಸಿನಕಾಯಿ ಹಿಡಿದು ಪ್ರತಿ ಮೆಣಸಿನಕಾಯಿ ಬೆಲೆಗೆ ಯೋಗ್ಯ ದರ ದೊರೆಯುತ್ತಿದೆ. ಈ ಕಾರಣ ಮೆಣಸಿನಕಾಯಿ ಬೆಳೆದ ರೈತರು ಈ ಮಾರುಕಟ್ಟೆಯತ್ತ ಸಂತೋಷದಿಂದ ಬರುತ್ತಾರೆ.


ಇದನ್ನೂ ಓದಿ-ನೀವೂ ಅತಿ ಹೆಚ್ಚು ಆನ್ಲೈನ್ ಶಾಪಿಂಗ್ ಮಾಡುತ್ತೀರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.